Telugu Movies: 2022ರ ಇಲ್ಲಿಯವರೆಗೆ ಬಿಡುಗಡೆಯಾದ ಸೂಪರ್ ಹಿಟ್ - ಫ್ಲಾಪ್ ತೆಲುಗು ಚಿತ್ರಗಳ ಲಿಸ್ಟ್ ಇಲ್ಲಿದೆ

ಬಿಗ್ ಬಜೆಟ್ ಸಿನೆಮಾಗಳನ್ನು ನೀಡುತ್ತಾ ಬಂದಿರುವ ಟಾಲಿವುಡ್ ಎಂದರೆ ತೆಲುಗು ಚಿತ್ರೋದ್ಯಮದ ಪಾಲಿಗೆ ಈ ವರ್ಷದ ಮೊದಲಾರ್ಧ ಹೇಗಿತ್ತು ಅಂತ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೊನ್ನೆ ಎಂದರೆ ಜೂನ್ 30, ಬರೋಬ್ಬರಿ ಈ 2022 ರ ವರ್ಷದ ಮೊದಲಾರ್ಧ ಮುಗಿದಿದೆ ಅಂತ ಅರ್ಥ. ಆಯಾ ಚಿತ್ರರಂಗದ (Cinema) ನಿರ್ದೇಶಕ (Director), ನಿರ್ಮಾಪಕರು (Producer) ಈ ವರ್ಷದ ಮೊದಲಾರ್ಧದಲ್ಲಿ ಜನರಿಗೆ ಎಂತಹ ಚಿತ್ರ ನೀಡಿದ್ದೇವೆ ಮತ್ತು ಜನ ಅದನ್ನು ಯಾವ ರೀತಿಯಾಗಿ ಸ್ವೀಕರಿಸಿದ್ದಾರೆ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವ ಸಮಯ ಇದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಬಿಗ್ ಬಜೆಟ್ ಸಿನೆಮಾಗಳನ್ನು (big budget movie) ಇತ್ತೀಚೆಗೆ ಮಾಡುತ್ತಿರುವುದು ಎಂದರೆ ಅದು ದಕ್ಷಿಣ ಭಾರತದ ಚಿತ್ರೋದ್ಯಮಗಳು (film industry) ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಬನ್ನಿ ಹಾಗಾದರೆ ಬಿಗ್ ಬಜೆಟ್ ಸಿನೆಮಾಗಳನ್ನು ನೀಡುತ್ತಾ ಬಂದಿರುವ ಟಾಲಿವುಡ್ ಎಂದರೆ ತೆಲುಗು ಚಿತ್ರೋದ್ಯಮದ ಪಾಲಿಗೆ ಈ ವರ್ಷದ ಮೊದಲಾರ್ಧ ಹೇಗಿತ್ತು ಅಂತ ನೋಡೋಣ.

ಗಲ್ಲಾಪೆಟ್ಟಿಗೆಯ ವ್ಯವಹಾರವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದ ಸಿನೆಮಾಗಳು
ಈ 2022 ವರ್ಷದ ಮೊದಲಾರ್ಧವು ತೆಲುಗು ಚಲನಚಿತ್ರೋದ್ಯಮಕ್ಕೆ ಸಾಕಷ್ಟು ಉಲ್ಲಾಸದಾಯಕವಾಗಿತ್ತು. ಇದು ಕೇವಲ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳಲ್ಲಿ ಚಲನಚಿತ್ರ ಮಂದಿರಗಳನ್ನು ಭರ್ತಿ ಮಾಡುವಲ್ಲಿ ದೊಡ್ಡ ಪಾತ್ರವನ್ನು ಹೊಂದಿತ್ತು. ಬಿಗ್ ಬಜೆಟ್ ಚಿತ್ರಗಳು ಈ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತದಲ್ಲಿ ಸಿನೆಮಾ ಉದ್ಯಮದಲ್ಲಿ ಬಾಕ್ಸ್ ಆಫೀಸ್ ಎಂಬ ಗಲ್ಲಾಪೆಟ್ಟಿಗೆಯ ವ್ಯವಹಾರವನ್ನು ಪುನರುಜ್ಜೀವನಗೊಳಿಸಲು ಅಪಾರವಾಗಿ ಸಹಾಯ ಮಾಡಿದವು ಎಂದು ಹೇಳಬಹುದು.

ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ
ದಿ ರೈಸ್ ದೇಶಾದ್ಯಂತ, ವಿಶೇಷವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ತುಂಬಾನೇ ಅಚ್ಚರಿ ಮೂಡಿಸುವಂತೆ ಹಣ ಗಳಿಸಿದೆ. ಈ ಚಿತ್ರವು 2021 ರ ಕ್ರಿಸ್ಮಸ್ ರಜಾದಿನದ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಪ್ರಮುಖ ಸವಾಲುಗಳಿಲ್ಲದೆ ಜನವರಿಯ ಮೊದಲಾರ್ಧದಲ್ಲಿ ತನ್ನ ಯಶಸ್ವಿ ಓಟವನ್ನು ಅದೇ ವೇಗದಲ್ಲಿ ಮುಂದುವರಿಸಿತು.

ಇದನ್ನೂ ಓದಿ: Kiccha Sudeep: ಆ್ಯಸಿಡ್​ ದಾಳಿ ಸಂತ್ರಸ್ತೆಯ ಆಸೆ ಈಡೇರಿಸಿದ ಕಿಚ್ಚ, ಇದಕ್ಕೆ ಹೇಳೋದು ಸುದೀಪ ಅಭಿಮಾನಿಗಳ ಬಾಳಿಗೆ ನಂದಾದೀಪ!

ಪುಷ್ಪ ಚಿತ್ರ ದೊಡ್ಡ ಹಿಟ್ ಆಯಿತು, ಚಿತ್ರದಲ್ಲಿ ಪುಷ್ಪ ಪಾತ್ರದ ನಡವಳಿಕೆಗಳು ಮತ್ತು ಅತಿಯಾದ ವೀರೋಚಿತ ಪಂಚ್ ಲೈನ್ ಗಳು ಮನೆಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಪಾರ್ಟಿಗಳಿಂದ ಹಿಡಿದು ಸಾರ್ವಜನಿಕ ಹಿತಾಸಕ್ತಿ ಪ್ರಕಟಣೆಗಳು, ಮದುವೆ ಸಮಾರಂಭಗಳು, ಚುನಾವಣಾ ಪ್ರಚಾರಗಳವರೆಗೆ ಜನರನ್ನು ಪೂರ್ತಿಯಾಗಿ ಮೋಡಿ ಮಾಡಿದ್ದವು.

ಆಂಧ್ರಪ್ರದೇಶದಲ್ಲಿ ಹೆಚ್ಚು ಹಣ ಗಳಿಸಲು ವಿಫಲ ಪುಷ್ಪ ಸಿನೆಮಾ
ಪುಷ್ಪ ಚಿತ್ರ ಹಿಂದಿ ಬೆಲ್ಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದರೂ, ಚಿತ್ರವು ತನ್ನ ತವರು ನೆಲವಾದ ಆಂಧ್ರಪ್ರದೇಶದಲ್ಲಿ ಹೆಚ್ಚು ಹಣ ಗಳಿಸಲು ವಿಫಲವಾಯಿತು. ಮೊದಲ ದಿನದಿಂದಲೇ ಚಿತ್ರ ಮಂದಿರಗಳು ಜನರಿಂದ ಕಿಕ್ಕಿರಿದು ತುಂಬಿದ್ದರೂ ಸಹ ಈ ಚಲನಚಿತ್ರದ ಟಿಕೆಟ್ ಬೆಲೆಗಳನ್ನು ನಿಯಂತ್ರಿಸುವಲ್ಲಿ ಆ ಸಮಯದಲ್ಲಿ ರಾಜ್ಯ ಸರ್ಕಾರದ ಕಠಿಣ ನೀತಿಯು ಚಲನಚಿತ್ರದ ಲಾಭವನ್ನು ಕಡಿಮೆ ಮಾಡಿತ್ತು.

ಅನೇಕ ಮಾತುಕತೆಗಳ ನಂತರದಲ್ಲಿ ಸರ್ಕಾರವು ಚಿತ್ರಮಂದಿರಗಳಲ್ಲಿ ಮೂಲ ಟಿಕೆಟ್ ದರಗಳನ್ನು ಹೆಚ್ಚಿಸಲು ಅವಕಾಶ ನೀಡಿತು, ಇದು ಭವಿಷ್ಯದ ಚಲನಚಿತ್ರಗಳಿಗೆ ಲಾಭ ಗಳಿಸಲು ಅನುವು ಮಾಡಿಕೊಟ್ಟಿತು. ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಸಹ ದೊಡ್ಡ ಫಲಾನುಭವಿಗಳಲ್ಲಿ ಒಂದಾಗಿದೆ. ರಾಮ್ ಚರಣ್-ಜೂನಿಯರ್ ಎನ್‌ಟಿಆರ್ ಅಭಿನಯದ ಚಿತ್ರವು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ನಂತರ ಭಾರತದಲ್ಲಿ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಂಸೆಗಳನ್ನು ಗಳಿಸಿತು.

ಒಟ್ಟಿನಲ್ಲಿ ಹೇಳುವುದಾದರೆ ಈ ವರ್ಷದ ಮೊದಲಾರ್ಧದಲ್ಲಿ ತೆಲುಗು ಚಲನಚಿತ್ರೋದ್ಯಮವು ಬೆರಳೆಣಿಕೆಯಷ್ಟು ಉತ್ತಮ ಚಲನಚಿತ್ರಗಳನ್ನು ನೀಡಿತು ಮತ್ತು ಕೆಟ್ಟ ಚಲನಚಿತ್ರಗಳ ಅನುಪಾತವನ್ನು ಉತ್ತಮ ಚಲನಚಿತ್ರಗಳಿಗೆ ಹೊಲಿಸಿದರೆ ಕಡಿಮೆಯೇ ಇತ್ತು ಎಂದು ಹೇಳಬಹುದು.

ಉತ್ತಮವಾಗಿ ಹಣ ಗಳಿಸಿದ ಒಳ್ಳೆಯ ಚಿತ್ರಗಳು:
ಆರ್‌ಆರ್‌ಆರ್
ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಬ್ರಿಟಿಷ್ ರಾಜ್ ವಿರುದ್ಧ ಸ್ವಾತಂತ್ರ್ಯ ದಂಗೆಯನ್ನು ಮರು ರೂಪಿಸಿರುವ ಚಿತ್ರವು ಇದಾಗಿದ್ದು, ಎರಡು ವರ್ಷಗಳ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಅದರೊಂದಿಗೆ ತಂದ ಕಹಿ ಅನುಭವದ ನಂತರ ಪ್ರೇಕ್ಷಕರಿಗೆ ಬಹಳ ಅಗತ್ಯವಾದ ವಿರಾಮವಾಗಿತ್ತು. 1920ರ ದಶಕದಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರದ ಉತ್ತುಂಗದಲ್ಲಿದ್ದಂತಹ ಸಮಯದಲ್ಲಿನ ಕಥೆಯೊಂದನ್ನು ಹೆಣೆಯಲಾಗಿತ್ತು.

ಈ ಚಲನಚಿತ್ರದಲ್ಲಿನ ಪ್ರಮುಖವಾದ ವಿಶೇಷತೆ ಎಂದರೆ ಇಬ್ಬರು ತೆಲುಗು ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಒಟ್ಟಿಗೆ ನಟಿಸಿರುವುದು. ಸರಾಸರಿ ಮಾನವರ ನೈಸರ್ಗಿಕ ಮತ್ತು ಸೀಮಿತ ಶಕ್ತಿಗಳನ್ನು ಮೀರಿದ ಕೆಲವು ನಂಬಲಾಗದ ಸಾಹಸಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಚಿತ್ರವು ಇಬ್ಬರು ಭಾರತೀಯರು ಪ್ರತಿಯೊಂದು ಅಂಶದಲ್ಲೂ ಸಾಮ್ರಾಜ್ಯಶಾಹಿ ಮತಾಂಧರ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿತ್ತು.

ಮೇಜರ್
ಚಿತ್ರದ ಚಿತ್ರಕಥೆಯನ್ನು ಬರೆದ ಅಡಿವಿ ಶೇಷರಿಗೆ ಮೇಜರ್ ಒಂದು ಪ್ಯಾಷನ್ ಪ್ರಾಜೆಕ್ಟ್ ಆಗಿತ್ತು, ಜೊತೆಗೆ ಅದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 26/11 ಘಟನೆಯಲ್ಲಿ ದೇಶಕ್ಕಾಗಿ ಪ್ರಾಣವನ್ನೇ ನೀಡಿದ ನಾಯಕ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಮತ್ತು ತ್ಯಾಗಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಕಥೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ ಎಂದು ಹೇಳಬಹುದು.

ಇದನ್ನೂ ಓದಿ:  Rakul Preet Singh: ರಾಕುಲ್ ಪ್ರೀತ್ ಸಿಂಗ್​ ಕಂಡು ನೆಟ್ಟಿಗರು ಕ್ಲೀನ್​ ಬೋಲ್ಡ್​! ವೈರಲ್ ಆಯ್ತು ಫೋಟೋಸ್

ಚಲನಚಿತ್ರದ ಭಾವನಾತ್ಮಕ ಅಂಶವು ಪರಿಚಿತವಾಗಿದ್ದರೂ ಸಹ, ತಲ್ಲೀನವಾಗಿದೆ. ಮತ್ತು ಸಾಕಷ್ಟು ಕ್ರೆಡಿಟ್ ರೇವತಿ ಮತ್ತು ಪ್ರಕಾಶ್ ರಾಜ್ ಅವರಿಗೆ ಹೋಗಬೇಕು. ಗಡಿಯಲ್ಲಿ ಹೋರಾಡಲು ತಮ್ಮ ಮಗನನ್ನು ಕಳುಹಿಸಲು ಇಷ್ಟವಿಲ್ಲದ ಪೋಷಕರ ಆಲೋಚನಾ ಪ್ರಕ್ರಿಯೆಗೆ ಅವರು ತುಂಬಾನೇ ಜೀವ ತುಂಬಿ ಅಭಿನಯಿಸಿದ್ದಾರೆ.

ಅಂಟೇ ಸುಂದರಾನಿಕಿ
ಈ ಚಿತ್ರದಲ್ಲಿ ತೋರಿಸಿರುವ ಸುಂದರ್ ಎಂಬ ಪಾತ್ರಕ್ಕೆ ಚಿತ್ರಕಥೆ ಸರಿಯಾಗಿ ಹೊಂದಿಕೆಯಾಗಿದೆ. ಇದು ಇನ್-ಫಾರ್ಮ್ ನಾಯಕ ನಟನಾದ ನಾನಿ ಅಭಿನಯದ ಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಸುಂದರ್ ಮತ್ತು ಲೀಲಾ (ನಜ್ರಿಯಾ ನಜೀಮ್) ಸಂಪ್ರದಾಯವಾದಿ ಕುಟುಂಬಗಳಿಗೆ ಸೇರಿದವರು, ಅವರಿಬ್ಬರು ಪ್ರೀತಿ ಮಾಡುತ್ತಾರೆ ಮತ್ತು ಅವರ ಪ್ರೀತಿಗೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ ಮತ್ತು ಇಬ್ಬರು ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ತುಂಬಾನೇ ಹಾಸ್ಯಸ್ಪದವಾಗಿ ತೋರಿಸಿದ್ದಾರೆ.

ವಿರಾಟ ಪರ್ವಂ
ಈ ಚಿತ್ರವು ಸಹ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ ಸೇರುತ್ತದೆ. ನಟಿ ಸಾಯಿ ಪಲ್ಲವಿಯವರ ಪ್ರೀತಿಯ ಮತ್ತು ಚಲನಶೀಲ ಸೂಕ್ಷ್ಮ ಅಭಿನಯ ಇಲ್ಲದಿದ್ದರೆ, ಈ ಚಿತ್ರವು ಅಷ್ಟಕಷ್ಟೆ ಇರುತ್ತಿತ್ತು ಅಂತ ಚಿತ್ರ ನೋಡಿದವರು ಹೇಳುತ್ತಾರೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು ತನ್ನ ಕ್ರಾಂತಿಕಾರಿ ಕವಿತೆಗಳಿಂದ ತನ್ನ ಹೃದಯವನ್ನು ಕದ್ದ ನಕ್ಸಲ್ ನಾಯಕನನ್ನು ಹುಡುಕಿಕೊಂಡು ಅತ್ಯಂತ ಅಸುರಕ್ಷಿತ ಕಾಡಿಗೆ ಜೀವನವನ್ನು ಬದಲಾಯಿಸುವ ಪ್ರಯಾಣವನ್ನು ಕೈಗೊಳ್ಳುವ ಧೈರ್ಯಶಾಲಿ ಮಹಿಳೆಯ ಪ್ರೇಮಕಥೆಯನ್ನು ಹೇಳುತ್ತದೆ.

ಅಷ್ಟಾಗಿ ಹಣ ಗಳಿಸದೆ ಇರುವ ಚಿತ್ರಗಳು:
ಸರ್ಕಾರು ವಾರಿ ಪಾಟಾ
ಈ ಚಿತ್ರದಲ್ಲಿ ನಟ ಮಹೇಶ್ ಬಾಬು ತನ್ನ ಸಮಸ್ಯೆಗಳನ್ನು ಪರಿಹರಿಸಲು ತನ್ನ ತಾಯ್ನಾಡಿಗೆ ಮರಳುವ ಅನಿವಾಸಿ ಭಾರತೀಯ ಪಾತ್ರದಲ್ಲಿ ನಟಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಮತ್ತು ಹೋರಾಡಲು ಹಳ್ಳಿಯ ಜನರನ್ನು ಹುರಿದುಂಬಿಸುವ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಚಿತ್ರದ ವಿಷಯವು ಪ್ರಸ್ತುತವಾಗಿದೆ ಮತ್ತು ವೇಗವಾಗಿಯೂ ಇದೆ. ಆದರೆ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ಈ ಚಲನಚಿತ್ರದ ಮೂಲಕ ನಾಯಕ ಮಹೇಶ್ ಬಾಬು ಅವರ ಅಭಿಮಾನಿಗಳ ಮನವನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದು.

ಆಚಾರ್ಯ
ಇದು ತೆಲುಗು ಚಲನಚಿತ್ರೋದ್ಯಮದಿಂದ ಹೊರ ಬಂದ ಅತ್ಯಂತ ನೀರಸ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಪ್ರತಿಯೊಂದು ಫ್ರೇಮ್ ಮತ್ತು ದೃಶ್ಯವು ನಿರ್ದೇಶಕ ಕೊರಟಾಲ ಶಿವ ಅವರು ತಮ್ಮ ಮೂಲ ಆಲೋಚನೆಗಳನ್ನು ಪರದೆಯ ಮೇಲೆ ತರುವಲ್ಲಿ ವಿಫಲರಾಗಿರುವುದನ್ನು ತೋರಿಸುತ್ತದೆ.

ಬಂಗಾರರಾಜು
ಬಂಗಾರರಾಜು ಚಿತ್ರವು ಸೊಗ್ಗಡೆ ಚಿನ್ನಿ ನಯನ ಚಿತ್ರದ ಮುಂದುವರೆದ ಭಾಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ನಾಗ ಚೈತನ್ಯ ಅವರ ನಟನಾ ವೃತ್ತಿಜೀವನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಟ ನಾಗಾರ್ಜುನ ಅಕ್ಕಿನೇನಿ ಅವರ ಪ್ರಯತ್ನವೆಂದು ತೋರುತ್ತದೆ. ನಾಗಾರ್ಜುನ ನಿಜವಾಗಿಯೂ ನಾಗ ಚೈತನ್ಯನಿಗೆ ಸಹಾಯ ಮಾಡಲು ಬಯಸಿದರೆ, ಅವರು ಮೊದಲು ಇಂತಹ ಚಿತ್ರವನ್ನು ಏಕೆ ಮಾಡುತ್ತಾರೆ ಎಂಬ ಪ್ರಶ್ನೆಯು ಅಭಿಮಾನಿಗಳಲ್ಲಿ ಕಾಡುವುದಂತೂ ಗ್ಯಾರೆಂಟಿ.

ಇದನ್ನೂ ಓದಿ: Rashmika Mandanna: ಮತ್ತೆ ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಫೋಟೋಗಳು, ಶ್ರೀವಲ್ಲಿ ನೋಡಿ ಸೂಪರ್ ಅಂದ್ರು ಫ್ಯಾನ್ಸ್

ರಾಧೆ ಶ್ಯಾಮ್
ಬಾಹುಬಲಿ 1 ಮತ್ತು 2 ಚಿತ್ರದ ಭರ್ಜರಿ ಯಶಸ್ಸಿನ ನಂತರ, ನಟ ಪ್ರಭಾಸ್ ಅವರಿಗೆ ಎಂತಹ ಚಿತ್ರಗಳನ್ನು ಮಾಡಬೇಕು ಅಂತ ಗೊಂದಲದಲ್ಲಿರುವುದಂತೂ ನಿಜ. ಇವರು ದೊಡ್ಡ ದೊಡ್ಡ ಬ್ಲಾಕ್‌ಬಸ್ಟರ್ ಬಲೆಗೆ ಬಿದ್ದಿದ್ದಾರೆ. ಒಂದು ಚಲನಚಿತ್ರವು ಉತ್ತಮವಾದ ಕಥೆಯನ್ನು ಹೊಂದಿಲ್ಲದಿದ್ದರೂ ಪರವಾಗಿಲ್ಲ, ಪ್ರಭಾಸ್ ಅವರು ಅದರಲ್ಲಿ ನಟಿಸುವುದಕ್ಕೆ ಯಾವುದೇ ಸಂಕೋಚ ಪಡುವುದಿಲ್ಲ ಅಂತ ಈ ಚಿತ್ರ ನೋಡಿದವರಿಗೆ ಅನ್ನಿಸುತ್ತದೆ.

ಭೀಮಲಾ ನಾಯಕ್
ಇದು ಮಲಯಾಳಂನ ಸೂಪರ್ ಹಿಟ್ ‘ಅಯ್ಯಪ್ಪನುಮ್ ಕೋಶಿಯುಮ್’ ನ ರಿಮೇಕ್ ಆಗಿದೆ. ವಕೀಲ್ ಸಾಬ್ ಚಿತ್ರದಂತೆ ನಟ ಪವನ್ ಕಲ್ಯಾಣ್ ಈ ಚಿತ್ರವನ್ನು ಮಾಡಲು ಒಂದು ಮಾರ್ಗವನ್ನು ಕಂಡು ಕೊಳ್ಳುತ್ತಾರೆ, ಇದು ಮೂಲತಃ ಅಹಂಗಳ ಯುದ್ಧವಾಗಿದ್ದು, ಇದು ವರ್ಗ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳೊಂದಿಗೆ ವ್ಯವಹರಿಸುತ್ತದೆ.
Published by:Ashwini Prabhu
First published: