ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದರಂತೆ ಎಲ್ಲವೂ ರಿಲೀಸ್ಗೆ ಸಿದ್ಧವಾಗುತ್ತಿವೆ. ಅದರಲ್ಲೂ ಅವರ ಬಹುನಿರೀಕ್ಷಿತ ಸಿನಿಮಾಗಳೆಂದರೆ ಫ್ಯಾಂಟಮ್ ಹಾಗೂ ಕೋಟಿಗೊಬ್ಬ 3. ಲಾಕ್ಡೌನ್ನಿಂದಾಗಿ ಈ ಎರಡೂ ಚಿತ್ರಗಳ ಚಿತ್ರೀರಕಣ ನಿಂತಿತ್ತು. ಒಮ್ಮೆ ಹೈದರಾಬಾದಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸುದೀಪ್ ತಮ್ಮ ಫ್ಯಾಂಟಮ್ ಚಿತ್ರತಂಡದೊಂದಿಗೆ ಹೈದರಾಬಾದಿಗೆ ಹಾರಿದ್ದರು. ಜೊತೆಗೆ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಸ್ಯಾಂಡಲ್ವುಡ್ ತಂತ್ರಜ್ಙರು, ಲೈಟ್ಬಾಯ್, ಸ್ಪಾಟ್ಬಾಯ್ ಹೀಗೆ ಚಿತ್ರೀಕರಣಕ್ಕೆ ಅಗತ್ಯ ಸಿಬ್ಬಂದಿಗಳನ್ನೂ ಇಲ್ಲಿಂದಲೇ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದರು. ನಂತರ ಚಿತ್ರದ ಚಿತ್ರೀಕರಣ ಕುರಿತಂತೆ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ ಅಪ್ಡೇಟ್ ಕೊಡುತ್ತಿದ್ದರು. ಈಗ ಈ ಸಿನಿಮಾ ಕುರಿತಾಗಿ ದೊಡ್ಡ ಅಪ್ಡೇಟ್ ಕೊಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಒಂದೊಂದೇ ಸ್ಟಾರ್ ನಟರು ಅಭಿನಯಿಸಿರುವ ಚಿತ್ರತಂಡಗಳು ತಮ್ಮ ಸಿನಿಮಾಗಳ ರಿಲೀಸ್ ದಿನಾಂಕ ಪ್ರಕಟಿಸುತ್ತಿವೆ. ಜೊತೆಗೆ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಅಪ್ಡೇಟ್ ಕೊಡಲಾರಂಭಿಸಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಸಹ ತಮ್ಮ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್ ಕುರಿತಾಗಿ ದೊಡ್ಡ ಅಪ್ಡೇಟ್ ಕೊಡಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ: V Doraswami Raju Passes Away: ಖ್ಯಾತ ನಿರ್ಮಾಪಕ ವಿ ದೊರಸ್ವಾಮಿ ರಾಜು ನಿಧನ: ಶೋಕದಲ್ಲಿ ಟಾಲಿವುಡ್.!
ಈಗಾಗಲೇ ಸುದೀಪ್ ಅವರ ಫಸ್ಟ್ಲುಕ್ ಹಾಗೂ ವಿಡಿಯೋಗಳು ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕೂತೂಹಲವನ್ನು ಹೆಚ್ಚಿಸಿದೆ.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ