ನಿರ್ಮಾಪಕರ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ‘Guddu Ki Girl Friend’ ಚಿತ್ರತಂಡ!

ಸುಮಾರು 150 ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಬನಾರಸ್‌ನ ಹೋಟೆಲ್‌ವೊಂದರಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಈ ಘಟನೆ ಇತ್ತೀಚೆಗಷ್ಟೆ ನಡೆದಿದೆ.

‘ಗುಡ್ಡು ಕಿ ಗರ್ಲ್ ಫ್ರೆಂಡ್’ ಚಿತ್ರತಂಡ

‘ಗುಡ್ಡು ಕಿ ಗರ್ಲ್ ಫ್ರೆಂಡ್’ ಚಿತ್ರತಂಡ

  • Share this:
ಕೆಲವೊಮ್ಮೆ ಈ ಚಲನಚಿತ್ರಗಳನ್ನು ಚಿತ್ರತಂಡ ಚಿತ್ರೀಕರಣ ಮಾಡುತ್ತಿರುವಾಗ ನಿರ್ಮಾಪಕರ ಬಳಿ ಹಣದ ಕೊರತೆಯಿಂದಲೋ ಅಥವಾ ನಿರ್ದೇಶಕರೊಂದಿಗೆ ಮನಸ್ತಾಪವಾಗಿ ಚಿತ್ರೀಕರಣ ನಿಲ್ಲಿಸಿರುವುದನ್ನು ನಾವೆಲ್ಲಾ ಅನೇಕ ಬಾರಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ, ಆದೇನಪ್ಪಾ ಅಂತೀರಾ? ‘ಗುಡ್ಡು ಕಿ ಗರ್ಲ್ ಫ್ರೆಂಡ್’  (Guddu Ki Girlfriend) ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರ ತಂಡದವರು ತಂಗಿದ್ದ ಹೋಟೆಲ್‌ನವರು, ನಿರ್ಮಾಪಕರ ಬಳಿ ಹಣದ ಕೊರತೆ ಇದೆ ಎಂದು ತಿಳಿದ ಕೂಡಲೇ ಚಿತ್ರತಂಡದ ಸುಮಾರು 150 ಮಂದಿಯನ್ನು ಹೋಟೆಲ್‌ನಿಂದ ಹೊರ ಹೋಗದಂತೆ ಒತ್ತೆಯಾಳಾಗಿರಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ ಎಂದು ಹೇಳಲಾಗುತ್ತಿದೆ.

‘ಗುಡ್ಡು ಕಿ ಗರ್ಲ್ ಫ್ರೆಂಡ್’ ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿಗಳು ಒಂದು ವಿಭಿನ್ನವಾದಂತಹ ಅನುಭವಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವಂತಹ ನಟರಾದ ಮೀರಾ ಚೋಪ್ರಾ (Meera Chopra) ಮತ್ತು ತನುಜ್ ವಿರ್ವಾನಿ (Tanuj Virwani) ಬೇರೆ ಹೋಟೆಲ್‌ನಲ್ಲಿ ಉಳಿದಿರುವುದರಿಂದ ಈ ಭಯಾನಕ ಘಟನೆಯಿಂದ ಅದೃಷ್ಟವಶಾತ್ ಪಾರಾಗಿದ್ದು, ಚಿತ್ರತಂಡದ ಉಳಿದವರು ದುರದೃಷ್ಟವಶಾತ್ ನಿರ್ಮಾಪಕರ ಹಣದ ಕೊರತೆಯಿಂದ ಈ ರೀತಿಯ ಅನುಭವ ಎದುರಿಸಬೇಕಾಯಿತು.

‘ಗುಡ್ಡು ಕಿ ಗರ್ಲ್ ಫ್ರೆಂಡ್’ ಚಿತ್ರತಂಡ


ಸುಮಾರು 150 ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಬನಾರಸ್‌ನ ಹೋಟೆಲ್‌ವೊಂದರಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಏಕೆಂದರೆ ನಿರ್ಮಾಪಕ ಇಲಿಯಾಸ್ ಗುಡ್ಡು ಅವರು ಚಲನಚಿತ್ರದ ಚಿತ್ರೀಕರಣಕ್ಕಾಗಿ ಹಣದ ಕೊರತೆ ಇದೆ ಎಂದು ಹೇಳಿದ್ದಾರೆ. ಇನ್ನು  ಹೋಟೆಲ್‌ವೊಂದರಲ್ಲಿ ಒತ್ತೆಯಾಳುಗಳಾಗಿದ್ದವರಲ್ಲಿ ಫ್ರೆಡ್ಡಿ ದಾರುವಾಲಾ ಮತ್ತು ಸುಕೇಶ್ ಆನಂದ್ ಕೂಡ ಇದ್ದರು. ನಿರ್ಮಾಪಕರು ಹಣದ ಕೊರತೆಯಿಂದ ಈ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸುತ್ತಾರೆಯೇ ಎಂದು ಅನುಮಾನಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Puneeth Rajkumar: 'ಪುನೀತ ನಮನ' ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ವಿಶೇಷ ಪುತ್ಥಳಿ..!

ಸುದ್ದಿ ಮಾಧ್ಯಮದ ಜೊತೆ ಮಾತನಾಡಿರುವ ಸುಕೇಶ್ ಆನಂದ್, "ನಾನು ಚಿತ್ರವನ್ನು ಪೂರ್ಣಗೊಳಿಸುತ್ತೇನೆ ಎಂದು ಭಾವಿಸುವುದಿಲ್ಲ. ನಾವು ಭಯಾನಕ ಸಮಯವನ್ನು ಎದುರಿಸುತ್ತಿದ್ದೇವೆ. ಹೋಟೆಲ್‌ನವರು ನಮ್ಮನ್ನು ಹೊರಗಡೆ ಹೋಗಲು ಬಿಡುತ್ತಿಲ್ಲ. ನಾನು ಹಿರಿಯ ನಟಿ ನೂಪುರ್ ಅಲಂಕರ್ ಅವರನ್ನು ಸಂಪರ್ಕಿಸಿದೆ ಮತ್ತು ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವುದಾಗಿಯೂ ಹೇಳಿದ್ದಾರೆ.

8 ಜನರಿಗೆ ಹೋಟೆಲ್‌ನವರು ಹೊರಗಡೆ ಹೋಗಲು ಬಿಡುತ್ತಿಲ್ಲ, ಅದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಏಕೆಂದರೆ ಇದಕ್ಕೆಲ್ಲ ಅವರೇ ಜವಾಬ್ದಾರರು. ಆದರೆ ನಾವು ನಟರು, ತಂತ್ರಜ್ಞರನ್ನು ಏಕೆ ಹೋಟೆಲ್‌ನಲ್ಲಿ ಹಾಕಿ ಲಾಕ್ ಮಾಡಲಾಯಿತು? ನಿರ್ಮಾಪಕರಿಗೆ ಹಣದ ಕೊರತೆಗೆ ನಾವು ಖಂಡಿತವಾಗಿಯೂ ಜವಾಬ್ದಾರರಾಗುವುದಿಲ್ಲ" ಎಂಬುದು ಅವರ ತರ್ಕವಾಗಿತ್ತು.

ಇದನ್ನೂ ಓದಿ: ಕಣ್ಸನ್ನೆ ಹುಡುಗಿ Priya Prakash Varrier ಲುಕ್ಸ್​ಗೆ ನೆಟ್ಟಿಗರು ಮತ್ತೊಮ್ಮೆ ಫಿದಾ..!

ಈ ಪರಿಸ್ಥಿತಿಯ ಬಗ್ಗೆ ಕೇಳಿದಾಗ, ತನುಜ್‌ಗೆ ಹೇಳಲು ಹೆಚ್ಚಿನದೇನೂ ಇರಲಿಲ್ಲ, ಆದರೆ ನಟ ತಾನು ಮತ್ತು ಮೀರಾ ಈ ಘಟನೆಯಿಂದ ದೂರವಿದ್ದೇವೆ ಎಂದು ದೃಢಪಡಿಸಿದರು. "ನಾನು ಈ ಬಗ್ಗೆ ಕೇಳಿದ್ದೇನೆ. ಅಲ್ಲಿ ಸ್ವಲ್ಪ ಗದ್ದಲವಾಗಿದೆ, ಆದರೆ ಮೀರಾ ಮತ್ತು ನಾನು ಬೇರೆ ಹೋಟೆಲ್‌ನಲ್ಲಿದ್ದೇವೆ. ಆದರೂ, ಹೆಚ್ಚಿನ ವಿವರಗಳು ನನಗೆ ತಿಳಿದಿಲ್ಲ" ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಚಿತ್ರದ ನಿರ್ಮಾಪಕ ಮತ್ತು ತಯಾರಕರು ಇನ್ನೂ ಪ್ರತಿಕ್ರಿಯಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ.
First published: