• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Elephant Whisperers: ಆಸ್ಕರ್ ಪ್ರಶಸ್ತಿ ಪಡೆದ ‘ಎಲಿಫೆಂಟ್ ವಿಸ್ಪರರ್ಸ್’, ಊಟಿ ವಿಮಾನದಲ್ಲಿ ದಂಪತಿಗೆ ಸಿಳ್ಳೆ, ಚಪ್ಪಾಳೆಯ ಗೌರವ

Elephant Whisperers: ಆಸ್ಕರ್ ಪ್ರಶಸ್ತಿ ಪಡೆದ ‘ಎಲಿಫೆಂಟ್ ವಿಸ್ಪರರ್ಸ್’, ಊಟಿ ವಿಮಾನದಲ್ಲಿ ದಂಪತಿಗೆ ಸಿಳ್ಳೆ, ಚಪ್ಪಾಳೆಯ ಗೌರವ

ವಿಮಾನದಲ್ಲಿ ದಂಪತಿಗೆ ಸಿಕ್ಕ ಗೌರವ

ವಿಮಾನದಲ್ಲಿ ದಂಪತಿಗೆ ಸಿಕ್ಕ ಗೌರವ

ಮುಂಬೈಯಲ್ಲಿ ಆ ಕಾರ್ಯಕ್ರಮವನ್ನು ಮುಗಿಸಿಕೊಂಡು ಊಟಿಗೆ ಹಿಂದಿರುಗಿದ ವಿಮಾನದಲ್ಲಿ ಕ್ಯಾಪ್ಟನ್ ಅವರು ಎಲ್ಲಾ ಪ್ರಯಾಣಿಕರ ಮುಂದೆ ಎದ್ದು ನಿಂತು ಈ ದಂಪತಿಗೆ ಅದ್ದೂರಿಯ ಸ್ವಾಗತ ನೀಡಿದರು.

 • Trending Desk
 • 5-MIN READ
 • Last Updated :
 • Karnataka, India
 • Share this:

ಈಗಂತೂ ಎಲ್ಲೇ ಹೋದರೂ ಭಾರತದ ಒಂದು ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂತಂತೆ ಮತ್ತು ಭಾರತದ ಇನ್ನೊಂದು ತೆಲುಗು ಚಿತ್ರ ‘ಆರ್‌ಆರ್‌ಆರ್’ ನ (RRR) ‘ನಾಟು ನಾಟು’ ಹಾಡು ಸಹ ಮೂಲ ಗೀತೆ ಅಂತ ಆಸ್ಕರ್ ಪ್ರಶಸ್ತಿ (Oscar Award) ಪಡೆದಿರುವ ಬಗ್ಗೆಯೇ ಚರ್ಚೆ ಅಂತ ಹೇಳಬಹುದು. ಆಸ್ಕರ್ ಪ್ರಶಸ್ತಿ ಗಳಿಸೋದು ಎಂದರೆ ಸುಲಭದ ವಿಷಯವಲ್ಲ ಬಿಡಿ. ನಿಜಕ್ಕೂ ನಮ್ಮ ಭಾರತ ದೇಶಕ್ಕೆ ಈ ಎರಡು ಚಿತ್ರಗಳು ಹೆಮ್ಮೆ ತಂದು ಕೊಟ್ಟಿವೆ ಅಂತಾನೆ ಹೇಳಬಹುದು.


95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಎಲಿಫೆಂಟ್ ವಿಸ್ಪರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಐತಿಹಾಸಿಕ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡ ನಂತರ ಆ ಸಾಕ್ಷ್ಯಚಿತ್ರದ ತಂಡದವರು ಎಲ್ಲೇ ಹೋದರೂ ಅವರನ್ನು ಜನರು ತುಂಬಾನೇ ಗೌರವದಿಂದ ಕಾಣುತ್ತಿದ್ದಾರೆ ಅಂತ ಹೇಳಬಹುದು. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.


‘ಎಲಿಫೆಂಟ್ ವಿಸ್ಪರ್ಸ್’ ಆ ಸಾಕ್ಷ್ಯಚಿತ್ರದಲ್ಲಿ ನಟಿಸಿರುವ ದಂಪತಿಗಳ ನೈಜ ಕಥೆ..


ಈ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ ಇಬ್ಬರು ದಂಪತಿಗಳು ಯಾವುದೇ ಚಲನಚಿತ್ರಗಳಲ್ಲಿ ನಟಿಸುವ ಕಲಾವಿದರಲ್ಲ, ಇದು ಅವರ ಕಥೆ ಮತ್ತು ನಿಜ ಜೀವನದಲ್ಲಿ ಇವರೇ ಆ ಆನೆಗಳನ್ನು ಸಾಕಿ ಬೆಳೆಸಿದ್ದು ಅಂತ ಹೇಳಬಹುದು.


ಈಗಾಗಲೇ ಬಹುತೇಕರು ಈ ಸಾಕ್ಷ್ಯಚಿತ್ರವನ್ನು ನೋಡಿರುತ್ತಾರೆ ಮತ್ತು ಅದರಲ್ಲಿರುವ ದಂಪತಿಗಳಾದ ಬೊಮ್ಮನ್ ಮತ್ತು ಬೆಲ್ಲಿಯ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆ.
ಈ ದಂಪತಿಗಳ ವಿವಾಹ ಸಮಾರಂಭವನ್ನು ಸಹ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಅವರು ಈಗ ಪ್ರಶಸ್ತಿ ಗೆದ್ದ ನಂತರ ಗುರುವಾರ ಮುಂಬೈಗೆ ಪ್ರಯಾಣಿಸಿ ಮಾಧ್ಯಮ ಮಿತ್ರರನ್ನು ಭೇಟಿಯಾದರು ಮತ್ತು ಆ ಹೊಳೆಯುವ ಚಿನ್ನದ ಟ್ರೋಫಿಗಳೊಂದಿಗೆ ಅಲ್ಲಿನ ಅನೇಕ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.


ಇದು ನಿಜಕ್ಕೂ ಜನರಿಗೆ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ತಾವೇ ಖುದ್ದು ಹೋಗಿ ಬಂದೆವು ಅನ್ನೋವಷ್ಟರ ಮಟ್ಟಿಗೆ ಸಂತೋಷ ನೀಡಿತು ಅಂತ ಹೇಳಬಹುದು.


ಊಟಿಗೆ ಹಿಂದಿರುಗುವ ವಿಮಾನದಲ್ಲಿ ಈ ದಂಪತಿಗಳಿಗೆ ಸಿಕ್ತು ಪ್ರಶಂಸೆಯ ಸುರಿಮಳೆ


ಮುಂಬೈಯಲ್ಲಿ ಆ ಕಾರ್ಯಕ್ರಮವನ್ನು ಮುಗಿಸಿಕೊಂಡು ಊಟಿಗೆ ಹಿಂದಿರುಗಿದ ವಿಮಾನದಲ್ಲಿ ಕ್ಯಾಪ್ಟನ್ ಅವರು ಎಲ್ಲಾ ಪ್ರಯಾಣಿಕರ ಮುಂದೆ ಎದ್ದು ನಿಂತು ಈ ದಂಪತಿಗೆ ಅದ್ದೂರಿಯ ಸ್ವಾಗತ ನೀಡಿದರು ಮತ್ತು ಉಳಿದ ಪ್ರಯಾಣಿಕರು ಸಹ ಈ ದಂಪತಿಗಳಿಗೆ ಚಪ್ಪಾಳೆ ಹೊಡೆದು ಅವರನ್ನು ಹುರಿದುಂಬಿಸಿದರು.


ಈ ವೀಡಿಯೋವನ್ನು ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


"ಎಲಿಫೆಂಟ್ ವಿಸ್ಪರ್ಸ್" ದಂಪತಿಗಳು ವಿಮಾನದಲ್ಲಿದ್ದಾರೆ ಮತ್ತು ಊಟಿಗೆ ಹೋಗುತ್ತಿರುವ ಕ್ಷಣ" ಎಂದು ಈ ವೀಡಿಯೋಗೆ ಸುಂದರವಾದ ಶೀರ್ಷಿಕೆಯನ್ನು ಬರೆದು ಇಂಡಿಗೋ ವಿಮಾನದಲ್ಲಿ ಈ ದಂಪತಿಗಳಿಗೆ ನೀಡಿದ ಅದ್ದೂರಿ ಸ್ವಾಗತದ ಬಗ್ಗೆ ಮಾಹಿತಿ ನೀಡಿದ್ದಾರೆ.


ಈ ದಂಪತಿಗಳ ಬಗ್ಗೆ ವಿಮಾನದಲ್ಲಿ ಕ್ಯಾಪ್ಟನ್ ಹೇಳಿದ್ದೇನು?


ಇಂಡಿಗೋ ವಿಮಾನದ ಕ್ಯಾಪ್ಟನ್ ಅಲ್ಲೇ ಇರುವ ಮೈಕ್ ಮೂಲಕ "ಆಸ್ಕರ್ ನಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡ ‘ದಿ ಎಲಿಫೆಂಟ್ ವಿಸ್ಪರ್ಸ್’ ನ ಚಿತ್ರದಲ್ಲಿ ಅಭಿನಯಿಸಿದವರು ನಮ್ಮ ಜೊತೆ ಈ ವಿಮಾನದಲ್ಲಿರುವುದು ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ.


ಹೌದು.. ಆ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ ದಂಪತಿಗಳು ನಮ್ಮೊಂದಿಗೆ ಇದ್ದಾರೆ. ಒಂದು ದೊಡ್ಡ ಸುತ್ತಿನ ಚಪ್ಪಾಳೆ ಬರಲಿ ಅವರಿಗಾಗಿ" ಎಂದು ಹೆಮ್ಮೆಯಿಂದ ಹೇಳಿದರು.


ನಂತರ ಆ ದಂಪತಿಗಳು ಎದ್ದು ನಿಂತು ಎಲ್ಲರಿಗೂ ನಮಸ್ಕರಿಸಿದರು ಮತ್ತು ಕ್ಯಾಪ್ಟನ್ ಅವರು ನಮ್ಮ ಜೊತೆ ಪ್ರಯಾಣಿಸುತ್ತಿರುವುದು ನಮ್ಮ ಭಾಗ್ಯ ಎಂದು ಹೇಳಿದರು. ಈ ಕ್ಷಣವನ್ನು ಸೆರೆಹಿಡಿಯಲು ಸಹ ಪ್ರಯಾಣಿಕರು ತಮ್ಮ ಮೊಬೈಲ್ ಗಳನ್ನು ಹೊರತೆಗೆದರು.


ಬೊಮ್ಮನ್ ಮತ್ತು ಬೆಲ್ಲಿ ತಮಿಳುನಾಡಿನ ತೆಪ್ಪಕ್ಕಾಡು ಆನೆ ಶಿಬಿರದಲ್ಲಿ ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುವನ್ನು ಸಾಕಿ ಬೆಳೆಸಿದರು. ಈ ಸಾಕ್ಷ್ಯಚಿತ್ರವು ಎಳೆಯ ಆನೆಗಳೊಂದಿಗೆ ಅವರ ವಿಶೇಷ ಬಂಧವನ್ನು ತೋರಿಸುತ್ತದೆ.


ಗುರುವಾರದ ಕಾರ್ಯಕ್ರಮದಲ್ಲಿ, ಅವರು ಈಗ ತಾಯಿಯನ್ನು ಕಳೆದುಕೊಂಡ ಹೊಸ ಆನೆ ಮರಿ ಧರ್ಮಮ್ ಅನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
ಈಗ ಧರ್ಮಮ್ ಅನ್ನೋ ಆನೆ ಮರಿಯನ್ನ ಸಾಕುತ್ತಿದ್ದಾರಂತೆ ಬೆಲ್ಲಿ


ತಮಿಳಿನಲ್ಲಿ, ಬೆಲ್ಲಿ ಪತ್ರಿಕಾಗೋಷ್ಠಿಯಲ್ಲಿ, "ನಾನು ಆನೆಗಳನ್ನು ಬೆಳೆಸುವಾಗ ಕೆಲವೊಮ್ಮೆ ನೋವಿನ ಘಟನೆಗಳು ನಡೆಯುತ್ತವೆ, ಏನೆಂದರೆ ಅವುಗಳನ್ನು ಬೆಳೆಸಿ ಮತ್ತೆ ಕಾಡಿನಲ್ಲಿ ಬಿಡಬೇಕಾಗುತ್ತದೆ.


ಇದನ್ನೂ ಓದಿ: RRR Campaign: ಆಸ್ಕರ್ ಪ್ರಶಸ್ತಿಗಾಗಿ RRR ತಂಡ 80 ಕೋಟಿ ಖರ್ಚು ಮಾಡಿಲ್ಲ! ಅಸಲಿ ಲೆಕ್ಕ ಕೊಟ್ರು ರಾಜಮೌಳಿ ಪುತ್ರ ಕಾರ್ತಿಕೇಯ

top videos


  ತಾಯಿಯಾಗಿ ನೀವು ಮಕ್ಕಳನ್ನು ಬೆಳೆಸುತ್ತೀರಿ ಮತ್ತು ನಂತರ ಅವರು ನಿಮ್ಮಿಂದ ದೂರ ಹೋಗುತ್ತಾರೆ” ಎಂದು ಹೇಳಿದರು. ಆದರೆ ಈಗ ಧರ್ಮಮ್ ನನ್ನು ನನ್ನ ಬಳಿಗೆ ಕರೆತಂದಾಗ ಅದರ ತಾಯಿ ತೀರಿಕೊಂಡಿದ್ದಾರೆ ಅಂತ ನನಗೆ ಹೇಳಿದರು. ಆ ಮರಿ ಆನೆಯನ್ನು ಬೆಳೆಸಲು ನಾನು ಹೇಗೆ ಇಲ್ಲ ಅಂತ ಹೇಳಲಿ” ಎಂದು ಬೆಲ್ಲಿ ಕೇಳಿದರು.

  First published: