The Empire: ಗೇಮ್ ಆಫ್ ಥ್ರೋನ್ಸ್ ಜತೆ ದಿ ಎಂಪೈರ್‌ ವೆಬ್‌ ಸರಣಿ ಹೋಲಿಕೆ ಸರಿಯಲ್ಲ: ಕುನಾಲ್ ಕಪೂರ್​

ಡಿಸ್ನಿ ಪ್ಲಸ್​ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ‘ದಿ ಎಂಪೈರ್’ ವೆಬ್​ ಸರಣಿಯಲ್ಲಿ ವಿವಾದಗಳ ಜೊತೆಗೆ ಬೇರೆ ವಿಷಯಗಳಿಂದಲೂ ಸದ್ದು ಮಾಡುತ್ತಿದೆ. ಇನ್ನು ಈ ವೆಬ್ ಸರಣಿಯನ್ನು ನೆಟ್ಟಿಗರು ಗೇಮ್​ಆಫ್​ ಥ್ರೋನ್ಸ್​ ಸರಣಿಗೆ ಹೋಲಿಕೆ ಮಾಡುತ್ತಿದ್ದು, ಈ ಕುರಿತಾಗಿ ಕುನಾಲ್ ಕಪೂರ್​ ಈಗ ಹೇಳಿಕೆ ನೀಡಿದ್ದಾರೆ.

ನಟ ಕುನಾಲ್ ಕಪೂರ್

ನಟ ಕುನಾಲ್ ಕಪೂರ್

  • Share this:
ನಟಿಸಿರುವ ಹೊಸ ವೆಬ್ ಸೀರಿಸ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಬಾಲಿವುಡ್ ನಟ ಎಂದರೆ ನಟ ಕುನಾಲ್ ಕಪೂರ್ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಬಿಡುಗಡೆಯಾದಂತಹ ಹೊಸ ವೆಬ್ ಸರಣಿ ‘ದಿ ಎಂಪೈರ್’ ತುಂಬಾನೇ ಸುದ್ದಿಯಲ್ಲಿದೆ. ನಟ ಕುನಾಲ್ ಕಪೂರ್​ ಈ ವೆಬ್ ಸರಣಿಯಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಒಟಿಟಿ ವೇದಿಕೆಯ ಮೂಲಕ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗುತ್ತಿದೆ. ಈ ಸರಣಿಯನ್ನು ತುಂಬಾನೇ ವೈಭವಪೂರಿತವಾಗಿ ಚಿತ್ರೀಕರಣ ಮಾಡಿದ್ದನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೊಗಳಿದ್ದಾರೆ. ಆದರೆ ನಟ ಕುನಾಲ್  ಕಪೂರ್​ ತಾವು ನೀಡಿದ ಹೇಳಿಕೆಯಿಂದಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಈ ಎಲ್ಲ ಪ್ರಶಂಸೆಗಳ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ‘ದಿ ಎಂಪೈರ್’ ವೆಬ್ ಸರಣಿಯನ್ನು ಎಚ್‌ಬಿಒದಲ್ಲಿ 8 ಸೀಸನ್‌ಗಳಲ್ಲಿ ಪ್ರಸಾರವಾದ ಜನಪ್ರಿಯವಾದಂತಹ ‘ಗೇಮ್ ಆಫ್ ಥ್ರೋನ್ಸ್’ಗೆ ಹೋಲಿಕೆ ಮಾಡಿರುವುದು ಗಮನ ಸೆಳೆದಿದೆ. ಇದನ್ನು ಕೇಳಿದ ಕುನಾಲ್ ಕಪೂರ್​ ಒಂದು ಮನೋರಂಜನೆ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಹೋಲಿಕೆ ಮಾಡಿದ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.








View this post on Instagram






A post shared by Kunal Kapoor (@kunalkkapoor)






ಕುನಾಲ್  ಕಪೂರ್​ ಅವರನ್ನು ಈ ಹೋಲಿಕೆಗಳ ಬಗ್ಗೆ ಕೇಳಿದಾಗ, ಪ್ರತಿಕ್ರಿಯಿಸಿರುವ ಅವರು "ಈ ರೀತಿಯಾಗಿ ಹೋಲಿಕೆ ಮಾಡುವುದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ‘ಗೇಮ್ ಆಫ್ ಥ್ರೋನ್ಸ್’ ಒಂದು ಅದ್ಭುತವಾದ ಚಿತ್ರವಾಗಿದ್ದು ಅದನ್ನು ಅದೇ ತರಹದ ಬೇರೆ ಚಿತ್ರಗಳಿಗೆ ಹೋಲಿಸಿದರೆ ಉತ್ತಮ” ಎಂದಿದ್ದಾರೆ.

ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

“ಇಂತಹ ಹೋಲಿಕೆ ದೊಡ್ಡ ದುರಂತ ಎಂದರೆ ತಪ್ಪಾಗಲಾರದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ‘ದಿ ಎಂಪೈರ್’ ಪದ್ಮಾವತ್, ಬಾಜಿರಾವ್ ಮಸ್ತಾನಿ ಅಥವಾ ಗೇಮ್ ಆಫ್ ಥ್ರೋನ್ಸ್‌ನಂತೆ ಎಂದು ಹೇಳಿದ್ದಾರೆ, ಆದರೆ ಇದು ವಿಭಿನ್ನ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಒಳಗೊಂಡಿದೆ” ಎಂದು ಕುನಾಲ್ ಕಪೂರ್​ ಹೇಳಿದ್ದಾರೆ.

ಈ ಹಿಂದೆ ಶೆಹ್ಬಾನಿ ಖಾನ್ ಪಾತ್ರದಲ್ಲಿ ನಟಿಸಿರುವ ಡಿನೋ ಮೋರಿಯಾ, ಪದ್ಮಾವತ್ ಚಿತ್ರದಲ್ಲಿ ನಟ ರಣವೀರ್ ನಿರ್ವಹಿಸಿದ ಖಿಲ್ಜಿ ಪಾತ್ರಕ್ಕೂ ಮತ್ತು ಅವರ ಪಾತ್ರದ ನಡುವಿನ ಹೋಲಿಕೆಗಳ ಬಗ್ಗೆಯೂ ಮಾತನಾಡಿದ್ದರು. ರಣವೀರ್ ಸಿಂಗ್​ ಉತ್ತಮ ಕೆಲಸ ಮಾಡಿದ್ದರು. ಆ ಪಾತ್ರಕ್ಕೆ ತನ್ನದೇ ಆದ ಹುಚ್ಚುತನವನ್ನು ಅದರಲ್ಲಿ ಸೇರಿಸಿ ನಟಿಸಿದ್ದರು ಎಂದು ಡಿನೋ ಹೇಳಿದ್ದರು.

ಇದನ್ನೂ ಓದಿ: Happy Krishna Janmashtami: ಕೃಷ್ಣ ಜನ್ಮಾಷ್ಟಮಿಯ ವಿಶೇಷ ಫೋಟೋಶೂಟ್​ನಲ್ಲಿ ಮಿಂಚಿದ ಸೆಲೆಬ್ರಿಟಿ ಅಮ್ಮ-ಮಗಳು..!

‘ದಿ ಎಂಪೈರ್’ ವೆಬ್​ ಸರಣಿಯಲ್ಲಿ ಡಿನೋ ಮೋರಿಯಾ, ಶಬಾನಾ ಆಜ್ಮಿ, ದೃಷ್ಟಿ ಧಾಮಿ, ಸಹೇರ್ ಬಂಬಾ, ರಾಹುಲ್ ದೇವ್, ಆದಿತ್ಯ ಸೀಲ್ ಇತರರು ನಟಿಸಿದ್ದಾರೆ. ಇದು ಅಲೆಕ್ಸ್ ರುದರ್ ಫೋರ್ಡ್ ಅವರ ‘ಎಂಪೈರ್ ಆಫ್ ದಿ ಮೊಘಲ್’ ಪುಸ್ತಕದ ಕಥೆ ಆಧರಿಸಿ ತಯಾರಿಸಲಾಗಿದೆ. ಈ ವೆಬ್ ಸರಣಿಯನ್ನು ಮಿತಾಕ್ಷರ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ನಿಖಿಲ್ ಅಡ್ವಾಣಿ ನಿರ್ಮಾಣದಲ್ಲಿ ಮೂಡಿಬಂದಿದ್ದು, ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: