• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Diganth: ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್! ದೂದ್‌ಪೇಡಾ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

Diganth: ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್! ದೂದ್‌ಪೇಡಾ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

ಆಸ್ಪತ್ರೆಯಲ್ಲಿ ದಿಗಂತ್​

ಆಸ್ಪತ್ರೆಯಲ್ಲಿ ದಿಗಂತ್​

ದಿಗಂತ್ ಆರೋಗ್ಯ ಸುಧಾರಿಸಿದೆ. ಹೀಗಾಗಿ ಅವರನ್ನು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಯಾವುದೇ ಶೂಟಿಂಗ್‌ಗೆ ಹೋಗದೇ, ಮೂರು ತಿಂಗಳು ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.

 • Share this:

ಬೆಂಗಳೂರು: ನಟ ದಿಗಂತ್ (Actor Diganth) ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ (Discharge) ಆಗಿದ್ದಾರೆ. ಗೋವಾದಲ್ಲಿ (Goa) ಫ್ಯಾಮಿಲಿ (Family) ಜೊತೆ ಟ್ರಿಪ್‌ಗೆ (Trip) ಹೋಗಿದ್ದ ವೇಳೆ  ನಟ ದಿಗಂತ್ ಕುತ್ತಿಗೆಗೆ (Neck) ಗಂಭೀರ ಗಾಯ (Injury) ಮಾಡಿಕೊಂಡಿದ್ದರು. ಬಳಿಕ ಅವರನ್ನು ಏರ್‌ ಲಿಫ್ಟ್ (Airlift) ಮೂಲಕ ಗೋವಾದಿಂದ ಬೆಂಗಳೂರಿಗೆ (Bengaluru) ಕರೆತರಲಾಗಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆ ನೀಡಲಾಗಿತ್ತು. ಬೆನ್ನಿನ ಮೂಳೆಗೆ ಗಾಯವಾಗಿದ್ದು, ನಿನ್ನೆಯೇ ಆಪರೇಷನ್ (Oparation) ಮಾಡಲಾಗಿತ್ತು. ಇದೀಗ ದಿಗಂತ್ ಆರೋಗ್ಯ ಸುಧಾರಿಸಿದ್ದು, ಈಗಷ್ಟೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.


3 ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರ ಸೂಚನೆ


ಘಟನೆಯಲ್ಲಿ ನಟ ದಿಗಂತ್ ಅವರ ಸ್ಪೈನಲ್‌ ಕಾರ್ಡ್‌ಗೆ ಪೆಟ್ಟಾಗಿತ್ತು. ಹೀಗಾಗಿ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ಬರೋಬ್ಬರಿ ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಇದೀಗ ಆಪರೇಷನ್ ಯಶಸ್ವಿಯಾಗಿದ್ದು, ದಿಗಂತ್ ಆರೋಗ್ಯ ಸುಧಾರಿಸಿದೆ. ಹೀಗಾಗಿ ಅವರನ್ನು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಯಾವುದೇ ಶೂಟಿಂಗ್‌ಗೆ ಹೋಗದೇ, ಮೂರು ತಿಂಗಳು ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.


ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ?


ನಟ ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಐಂದ್ರಿತಾ (Aindrita Ray), ‘ಈಗಾಗಲೇ ಸರ್ಜರಿ ಆಗಿದೆ. ಅಲ್ಲದೇ ದಿಗಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈಗಾಗಲೇ ಡಾಕ್ಟರ್​ಗೆ ದಿಗಂತ್ ನಾನು ಸಮ್ಮರ್ ಸಾಲ್ಟ್ ಗೆ ರೆಡಿ ಆಗಿದ್ದೀನಿ ಎಂದು ಹೇಳಿದ್ದಾರೆ.


ಇದನ್ನೂ ಓದಿ: Diganth Health Update: ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ? ಗಂಡನ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ


ಗೋವಾದಿಂದ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಏರ್​ ಲಿಫ್ಟ್​ ಮಾಡಿದ ಬಳಿಕ ನಿನ್ನೆ ದಿಗಂತ್​ಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಸರ್ಜರಿ ಬಳಿಕ ದಿಗಂತ್​​ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಧನ್ಯವಾದ ಹೇಳಿದ ಐಂದ್ರಿತಾ


ನಿನ್ನೆ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಂಗತ್ ಅವರನ್ನು ಬೆಂಗೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರಂತೆ ಕಳೆದ ರಾತ್ರಿ ಅವರಿಗೆ ಸತತ 3 ಗಂಟೆಗಳ ಕಾಲ ಅಪರೇಷನ್ ಮಾಡಲಾಗಿದ್ದು, ಇಂದು ಅವರ ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡುಬಂದಿದೆ ಎಂದು ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮುಂದುಮುವರೆದು ಮಾತನಾಡಿದ ಅವರು, ‘ದಿಗಂತ್ ನಾವು ವೆಕೆಷನ್ ಗೆ ಅಂತಾ ಗೋವಾಗೆ ಹೋಗಿದ್ದೇವು. ಆ ವೇಳೆ ದಿಗಂತ್ ಸಮ್ಮರ್ ಶಾಟ್ ಮಾಡುವಾಗ ಈ ಅಚಾತುರ್ಯ ನಡೆದಿದೆ. ತಕ್ಷಣ ನಾವು ಗೋವಾದ ಮಣಿಪಾಲ್ ಆಸ್ಪತ್ರೆ ಗೆ ಹೋಗಿದ್ವಿ . ಆದರೆ ಪೆಟ್ಟು ಹೆಚ್ಚಾಗಿದ್ದರಿಂದ ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್ ಲೀಪ್ಟ್ ಮಾಡಬೇಕಾಯಿತು. ಈ ವೇಳೆ ಸಹಕರಿಸಿದ ಗೋವಾ ಸರ್ಕಾರಕ್ಕೆ ಧನ್ಯವಾದಗಳು‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: Diganth: ಸ್ಪೈನಲ್​ ಕಾರ್ಡ್ ಇಂಜುರಿ ಅಂದ್ರೆ ಏನು? ಮತ್ತೆ ಮೊದಲಿನಂತೆ ಆಗ್ತಾರಾ ದೂದ್​ಪೇಡ ದಿಗಂತ್?


ಸ್ಪೈನಲ್​ ಕಾರ್ಡ್ ಇಂಜುರಿ ಅಂದ್ರೆ ಏನು? 

top videos


  ಬೆನ್ನುಹುರಿ ದೇಹದ ಪ್ರಮುಖ ಅಂಗಗಳಲ್ಲಿ ಒಂದು, ನಮ್ಮ ಇಡೀ ಶರೀರ ನೇರವಾಗಿ ನಿಲ್ಲಲು, ಚಲಿಸಲು ಹಾಗೂ ಚಟುವಟಿಕೆಯಿಂದ ಇರಲು ಬೆನ್ನುಹರಿಯೇ ಪ್ರಮುಖ ಸಾಧನ. ಇದಕ್ಕೆ ಯಾವುದೇ ಹಾನಿಯಾದರೂ ಇಡೀ ದೇಹ ಹಾಸಿಗೆ ಹಿಡಿಯಬೇಕಾಗುತ್ತದೆ. ಪ್ರತಿ ವರ್ಷ ಸುಮಾರು 5 ಲಕ್ಷ ವಯಸ್ಕರು ವಿವಿಧ ರೀತಿಯ ಬೆನ್ನುಹುರಿ ಗಾಯಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಗಾಯಗೊಂಡ 5 ಜನರಲ್ಲಿ ಇಬ್ಬರು ಮರಣ ಹೊಂದುತ್ತಿರುವುದು ಆತಂಕಕಾರಿ ವಿಷಯ. ಹೀಗಾಗಿ ಸ್ಪೈನಲ್ ಕಾರ್ಡ್ ಇಂಜುರಿ ಅಂದರೆ ವೈದ್ಯರು ಕೂಡ ಒಂದು  ಕ್ಷಣ ಗಾಬರಿಯಾಗುತ್ತಾರೆ.

  First published: