ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಎಲ್ಲ ಫೋಟೋ-ವಿಡಿಯೋಗಳನ್ನು ತೆಗೆದ ಶ್ರದ್ಧಾ ಕಪೂರ್​!

news18
Updated:July 23, 2018, 5:23 PM IST
ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಎಲ್ಲ ಫೋಟೋ-ವಿಡಿಯೋಗಳನ್ನು ತೆಗೆದ ಶ್ರದ್ಧಾ ಕಪೂರ್​!
news18
Updated: July 23, 2018, 5:23 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್​ನ ಮುದ್ದು ಮೊಗದ ಚೆಲುವೆ ಶ್ರದ್ಧಾ ಕಪೂರ್​ ಇದ್ದಕ್ಕಿಂದ್ದಂತೆಯೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ಫೋಟೋಗಳು ಹಾಗೂ ವಿಡಿಯೋಗಳನ್ನು ಡಿಲೀಟ್​ ಮಾಡಿದ್ದಾರೆ. ಆದರೆ ಅವರ ಈ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ.

ನಿನ್ನೆಯಷ್ಟೆ ಅವರ ಮುಂಬರುವ ಸಿನಿಮಾದ 'ಮರ್ದ್​ ಕೊ ದರ್ದ್​ ಹೋಗ' ಎಂಬ ಪಂಚಿಂಗ್​ ಲೈನ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದರು. ಆದರೆ ಇಂದು ಅವರ ಖಾತೆ ಸಂಪೂರ್ಣವಾಗಿ ಖಾಲಿ ಖಾಲಿ ಆಗಿದೆ.ಅವರು ಫೋಟೋ ಹಾಗೂ ವಿಡಿಯೋ ಡಿಲೀಟ್​ ಮಾಡಲು ಸರಿಯಾದ ಕಾರಣ ತಿಳಿದು ಬಂದಿಲ್ಲವಾದರೂ, ತಮ್ಮ ಮುಂದಿನ ಸಿನಿಮಾ 'ಸ್ತ್ರೀ' ಹಾರರ್​ ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಮಾಡಿರಬಹುದು ಎನ್ನಲಾಗುತ್ತಿದೆ. ಅಮರ್​ ಕೌಶಿಕ್​ ಅವರ ಸ್ತ್ರೀ ಸಿನಿಮಾದಲ್ಲಿ ಶ್ರದ್ಧಾ  ರಾಜಕುಮಾರ್​ ರಾವ್​ ಅವರೊಂದಿಗೆ ಅಭಿನಯಿಸಿದ್ದಾರೆ.

ಶ್ರದ್ಧಾ ಕೇವಲ ಇನ್​ಸ್ಟಾಗ್ರಾಂ ಅಲ್ಲದೆ ಟ್ವಿಟರ್​ನ ಡಿಪಿ (ಡಿಸ್​ಪ್ಲೆ ಪಿಕ್ಚರ್​) ಸಹ ತೆಗೆದು ಹಾಕಿದ್ದಾರೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ