Anitha EAnitha E
|
news18-kannada Updated:June 15, 2020, 2:17 PM IST
ಸುಶಾಂತ್ ಸಿಂಗ್
ಪರದೆ ಮೇಲೆ ಪ್ರೇಕ್ಷಕರಿಗೆ ಸ್ಫೂರ್ತಿದಾಯ ಸಂದೇಶ ನೀಡುತ್ತಿದ್ದ ನಟ ಸುಶಾಂತ್ ಅವರ ಜೀವನವೇ ದುರಂತ ಅಂತ್ಯ ಕಂಡಿದೆ. ಸುಶಾಂತ್ ಹಾಗೂ ಕ್ರಿಕೆಟ್ಗೆ ಅವಿನಾಭಾವ ಸಂಬಂಧವಿದೆ. ಸುಶಾಂತ್ ಸಿನಿ ಜೀವನ ಆರಂಭವಾಗಿದ್ದೇ ಕ್ರಿಕೆಟರ್ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ.
ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ಮೊದಲ ಸಿನಿಮಾ ಚೇತನ್ ಭಗತ್ ಅವರ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್ ಪುಸ್ತಕ ಆಧಾರಿತ 'ಕಾಯ್ ಪೊ ಚೆ'. ಇದು 2013ರಲ್ಲಿ ತೆರೆಕಂಡ ಚಿತ್ರ. ಇದರಲ್ಲಿ ಸುಶಾಂತ್ ಕ್ರಿಕೆಟ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ.

ಸುಶಾಂತ್
ಈ ಸಿನಿಮಾದಲ್ಲಿ ಇಶಾನ್ ಪಾತ್ರದಲ್ಲಿ ನಟಿಸಿದ್ದ ಸುಶಾಂತ್, ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿರುತ್ತಾರೆ. ಆದರೆ ಅದು ಸಾಧ್ಯವಾಗದಾಗ ಕ್ರಿಕೆಟ್ ಕೋಚ್ ಆಗಲು ನಿರ್ಧರಿಸಿ, ಅವರು ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ತಮ್ಮದೇ ಆದ ಅಕಾಡೆಮಿ ತೆರೆಯುತ್ತಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಒಲ್ಲೆ ಎಂದಿದ್ದ ದೀಪಿಕಾ ಪಡುಕೋಣೆ ಶಾರುಖ್ ಜೊತೆ ನಟಿಸಲು ಸೈ ಎಂದಿದ್ದರಂತೆ..!
ಈ ಅಕಾಡೆಮಿಯಲ್ಲಿ ಮಕ್ಕಳಿಗೆ ಕ್ರಿಕೆಟ್ ಕಲಿಸುತ್ತಾರೆ. ಈ ಚಿತ್ರದಲ್ಲಿ ಕ್ರಿಕೆಟ್ ಕಲಿಯುವ ಪಾತ್ರದಲ್ಲಿ ನಟಿಸಿರುವ ಬಾಲಕ ಈಗ ಐಪಿಎಲ್ ಆಟಗಾರ. ಮುಂಬೈ ಇಂಡಿಯನ್ಸ್ ತಂಡದ ಆಟಗಾರ ದಿಗ್ವಿಜಯ್ ದೇಶ್ಮುಖ್ ಅವರು ಸಿನಿಮಾದಲ್ಲಿ ಅಲಿ ಪಾತ್ರದಲ್ಲಿ ನಟಿಸಿದ್ದರು. ಈಗಲೂ ದಿಗ್ವಿಜಯ್ ಅವರಿಗೆ ಸಿನಿಮಾದಲ್ಲಿ ತನಗೆ ಕ್ರಿಕೆಟ್ ಕಲಿಸಿದ್ದ ಸುಶಾಂತ್ ಇಲ್ಲ ಎಂಬ ಕಹಿ ಸತ್ಯವನ್ನು ನಂಬಲಾಗುತ್ತಿಲ್ಲವಂತೆ.

ಸುಶಾಂತ್ ಸಿಂಗ್ ರಜಪೂತ್
ದಿಗ್ವಿಜಯ್ ಈಗ ವೃತ್ತಿಯಲ್ಲಿ ಕ್ರಿಕೆಟರ್ ಆಗಿದ್ದು, ಈ ಸಲ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. 'ಐಪಿಎಲ್ ಹರಾಜಿನಲ್ಲಿ ನನ್ನನ್ನು ಮುಂಬೈ ಜೊತೆ ಸೇರಿಸಲಾಗಿದೆ. ನಾನು ಸದ್ಯ ಮುಂಬೈನಲ್ಲೇ ಇದ್ದೇನೆ. ಸುಶಾಂತ್ ಅವರನ್ನು ಭೇಟಿ ಮಾಡಿಬೇಕೆಂದುಕೊಂಡಿದ್ದೆ' ಎಂದಿದ್ದಾರೆ ದಿಗ್ವಿಜಯ್.
Dhruva Sarja: ಕೊನೆಯದಾಗಿ ಅಣ್ಣ ಚಿರು ಜೊತೆ ತೆಗೆದಿದ್ದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ..!
ಇದನ್ನೂ ಓದಿ: Keerthy Suresh: ಕೀರ್ತಿ ಸುರೇಶ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?
First published:
June 15, 2020, 8:06 AM IST