• Home
  • »
  • News
  • »
  • entertainment
  • »
  • The Archies: ಶಾರುಖ್ ಮಗಳ ಮೊದಲ ಸಿನಿಮಾ ಇದೇ ಇರ್ಬೇಕು ಅಂತ ಮೊದ್ಲೇ ಡಿಸೈಡ್ ಆಗಿತ್ತಾ?

The Archies: ಶಾರುಖ್ ಮಗಳ ಮೊದಲ ಸಿನಿಮಾ ಇದೇ ಇರ್ಬೇಕು ಅಂತ ಮೊದ್ಲೇ ಡಿಸೈಡ್ ಆಗಿತ್ತಾ?

ದ ಆರ್ಚೀಸ್' ಹಿಂದಿ ರೂಪಾಂತರದ ಪೋಸ್ಟರ್

ದ ಆರ್ಚೀಸ್' ಹಿಂದಿ ರೂಪಾಂತರದ ಪೋಸ್ಟರ್

ಬಾಲಿವುಡ್‍ನ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್, ಆರ್ಚೀಸ್ ಕಾಮಿಕ್ಸ್‌‌‌‌‌‍ನ ಹಿಂದಿ ರೂಪಾಂತರ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎಂಬುವುದು ಬಾಲಿವುಡ್ ಅಂಗಳದಲ್ಲಿ ಈ ಮೊದಲೇ ಸುದ್ದಿಯಾಗಿ, ಸಿನಿಮಾ ಪ್ರಿಯರ ಕುತೂಹಲ ಕೆರಳಿಸಿತ್ತು. ಸುಹಾನ ಖಾನ್ ಮತ್ತು ಖುಷಿ ಕಪೂರ್ ಅವರ ವಿಗ್ ಮತ್ತು ಉಡುಗೆ ತೊಡುಗೆಗಳನ್ನು ಗಮನಿಸಿಯೇ ನೆಟ್ಟಿಗರು, ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ಊಹಿಸಿದ್ದರು ಕೂಡ.

ಮುಂದೆ ಓದಿ ...
  • Share this:

ಬಾಲಿವುಡ್‍ನ (Bollywood) ಜನಪ್ರಿಯ ನಿರ್ದೇಶಕಿ (Director) ಜೋಯಾ ಅಖ್ತರ್ Joya Akhtar), ಆರ್ಚೀಸ್ ಕಾಮಿಕ್ಸ್‌‌‌‌‌‍ನ (Archie's Comics) ಹಿಂದಿ ರೂಪಾಂತರ ಸಿನಿಮಾವನ್ನು (Cinema) ನಿರ್ದೇಶಿಸುತ್ತಿದ್ದಾರೆ ಎಂಬುವುದು ಬಾಲಿವುಡ್ ಅಂಗಳದಲ್ಲಿ ಈ ಮೊದಲೇ ಸುದ್ದಿಯಾಗಿ, ಸಿನಿಮಾ ಪ್ರಿಯರ ಕುತೂಹಲ ಕೆರಳಿಸಿತ್ತು. ಈ ಸಿನಿಮಾದ ಚಿತ್ರೀಕರಣದ ಕ್ಷಣಗಳ ಕೆಲವೊಂದು ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡಿದ್ದವು. ಸುಹಾನ ಖಾನ್ (Suhana Khan) ಮತ್ತು ಖುಷಿ ಕಪೂರ್ (Khushi Kapoor) ಅವರ ವಿಗ್ ಮತ್ತು ಉಡುಗೆ ತೊಡುಗೆಗಳನ್ನು ಗಮನಿಸಿಯೇ ನೆಟ್ಟಿಗರು, ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ಊಹಿಸಿದ್ದರು ಕೂಡ.


ಆರ್ಚೀಸ್ ನ ಹಿಂದಿ ರೂಪಾಂತರದ ಮೊದಲ ನೋಟ
ಇದೀಗ ದ ಆರ್ಚೀಸ್ ನ ಹಿಂದಿ ರೂಪಾಂತರದ ಮೊದಲ ನೋಟ ಹೊರ ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಚಿತ್ರದ ತಯಾರಕರು ಅಂದರೆ ನೆಟ್‍ಫ್ಲಿಕ್ಸ್, ಸಿನಿಮಾದ ಮೊದಲ ಪೋಸ್ಟರ್ ಅನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ನಿಮ್ಮ ಪಿಕ್ನಿಕ್ ಬಾಸ್ಕೆಟ್‍ಗಳನ್ನು ಎತ್ತಿಕೊಳ್ಳಿ ಮತ್ತು ನಿಮ್ಮ ಅತ್ಯಂತ ಸುಂದರ ಬಟ್ಟೆಗಳನ್ನು ಆರಿಸಿಕೊಳ್ಳಿ, ನಾವು ಆರ್ಚಿಯ ಗ್ಯಾಂಗ್ ಅನ್ನು ಅಭಿನಂದಿಸ ಹೊರಟಿದ್ದೇವೆ.


ಜೋಯಾ ಅಖ್ತರ್ "ಸಿನಿಮಾದ ಆರ್ಚೀಸ್‍ನ ಪಾತ್ರ ವರ್ಗವನ್ನು ಪ್ರಸ್ತುತ ಪಡಿಸುತ್ತಿದ್ದೆವೆ” ಎಂದು ಬರೆದುಕೊಂಡಿದ್ದಾರೆ. ಆ ಪೋಸ್ಟರ್‍ನಲ್ಲಿ, ಸುಹಾನ ಖಾನ್ ವೆರೋನಿಕಾ ಆಗಿ, ಖುಷಿ ಕಪೂರ್ ಬೆಟ್ಟಿಯಾಗಿ ಮತ್ತು ಅಗಸ್ತ್ಯ ನಂದ ಆರ್ಚೀಸ್ ಆಗಿ ಕಾಣಿಸಿಕೊಂಡಿದ್ದಾರೆ.


ನೆಟ್‍ಫ್ಲಿಕ್ಸ್ ಅದರ ಟೀಸರ್ ರಿಲೀಸ್
ನೆಟ್‍ಫ್ಲಿಕ್ಸ್ ಅದರ ಟೀಸರನ್ನು ಕೂಡ ಹಂಚಿಕೊಂಡಿದ್ದು, ಸಿನಿಮಾದ ಇತರ ಪಾತ್ರಗಳನ್ನು ನಮಗೆ ಪರಿಚಯಿಸುತ್ತಾ “ಸೂರ್ಯ ಹೊರಗೆ ಬಂದಿದ್ದಾನೆ, ಸುದ್ದಿ ಹೊರಗೆ ಬಂದಿದೆ ! ಬನ್ನಿ ನಿಮ್ಮ ಹೊಸ ಸ್ನೇಹಿತರನ್ನು ಭೇಟಿಯಾಗಿ. ಫ್ಯಾಂಟ್ಯಾಸ್ಟಿಕ್ ಜೋಯಾ ಅಖ್ತರ್ ಅವರ ನಿರ್ದೇಶನದ ದ ಆರ್ಚೀಸ್ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದೇವೆ” ಎಂಬ ಅಡಿಬರಹವನ್ನು ನೀಡಿದ್ದಾರೆ.


ಇದನ್ನೂ ಓದಿ:  RIP Anekal Balaraj: ರಸ್ತೆ ಅಪಘಾತದಲ್ಲಿ ‘ಕರಿಯ' ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ


ಆರ್ಚೀ ಆ್ಯಂಡ್ರಿವ್ಸ್ ಮತ್ತು ಅವನ ಸ್ನೇಹಿತರಾದ ವೆರೋನಿಕಾ, ಬೆಟ್ಟಿ, ಜಗ್‍ಹೆಡ್ ಮತ್ತು ರೆಜಿಯನ್ನು ಒಳಗೊಂಡ ತಂಡದ ಸಾಹಸಗಳ ಹಲವಾರು ರೂಪಾಂತರಗಳು ಈಗಾಗಲೇ ಹಲವಾರು ಚಲನಚಿತ್ರಗಳು ಮತ್ತು ಕಾರ್ಟೂನ್ ಸರಣಿಗಳ ಮೂಲಕ ಜಗತ್ತಿನಾದ್ಯಂದ ಜನಪ್ರಿಯವಾಗಿವೆ.


ಕಾತುರದಿಂದ ಕಾಯುತ್ತಿರುವ ಭಾರತೀಯ ಅಭಿಮಾನಿಗಳು
ಆರ್ಚೀಸ್ ಆ್ಯಂಡ್ರೂಸ್ ಪಾತ್ರವು ಪ್ರಪ್ರಥಮ ಬಾರಿಗೆ, ಪೆಪ್ ಕಾಮಿಕ್ಸ್‌‌‌‌‌‍ನಲ್ಲಿ ಕಾಣಿಸಿಕೊಂಡಿತ್ತು ಮತ್ತು ಪಾಪ್ ಸಂಸ್ಕೃತಿಯ ಸ್ವತಂತ್ರ ಪಾತ್ರವಾಗಿ ಅತ್ಯದ್ಭುತ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. 90ರ ದಶಕದಲ್ಲಿ ಕಾಮಿಕ್ಸ್‌‌‌‌‌‍ ಗಳನ್ನು ಹುಚ್ಚಾಗಿ ಪ್ರೀತಿಸುತ್ತಿದ್ದ ಬಹಳಷ್ಟು ಮಂದಿಗೆ ಬಹುಷಃ ಇಂದಿಗೂ ಆರ್ಚೀ ಆ್ಯಂಡ್ರೂಸ್ ಪಾತ್ರ ಅಚ್ಚುಮೆಚ್ಚಿನ ಪಾತ್ರವಾಗಿ ಉಳಿದಿರಬಹುದು. ಇದೀಗ ಆರ್ಚೀಸ್ ಸರಣಿಯ ಭಾರತೀಯ ರೂಪಾಂತರ ಹೇಗಿರುತ್ತದೆ ಎಂದು ನೋಡಲು ಸಿನಿಮಾ ಪ್ರಿಯರು ಮತ್ತು ಆರ್ಚೀಸ್ ಆ್ಯಂಡ್ರೂಸ್ ಪಾತ್ರದ ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಮುಖ್ಯ ಪಾತ್ರದಲ್ಲಿ ಸ್ಟಾರ್ ಕಿಡ್‍ಗಳು
ಈ ಸಿನಿಮಾದ ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಸ್ಟಾರ್ ಕಿಡ್‍ಗಳು. ಹೌದು, ಬಾಲಿವುಡ್‍ನ ಘಟಾನುಘಟಿ ತಾರೆಗಳ ಈ ತಲೆಮಾರಿನವರು. ಸುಹಾನ ಖಾನ್, ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡೆಕೋರೇಟರ್ ಗೌರಿ ಖಾನ್ ಅವರ ಪುತ್ರಿ, ಅಭಿನಯದ ಬಗೆಗಿನ ಪ್ರೀತಿ ಆಕೆಗೆ ತಂದೆಯಿಂದ ರಕ್ತಗತವಾಗಿ ಬಂದಿದೆ.


ಇದನ್ನೂ ಓದಿ:  Madhuri Dixit Birthday: 'ದೇವದಾಸ'ನ 'ಚಂದ್ರಮುಖಿ'ಗೆ 25 ಅಥವಾ 55? ಈಗಲೂ ನಿದ್ದೆಗೆಡಿಸುತ್ತಾಳೆ 'ಧಕ್ ಧಕ್' ಬೆಡಗಿ ಮಾಧುರಿ ದೀಕ್ಷಿತ್!


ಇನ್ನು ಅಗಸ್ತ್ಯ ನಂದ, ಲೇಖಕಿ ಶ್ವೇತಾ ಬಚ್ಚನ್ ನಂದಾ ಮತ್ತು ಶ್ರೀಮಂತ ಉದ್ಯಮಿ ನಿಖಿಲ್ ನಂದಾ ಅವರ ಮಗ. ಅಷ್ಟೇ ಅಲ್ಲ, ಆತ ಬಾಲಿವುಡ್‍ನ ಮೇರು ನಟ ಅಮಿತಾಭ್ ಬಚ್ಚನ್ ಮತ್ತು ಜಯ ಬಚ್ಚನ್ ಅವರ ಮೊಮ್ಮಗ ಕೂಡ. ಖುಷಿ ಕಪೂರ್, ದಿವಂಗತ ಸೂಪರ್ ಸ್ಟಾರ್ ಶ್ರೀದೇವಿ ಮತ್ತು ಬಾಲಿವುಡ್‍ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು. ಆಕೆಯ ಸಹೋದರಿ ಜಾನವಿ ಕಪೂರ್ ಕೂಡ ಈಗಾಗಲೇ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾಳೆ.

Published by:Ashwini Prabhu
First published: