• Home
  • »
  • News
  • »
  • entertainment
  • »
  • Head Bush Controversy: ಹೆಡ್ ಬುಷ್ ಸಿನಿಮಾ ವಿವಾದ ಅಂತ್ಯ, ಆಕ್ಷೇಪಾರ್ಹ ಡೈಲಾಗ್ ಮ್ಯೂಟ್ ಮಾಡಲು ನಿರ್ಧಾರ

Head Bush Controversy: ಹೆಡ್ ಬುಷ್ ಸಿನಿಮಾ ವಿವಾದ ಅಂತ್ಯ, ಆಕ್ಷೇಪಾರ್ಹ ಡೈಲಾಗ್ ಮ್ಯೂಟ್ ಮಾಡಲು ನಿರ್ಧಾರ

ಹೆಡ್ ಬುಷ್ ಸಿನಿಮಾ ವಿವಾದ ಸುಖಾಂತ್ಯ

ಹೆಡ್ ಬುಷ್ ಸಿನಿಮಾ ವಿವಾದ ಸುಖಾಂತ್ಯ

'ಹೆಡ್‌ ಬುಷ್' ಸಿನಿಮಾದ ವಿವಾದಕ್ಕೆ (Head Bush Cinema Controversy) ಅಂತ್ಯ ಹಾಡಲಾಗಿದೆ. ಇದೀಗ ಫಿಲ್ಮ್ ಚೇಂಬರ್ (Film Chamber) ಹಾಗೂ ಚಿತ್ರ ತಂಡ ಜಂಟಿಯಾಗಿ ಸುದ್ದಿಗೋಷ್ಠಿ ಕರೆದು, ವಿವಾದ ಅಂತ್ಯವಾಗಿದ್ದಾಗಿ ಘೋಷಿಸಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಹೆಡ್ ಬುಷ್ ಸಿನಿಮಾದ ವಿವಾದ (Head Bush movie controversy) ಕೊನೆಗೂ ಅಂತ್ಯವಾಗಿದೆ. ಸಿನಿಮಾದಲ್ಲಿ ಬೆಂಗಳೂರಿನ ಪ್ರಸಿದ್ಧ ಕರಗೋತ್ಸವಕ್ಕೆ (Bengaluru Karagotsava) ಹಾಗೂ ವೀರಗಾಸೆ (Veeragase) ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಅಂತ ಭಾರೀ ವಿವಾದ ಹುಟ್ಟಿಕೊಂಡಿತ್ತು. ಈ ಬಗ್ಗೆ ನಟ ಡಾಲಿ ಧನಂಜಯ್ (Daali Dhananjay) ವಿವರಣೆ ನೀಡಿ, ವೀರಗಾಸೆಗೆ ಯಾವುದೇ ಅಪಮಾನ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಆದರೂ ಕೂಡ ಚಿತ್ರತಂಡದ ವಿರುದ್ಧ ವಿರೋಧ ಕೇಳಿಬಂದಿತ್ತು. ಆ ದೃಶ್ಯಗಳನ್ನು ಕತ್ತರಿಸಿ ಎಂದು ಕೆಲವರು ಬೇಡಿಕೆ ಇಟ್ಟಿದ್ದರು. ಇದೀಗ ಪಿಲ್ಮ್ ಚೇಂಬರ್ (Film Chamber) ಹಾಗೂ ಚಿತ್ರ ತಂಡ ಜಂಟಿಯಾಗಿ ಸುದ್ದಿಗೋಷ್ಠಿ ಕರೆದು, ವಿವಾದ ಅಂತ್ಯವಾಗಿದ್ದಾಗಿ ಘೋಷಿಸಿದೆ.


ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ


ಬೆಂಗಳೂರಿನಲ್ಲಿಂದು ಫಿಲ್ಮ್ ಚೇಂಬರ್‌ನಲ್ಲಿ ಹಾಗೂ ಹೆಡ್ ಬುಷ್ ಚಿತ್ರತಂಡ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿತು. ನಟ ಡಾಲಿ ಧನಂಜಯ, ಅಗ್ನಿ ಶ್ರೀಧರ್, ಕರಗ ಸಮಿತಿ ಹಾಗೂ ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಭಾಗಿಯಾಗಿ, ಸ್ಪಷ್ಟನೆ ನೀಡಿದ್ರು. ಹೆಡ್ ಬುಷ್ ಚಿತ್ರದಲ್ಲಿ ಕರಗ ಹಾಗೂ ವೀರಗಾಸೆ ಕುಣಿತಕ್ಕೆ ಅವಮಾನ ಮಾಡಲಾಗಿದೆ ಎಂದು ವಿವಾದ ಉಂಟಾಗಿತ್ತು. ಆದರೆ ಈಗ ಸಮಸ್ಯೆ ಬಗೆಹರಿದಿದೆ ಎಂದು ಮಾಹಿತಿ ನೀಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಸುಂದರ್ ರಾಜ್ ಹೇಳಿದ್ದಾರೆ.




ವಿವಾದಾತ್ಮಕ ಡೈಲಾಗ್ ಮ್ಯೂಟ್ ಮಾಡಲು ಒಪ್ಪಿಗೆ


ಚಿತ್ರದಲ್ಲಿ ಬರುವ ವಿವಾದಾತ್ಮಕ ಸಂಭಾಷಣೆಯನ್ನ ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿದೆ ಅಂತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡು ದಿನದಲ್ಲಿ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಲು ಒಪ್ಪಿದ್ದಾಗಿ ಹೇಳಿದ್ದಾರೆ.


ಇದನ್ನೂ ಓದಿ: Head Bush: ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ


ಡಾಲಿ ಧನಂಜಯ್ ಹೇಳಿದ್ದೇನು?


ಇನ್ನು ಈ ವೇಳೆ ಮಾತನಾಡಿದ ನಟ ಡಾಲಿ ಧನಂಜಯ, ಎಲ್ಲ ಇಲ್ಲಿ ಕೂತು ಮಾತನಾಡಿದ್ದು ತುಂಬಾ ಖಷಿಯಾಯ್ತು. ಎಲ್ಲರೂ ನೀಟಾಗಿ ಅ ವಿಚಾರದ ಬಗ್ಗೆ ಮಾತನಾಡಿದ್ರು ಸಣ್ಣಪುಟ್ಟ ತಪ್ಪುಗಳಾಗಿದ್ರೆ ಕ್ಷಮೆ ಕೇಳ್ತಿನಿ. ಎಲ್ಲರಿಗೂ ಧನ್ಯವಾದಗಳು ಸಪೋರ್ಟ್ ಮಾಡಿದ್ದಕ್ಕೆ. ಖಂಡಿತ ನಾನು ಆಡೈಲಾಗ್ ಮ್ಯೂಟ್ ಮಾಡ್ತಿನಿ ವೀರಗಾಸೆ ವಿಚಾರವನ್ನು ಕ್ಲಿಯರ್ ಮಾಡಿದ್ದೀನಿ. ನಾನು ಇಲ್ಲಿದೆ ಬಂದಿರೋದು ಸಿನಿಮಾ ಮಾಡೋಕೆ ಕಾಂಟ್ರವರ್ಸಿ ಮಾಡೋಕಲ್ಲ ಅಂತ ಹೇಳಿದ್ರು.


“ಬಡವರ ಮಕ್ಕಳು ಬೆಳೆಯಬೇಕು”


ಜನ ಎಲ್ಲ ಜೊತೆಗೆ ನಿಂತಿದ್ದಾರೆ ಇದು ಭಾವನಾತ್ಮಕ ವಿಚಾರ, ಸಿನಿಮಾ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಇರುತ್ತವೆ. ಬಡವರ ಮಕ್ಳು ಅಂದ್ರೆ ಕೇವಲ‌ ಬಡವರಲ್ಲ, ನೊಂದವರ ಪರ ನಾವು ನಿಲ್ಲಬೇಕು, ನಾನು ಈಗ ಬಡವ ಅಲ್ಲ ಜನರ ಪ್ರೀತಿ ಗಳಿಸಿರೋ ಶ್ರೀಮಂತ. ಬಡವರ ಮಕ್ಳು ಬೆಳಿಬೇಕು ಅಂತ ನಾನು ಯಾವಾಗಲೂ ಹೇಳ್ತಿನಿ, ಹಾಗಂತ ನಾನು ಬೆಳಿಬೇಕು ಅಂತಲ್ಲ ಅಂತ ಧನಂಜಯ್ ಹೇಳಿದ್ರು.


“ವಿವಾದ ಮಾಡಿದ್ದು ಆರ್‌ಎಸ್‌ಎಸ್‌ ಅಲ್ಲ, ಕಿಡಿಗೇಡಿಗಳು”


ಇನ್ನು ಬಳಿಕ ಮಾತನಾಡಿದ ಅಗ್ನಿ ಶ್ರೀಧರ್, ವೇದಿಕೆ ಮೇಲೆ ಎದುರಾಳಿಗಳಾಗಿ ಕೂತಿರೋರು ಎಲ್ಲ ನನ್ನವರೇ. ನಮ್ಮ ಸಮಸ್ಯೆ ಹಾಗೂ ಅವರ ನೋವು ನಮಗೆ ಅರ್ಥ ಆಗುತ್ತೆ. ನಿನ್ನೆ ನಾನು  ಕೋಪದಲ್ಲಿ ಕಿಡಿಗೇಡಿಗಳ ವಿರುದ್ದ ಕೂಗಾಡಿದ್ದೆ. ಈ ವಿವಾದ ಮಾಡಿದ್ದು ಅರ್ ಎಸ್ ಎಸ್ ಅಲ್ಲ ಕಿಡಿಗೇಡಿಗಳು ಅಂತ ಅವರು ಹೇಳಿದ್ರು.


ಇದನ್ನೂ ಓದಿ: Dhananjay-Head Bush: ವೀರಗಾಸೆ ವಿವಾದ! ಚಿತ್ರತಂಡ ಹೇಳಿದ್ದೇನು?


“ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ”


ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೆಗೌಡ ಮಾತನಾಡಿ, ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಏನೇ ಸಮಸ್ಯೆ ಬಂದ್ರು ಅದನ್ನ ಬಗೆಹರಿಸಿಕೊಂಡು ಬಂದಿದ್ದೀವಿ. ಈಗ ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ. ಎಲ್ಲರೂ ಹೋಗಿ ಸಿನಿಮಾ‌ ನೋಡ್ತಿವಿ ಅಂದ್ರು ಖುಷಿ ಆಯ್ತು ಅಂತ ಚಿನ್ನೇಗೌಡ ಹೇಳಿದ್ದಾರೆ..

Published by:Annappa Achari
First published: