777 Charlie: ಸಿಕ್ಕಾಪಟ್ಟೆ ಘಾಟಿ ಇದ್ದ ಚಾರ್ಲಿ ಚೂಟಿ ಆಗಿದ್ದೇ ರೋಚಕ! ಚಿತ್ರತಂಡಕ್ಕೆ ಇವ್ಳು ಸಿಕ್ಕಿದ್ದೇ ಅದೃಷ್ಟ

ಈ ಶ್ವಾನ (Dog) ಹೇಗಪ್ಪಾ ಈ ಮಟ್ಟಕ್ಕೆ ಬುದ್ದಿ ಕಲಿತು ನಟಿಸಿದೆ ಎಂದು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಈ ಚಾರ್ಲಿಯ ಬಗ್ಗೆ ನಿಮಗೆಷ್ಟು ಗೊತ್ತು? ಈ ಚಾರ್ಲಿ ಚಿತ್ರತಂಡಕ್ಕೆ ಸಿಕ್ಕಿದ್ದೇ ರೋಚಕ. ಆ ಬಗ್ಗೆ ಇಲ್ಲಿದೆ ಕಂಪ್ಲೀಟ್​ ರಿಪೋರ್ಟ್.

ಚಾರ್ಲಿ

ಚಾರ್ಲಿ

  • Share this:
ಕೆಜಿಎಫ್​  2 (KGF 2) ಸಿನಿಮಾ ಬಳಿಕ ಎಲ್ಲರ ಬಾಯಲ್ಲೂ  ಚಾರ್ಲಿ (Charlie)ಯದ್ದೇ ಮಾತು. ನೋಡೋಕೆ ಚಾರ್ಲಿ ಎಷ್ಟು ಮುದ್ದಾಗಿದ್ದಾಳೆ ಅಂತ ಎಲ್ಲರಿಗೂ ಗೊತ್ತು. ಚಾರ್ಲಿನ ನಾಯಿ ಎನ್ನುವುದಕ್ಕೆ ಯಾರಿಗೂ ಮನಸ್ಸಿಲ್ಲ. 777 ಚಾರ್ಲಿ (777 Charlie) ಸಿನಿಮಾದಲ್ಲಿ ಚಾರ್ಲಿನೇ ಹೀರೋಯಿನ್​. ಚಾರ್ಲಿನೆ ಸಿನಿಮಾದ ಹೈಲೆಟ್​. ಕನ್ನಡದಲ್ಲಿ ಹಿಂದೆಂದೂ ಯಾರು ಮಾಡಿರದಂತಹ ಚಿತ್ರವನ್ನು ನಿರ್ದೇಶಕ ಕಿರಣ್​ ರಾಜ್ (Kiran Raj)​ ಕನ್ನಡಗಿರಿಗೆ ನೀಡಿದ್ದಾರೆ. ರಕ್ಷಿತ್​ ಶೆಟ್ಟಿ (Rakshit Shetty) ಹಾಗೂ ಚಾರ್ಲಿಯ ಬಾಂಧವ್ಯ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ರಕ್ಷಿತ್​ ಶೆಟ್ಟಿ ಈ ಸಿನಿಮಾದಲ್ಲಿ ಧರ್ಮನ ಪಾತ್ರದಲ್ಲಿ ನಟಿಸಿಲ್ಲ, ಜೀವಿಸಿದ್ದಾರೆ. ಚಾರ್ಲಿ-ಧರ್ಮನ ಸಂಬಂಧ ಸಾರುವ ಸಿನಿಮಾನೇ 777 ಚಾರ್ಲಿ. ಈ ಶ್ವಾನ (Dog) ಹೇಗಪ್ಪಾ ಈ ಮಟ್ಟಕ್ಕೆ ಬುದ್ದಿ ಕಲಿತು ನಟಿಸಿದೆ ಎಂದು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಈ ಚಾರ್ಲಿಯ ಬಗ್ಗೆ ನಿಮಗೆಷ್ಟು ಗೊತ್ತು? ಈ ಚಾರ್ಲಿ ಚಿತ್ರತಂಡಕ್ಕೆ ಸಿಕ್ಕಿದ್ದೇ ರೋಚಕ. ಆ ಬಗ್ಗೆ ಇಲ್ಲಿದೆ ಕಂಪ್ಲೀಟ್​ ರಿಪೋರ್ಟ್.

ಚಿತ್ರತಂಡಕ್ಕೆ ಸಿಕ್ಕಾಗ ಚಾರ್ಲಿಗೆ 4 ತಿಂಗಳು!

ನಿರ್ದೇಶಕ ಕಿರಣ್​ ರಾಜ್​ ಚಾರ್ಲಿ ಸಿನಿಮಾದ ಸ್ಕ್ರಿಪ್ಟ್​ ರೆಡಿ ಮಾಡಿ ಇಟ್ಟುಕೊಂಡಿದ್ದರು.ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದಾರೆ. ಮೊದಲು ಈ ಸಿನಿಮಾಗೆ ನಾಯಿಯನ್ನು ಹುಡುಕಲು ಶುರುಮಾಡಿದ್ದಾರೆ. ತನ್ನ ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಿಸಿದ್ದಾರೆ. ನಾಯಿ ಸಿಕ್ಕರೆ ತನಗೆ ತಿಳಿಸುವಂತೆ ಹೇಳಿದ್ದರು. ನಾಯಿಯನ್ನು ಕೊಂಡುಕೊಳ್ಳುವ ಉದ್ದೇಶ ಅವರಿಗಿರಲಿಲ್ಲ. ಅಡಾಪ್ಟ್​ ಮಾಡಿಕೊಳ್ಳುವ ತಿರ್ಮಾನ ಮಾಡಿದ್ದರು.ಕೆಲವು ತಿಂಗಳ ಬಳಿಕ ಕಿರಣ್​ ರಾಜ್​ ಅವರಿಗೆ 4 ತಿಂಗಳ ಶ್ವಾನವೊಂದು ಇದೆ ಎಂಬ ಮೇಸೆಜ್​ ಬಂದಿತ್ತು.

ತುಂಬಾ ಘಾಟಿಯಿದ್ದಳಂತೆ ಚಾರ್ಲಿ!

ಬೆಂಗಳೂರಿನ ಮನೆಯೊಂದರಲ್ಲಿ 4 ತಿಂಗಳ ಶ್ವಾನ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮನೆಯಲ್ಲಿರುವವರನ್ನೆಲ್ಲ ಬೊಗಳಿ ಚಾರ್ಲಿ ತುಂಬಾ ಕಾಟ ಕೊಡ್ತಿದ್ದಳಂತೆ. ಗಿಡ, ಬಟ್ಟೆ, ಚಪ್ಪಲಿಗಳನ್ನು ಕಚ್ಚಿ ಹಾಳುಮಾಡುತ್ತದ್ದಳಂತೆ. ಇನ್ನೂ ಆ ನಾಯಿಯನ್ನು ತಂದಿದ್ದ ಮನೆಯವರಿಗೆ ಚಾರ್ಲಿ ಕಾಟ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ಈ ನಾಯಿಯನ್ನು ಯಾರಿಗಾದರೂ ಕೊಟ್ಟು ಬಿಡುವ ನಿರ್ಧಾರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಚಿತ್ರತಂಡ ಆ ನಾಯಿ ಇರುವ ಮನೆಗೆ ಭೇಟಿ ನೀಡಿದ್ದರು. ಲ್ಯಾಬ್ರಡರ್​ ತಳಿಯ ಈ ನಾಯಿ ನೋಡಲು ತುಂಬಾ ಮುದ್ದಾಗಿ ಕಾಣುತ್ತಿತ್ತು. ಆಗ ಚಿತ್ರತಂಡ ಆ ನಾಯಿಯನ್ನು ತಂದು ಫೋಟೋ ಶೂಟ್​ ಮಾಡಿಸುತ್ತಾರೆ.

ಇದನ್ನೂ ಓದಿ: ಮೂರನೇ ದಿನವೂ ಮುಂದುವರಿದ ಚಾರ್ಲಿ ಅಬ್ಬರ, ಟಿಕೆಟ್​ ಸಿಗದೇ ಅಭಿಮಾನಿಗಳಿಗೆ ನಿರಾಸೆ

ಚಾರ್ಲಿ ಸಿಕ್ಕಿದ್ದು ಚಿತ್ರತಂಡಕ್ಕೆ ಅದೃಷ್ಟ!

777 ಚಾರ್ಲಿ ಚಿತ್ರತಂಡ ಲ್ಯಾಬ್ರಡರ್​ ತಳಿಯ ನಾಯಿಯನ್ನೇ ಹುಡುಕುತ್ತಿದ್ದರಂತೆ. ಆಗ ಸಿಕ್ಕಿದ್ದೇ ಈ ಚೂಟಿ ಚಾರ್ಲಿ. ಫೋಟೋಶೂಟ್​ ನಲ್ಲಿ ನಾಯಿಯ ರಿಯಾಕ್ಷನ್​ ಕಂಡು ಚಿತ್ರತಂಡ ಫಿದಾ ಆಗಿದ್ದರು. ಇಲ್ಲಿಯವರೆಗೂ ಆ ನಾಯಿಗೆ ಹೆಸರು ಇಟ್ಟಿರಲಿಲ್ಲ. ಫೋಟೋಶೂಟ್ ಆದ ಬಳಿಕ ಚಾರ್ಲಿ ಅಂತ ಕರೆಯಲು ಶುರು ಮಾಡಿದ್ದರು. ಸಿನಿಮಾ ತಂಡ ಸೇರಿಕೊಂಡಿದ್ದಾಗ ಚಾರ್ಲಿಗೆ 4 ತಿಂಗಳು. ಟ್ರೈನಿಂಗ್​ ಕೂಡ ನೀಡಿರಲಿಲ್ಲ. ಇದಾದ ನಂತರ ಟ್ರೈನರ್​ ಬಿಸಿ ಪ್ರಮೋದ್​ ಅವರನ್ನು ಟ್ರೈನಿಂಗ್​ ನೀಡಲು ಕರೆತಂದಿದ್ದರು.

ಇದನ್ನೂ ಓದಿ: ಕನ್ನಡದಲ್ಲಿಯೂ ಬರಲಿದೆಯಂತೆ RRR ಸಿನಿಮಾ, ರಕ್ಷಿತ್ ಶೆಟ್ಟಿ ಏನ್ ಹೇಳ್ತಿದ್ದಾರೆ ಕೇಳಿ

ಚಾರ್ಲಿಗೆ ತಿನ್ನೋದು ಅಂದ್ರೆ ಸಖತ್​ ಇಷ್ಟ!

ಪ್ರಮೋದ್​ ಚಾರ್ಲಿಗೆ ಟ್ರೈನಿಂಗ್​ ಶುರು ಮಾಡಿದ್ದರು. ಚಿತ್ರತಂಡ  ಪ್ರಮೋದ್​ ಅವರಿಗೆ 150 ಟಾಸ್ಕ್​ಗಳನ್ನು ಕೊಟ್ಟು ಚಾರ್ಲಿಗೆ ಟ್ರೈನ್ ಮಾಡಿ ಎಂದು ಹೇಳಿದ್ದರು. ಸಮಯ ಕಳೆದಂತೆ ಚಾರ್ಲಿ ಒಂದೊಂದೆ ಟಾಸ್ಕ್​ಗಳನ್ನು ಕಲಿತುಕೊಂಡಿದ್ದಳು. ಶೂಟಿಂಗ್​ ಕೂಡ ಸ್ಟಾರ್ಟ್ ಆಗಿತ್ತು. ಪಪ್ಪಿ ದೃಶ್ಯಗಳನೆಲ್ಲಾ ಶೂಟಿಂಗ್ ಮಾಡಲಾಗಿತ್ತು. ಇದಾದ ಬಳಿಕ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿತ್ತು. ಒಟ್ಟು ನಾಲ್ಕು ವರ್ಷ ಸಮಯ ತೆಗೆದುಕೊಂಡು ಶೂಟಿಂಗ್​ ಮಾಡಲಾಗಿತ್ತು. ಚಾರ್ಲಿಗೂ ಈಗ 4 ವರ್ಷ.
Published by:Vasudeva M
First published: