777 Charlie: ಮುದ್ದು ಚಾರ್ಲಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು, ಬೇರೆ ಭಾಷೆ ಚಿತ್ರಗಳಿಂದಲೂ ಬಂಪರ್ ಆಫರ್!
ಚಾರ್ಲಿಯಾಗಿ ಅಭಿನಯಿಸಿರುವ ಆ ಮುದ್ದು ನಾಯಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕರ್ನಾಟಕದ ಜನರಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಜನ ಚಾರ್ಲಿ ಅಭಿನಯಕ್ಕೆ ಮನ ಸೋತಿದ್ದಾರೆ. ಇದೀಗ ಮುದ್ದು ಚಾರ್ಲಿಗೆ ಫುಲ್ ಡಿಮ್ಯಾಂಡ್ ಬರ್ತಿದ್ಯಂತೆ.
‘777 ಚಾರ್ಲಿ’ (777 Charlie) ಎಂಬ ಸಿನಿಮಾದ (Cinema) ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ಖ್ಯಾತ ನಿರ್ದೇಶಕ (Famous Director) ರಾಜಮೌಳಿ (Rajamouli) ನೊಣದ (fly) ಮೇಲೆ ಕಥೆ (Story) ಮಾಡಿ ಗೆದ್ದಿದ್ದರು. ಇದೀಗ ಸ್ಯಾಂಡಲ್ವುಡ್ (Sandalwood) ನಟ, ನಿರ್ದೇಶಕ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ನಾಯಿ (Dig) ಮೇಲೆ ಸಿನಿಮಾ ಮಾಡಿ ಸಕ್ಸಸ್ (Success) ಕಂಡಿದ್ದಾರೆ. ಚಾರ್ಲಿಯಾಗಿ ಅಭಿನಯಿಸಿರುವ ಆ ಮುದ್ದು ನಾಯಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕರ್ನಾಟಕದ (Karnataka) ಜನರಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಜನ ಚಾರ್ಲಿ ಅಭಿನಯಕ್ಕೆ ಮನ ಸೋತಿದ್ದಾರೆ. ಇದೀಗ ಮುದ್ದು ಚಾರ್ಲಿಗೆ ಫುಲ್ ಡಿಮ್ಯಾಂಡ್ (Demand) ಬರ್ತಿದ್ಯಂತೆ. ಬರೀ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಿಂದಲೂ ಚಾರ್ಲಿಗೆ ಆಫರ್ (Offer) ಬರ್ತಾ ಇದೆಯಂತೆ.
ಮುದ್ದು ಚಾರ್ಲಿಗೆ ಈಗ ಫುಲ್ ಡಿಮ್ಯಾಂಡ್
777 ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿದ್ದ ಹೆಣ್ಣು ನಾಯಿಗೆ ಈಗ ಫುಲ್ ಡಿಮ್ಯಾಂಡ್ ಬರ್ತಿದ್ಯಂತೆ. ಸದ್ಯ ಚಾರ್ಲಿ ಸಿನಿಮಾದ ಶ್ವಾನಕ್ಕೆ ಕನ್ನಡ ಮಾತ್ರವಲ್ಲದೆ ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್ ಶುರುವಾಗಿದೆ. ತೆಲುಗು, ತಮಿಳು ಸಿನಿಮಾಗಳಿ್ಂದಲೂ ಚಾರ್ಲಿಗೆ ಆಫರ್ ಬರುತ್ತಿದೆಯಂತೆ.
ಶ್ವಾನ ಕೇಂದ್ರ ನಾಯಿಗಳಿಗೂ ಆಫರ್
ಇತ್ತ ಚಾರ್ಲಿಗೆ ತರಬೇತಿ ನೀಡಿದ್ದ ಪ್ರಮೋದ್ ಪ್ರಮೋದ್ ಅವರ ಕೇಂದ್ರದ ಶ್ವಾನಗಳಿಗೆ ಅವಕಾಶ ಬಂದಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಿಂದ ಇಲ್ಲಿನ ನಾಯಿಗಳಿಗೆ ಆಫರ್ ಬರ್ತಿದೆಯಂತೆ. ಡಾಲಿ ಧನಂಜಯ್ ಅಭಿನಯಿಸುತ್ತಿರುವ ಹೊಯ್ಸಳ ಸಿನಿಮಾಗೂ ಪ್ರಮೋದ್ 5 ಅಪರೂಪದ ಬೆಲ್ಜಿಯನ್ ಮ್ಯಾಲಿನಾಯಿಸ್ ನೀಡಿದ್ದಾರೆ. ತೆಲುಗು, ಮಲಯಾಳಂನಿಂದ ಸಿನಿಮಾದಲ್ಲಿ ನಟಿಸಲು ಚಾರ್ಲಿಯಿಂದಾಗಿ ಆಕೆ ಸ್ನೇಹಿತರಿಗೂ ಈಗ ಬೇರೆ ಬೇರೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಲಭಿಸುತ್ತಿದೆ ಎನ್ನಲಾಗಿದೆ.
ಈ ಚಾರ್ಲಿ ನಾಯಿ ಹಾಗೂ ಅದಕ್ಕೆ ಟ್ರೈನಿಂಗ್ ಕೊಟ್ಟವರು ಸಹ ಮೈಸೂರಿನವರು. ಇನ್ನೊಂದು ವಿಶೇಷ ಎಂದರೆ ಈ ಸಿನಿಮಾದ ಬಹುಪಾಲು ಶೂಟಿಂಗ್ ಆಗಿದ್ದು ಮೈಸೂರಿನಲ್ಲಿ. ಈ ನಾಯಿಗೆ ಟ್ರೈನಿಂಗ್ ಕೊಟ್ಟವರ ಹೆಸರು ಪ್ರಮೋದ್ ಬಿ.ಸಿ. ಚಾರ್ಲಿ ಸಿನಿಮಾದ ಮೊದಲಾರ್ಧದಲ್ಲಿ ಬರುವ ಚಿಕ್ಕ ಹಾಗೂ ನಂತರ ಕಾಣಿಸಿಕೊಳ್ಳುವ ದೊಡ್ಡ ‘ಚಾರ್ಲಿ’ ನಾಯಿಗಳನ್ನು ಇವರೇ ಪಳಗಿಸಿದ್ದು.
ಚಾರ್ಲಿಗೆಟ್ರೈನಿಂಗ್ ಕೊಟ್ಟಆದಿನಗಳುಹೇಗಿತ್ತುಗೊತ್ತಾ?
ಪ್ರಮೋದ್ ಅವರು ಮೈಸೂರಿನ ಡಿ ಸಾಲುಂಡಿಯಲ್ಲಿ ಡಿಕೆ9 ವರ್ಕಿಂಗ್ ಡಾಗ್ ಟ್ರೇನಿಂಗ್ ಸ್ಕೂಲ್’ ಎನ್ನುವ ಹೆಸರಿನಲ್ಲಿ ನಾಯಿಗಳ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಈ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದು, ಸದ್ಯ 22 ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ತರಬೇತಿಯಲ್ಲಿ ನಾಯಿಗಳಿಗೆ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ರೀತಿ ಟ್ರೈನಿಂಗ್ ನೀಡಲಾಗುತ್ತದೆ. ಪ್ರಮೋದ್ ಅವರೇ ಚಾರ್ಲಿ ಸಿನಿಮಾದ ನಾಯಿಗೆ ಟ್ರೈನಿಂಗ್ ಕೊಟ್ಟವರು.
ಪ್ಯಾನ್ ಇಂಡಿಯಾ ಚಿತ್ರವಾಗಿರುವ ಚಾರ್ಲಿ, ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಎಲ್ಲ ಕಡೆ ಸಹ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಾಗಾಗಿ ಈಗ ಈ ಸಿನಿಮಾದ ಹಿಂದಿ ರಿಮೇಕ್ ಮಾಡುವಂತೆ ಬೇಡಿಕೆ ಕೇಳಿ ಬಂದಿದೆ. ಆದರೆ ಸದ್ಯ ಹುಟ್ಟಿಕೊಂಡಿರುವ ಪ್ರಶ್ನೆ ಎಂದರೆ ಈಗಾಗಲೇ ಚಾರ್ಲಿ ಸಿನಿಮಾ ಹಿಂದಿಯಲ್ಲಿ ಡಬ್ ಆಗಿದೆ. ಆದರೆ ರಿಮೇಕ್ ಏಕೆ ಎಂಬುದು. ಆದರೆ ಚಾರ್ಲಿ ಸಿನಿಮಾದ ರಿಮೇಕ್ ರೈಟ್ಸ್ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆಯಂತೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ