ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಈಗ "ಸರ್ಕಾರು ವಾರಿ ಪಾಟ" ಎಂಬ ಸಿನಿಮಾ ಮಾಡುತ್ತಿದ್ದಾರೆ. ಮೇ 31 ರಂದು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಟ್ವಿಟರ್ನಲ್ಲಿ ಸಖತ್ ಟ್ರೆಂಡ್ ಆಗುತ್ತದೆ. ಮಹೇಶ್ ಅವರ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೊಂದು ಶೂರ್ ಶಾಟ್ ಗ್ಯಾರಂಟಿ ಅಂತಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯಲ್ಲಿ ಗೀತಾ ಗೋವಿಂದಂ ಸಿನಿಮಾ ನೀಡಿ ಟಾಲಿವುಡ್ನಲ್ಲಿ ಸಂಚಲನ ಎಬ್ಬಿಸಿದ್ದ ಪರಶುರಾಮ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿರಲಿದ್ದು ಮಹೇಶ್ ಬಾಬು ಇಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.
ಮತ್ತೆ ಪೊಕಿರಿ ಲುಕ್ನಲ್ಲಿ ಪ್ರಿನ್ಸ್ ಮಹೇಶ್ ಬಾಬು: ಹೊಸ ಚಿತ್ರದ ಫಸ್ಟ್ ಲುಕ್ ಔಟ್..!
ಸದ್ಯ ಕೊರೋನಾ ಕಾರಣ ಸಿನಿಮಾಗಳ ಶೂಟಿಂಗ್ ಬಂದ್ ಆಗಿದೆ. ಸರ್ಕಾರದ ಕಡೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಹೀಗಾಗಿ ಪ್ರೀ ಪ್ರೊಡಕ್ಷನ್ ಕೆಲಸವನ್ನ ಮುಗಿಸಿಕೊಂಡು, ಶೂಟಿಂಗ್ಗೆ ಕಾಲಿಡಲು ಕಾದು ಕುಳಿತಿದೆ ಚಿತ್ರತಂಡ.
ಅಂದಹಾಗೆ ಈ ಸಿನಿಮಾದಲ್ಲಿ ಕ್ಯಾಸಿನೋ ಅಡ್ಡಾ ತುಂಬಾ ಇಂಪರ್ಟೆಂಟ್ ಪಾತ್ರವಹಿಸುತ್ತೆ. ಸಿನಿಮಾದ 20ಕ್ಕೂ ಹೆಚ್ಚು ಭಾಗ ಕ್ಯಾಸಿನೋ ಅಡ್ಡಾದಲ್ಲಿಯೇ ಶೂಟ್ ಆಗಲಿದೆಯಂತೆ. ಈ ಭಾಗವನ್ನು ಶೂಟ್ ಮಾಡಲು, ಕ್ಯಾಸಿನೋ ಅಡ್ಡಾಗಳಿಗೆ ಹೆಸರಾಗಿರುವ ರಾಷ್ಟ್ರಗಳಿಗೆ ಚಿತ್ರತಂಡ ತೆರಳಬೇಕಿತ್ತು. ಆದರೀಗ ಕೊರೋನಾ ಅಟ್ಟಹಾಸಕ್ಕೆ ಅಂತರಾಷ್ಟ್ರೀಯ ಪ್ರಯಾಣ ರದ್ದಾಗಿದೆ. ಸರ್ಕಾರದ ಕಡೆಯಿಂದ ವಿದೇಶ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ಸಿಗಲು ತುಂಬಾ ಸಮಯ ಕಾಯಬೇಕಾಗುತ್ತದೆ.
ಹೀಗಾಗಿ ಚಿತ್ರತಂಡ ಕ್ಯಾಸಿನೋ ಪೋರ್ಷನ್ಗಾಗಿ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಸೆಟ್ ಹಾಕುತ್ತಿದೆ. ಕೊರೋನಾ ಕಾಲದಲ್ಲಿ ರಿಯಲ್ ಕ್ಯಾಸಿನೋ ಅಡ್ಡದಲ್ಲಿ ಶೂಟ್ ಮಾಡುವುದು ಅಪಾಯಕಾರಿ ನಿರ್ಧಾರ. ಚಿತ್ರತಂಡಕ್ಕೆ ಸೇಫ್ಟಿ ಸಹ ಇರುವುದಿಲ್ಲ. ಇದೆಲ್ಲವನ್ನೂ ಆಲೋಚಿಸಿಯೇ ಚಿತ್ರತಂಡ ಇಂತಹ ನಿರ್ಧಾರಕ್ಕೆ ಬಂದಿದೆ.
ಅಂದು ಸಿನಿಮಾ ಸಾಲ ತೀರಿಸಲು ಮನೆ ಮಾರಿದ್ದರು ನಟ ಜಗ್ಗೇಶ್!
ಸಿನಿಮಾದಲ್ಲಿ ವಿಲನ್ ಕ್ಯಾಸಿನೋ ಅಡ್ಡಾದ ಒಡೆಯನಾಗಿರ್ತಾನಂತೆ ಹಾಗೂ ನಾಯಕಿಗೆ ಕ್ಯಾಸಿನೋ ಆಡೋ ಹವ್ಯಾಸ ಇರುತ್ತದಂತೆ. ನಾಯಕಿಯಾಗಿ ಭರತ ಅನೇ ನೇನು ಸಿನಿಮಾದಲ್ಲಿ ಮಹೇಶ್ಗೆ ಜೊತೆಯಾಗಿದ್ದ ಕೈರಾ ಮತ್ತೊಮ್ಮೆ ಡ್ಯುಯೇಟ್ ಹಾಡೋ ಅವಕಾಶ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ