'ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಸಿನಿಮಾ ಟ್ರೈಲರ್ ಯೂಟ್ಯೂಬ್​ನಿಂದ ಮಾಯವಾಗಿದ್ದೇಕೆ?

ನೀವೇನಾದರೂ 'ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಟ್ರೈಲರ್​ ಎಂದು ಯೂಟ್ಯೂಬ್​ನಲ್ಲಿ ಸರ್ಚ್​ ಮಾಡಿದರೆ ಅನುಪಮ್​ ಖೇರ್​ ಅವರ ಸಂದರ್ಶನದ ವಿಡಿಯೋ ಸಿಗುತ್ತದೆಯೇ ವಿನಃ ಟ್ರೈಲರ್​ ಸಿಗುವುದಿಲ್ಲ.

ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​

ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​

  • News18
  • Last Updated :
  • Share this:
ಕಳೆದ ಒಂದು ವಾರದಿಂದ ಬಾಲಿವುಡ್​ ಸೇರಿದಂತೆ ರಾಜಕೀಯ ವಲಯದಲ್ಲೂ ಅತ್ಯಂತ ಚರ್ಚೆಗೆ ಒಳಗಾದ 'ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್​' ಸಿನಿಮಾದ ಟ್ರೈಲರ್​ ಇದೀಗ ಇದ್ದಕ್ಕಿದ್ದಂತೆ ಯೂಟ್ಯೂಬ್​ನಿಂದ ಮಾಯವಾಗಿದೆ.

ಬಾಲಿವುಡ್​ ನಟ ಅನುಪಮ್​ ಖೇರ್​ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಮನಮೋಹನ್​ ಸಿಂಗ್​ ಅವರ ಮಾಧ್ಯಮ ಸಲಹೆಗಾರನಾಗಿದ್ದ ಸಂಜಯ್​ ಬರು ಅವರ ಪುಸ್ತಕವನ್ನು ಆಧರಿಸಿದ ನಿರ್ಮಿಸಲಾದ ಸಿನಿಮಾ. ಈ ಸಿನಿಮಾದ ಟ್ರೈಲರ್​ನಲ್ಲಿ ಕಾಂಗ್ರೆಸ್​ ಪಕ್ಷದ ಬಗ್ಗೆ ನಕಾರಾತ್ಮಕ ಅಂಶಗಳಿದ್ದುದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್​ ಬಿಜೆಪಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾದ 'ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಚಿತ್ರಕ್ಕೆ

ಇದೀಗ, ಯೂಟ್ಯೂಬ್​ನಿಂದ ಈ ಟ್ರೈಲರ್​ ಅನ್ನು ಡಿಲೀಟ್​ ಮಾಡಲಾಗಿದ್ದು, ಈ ಕುರಿತು ಸ್ವತಃ ನಟ ಅನುಪಮ್​ ಖೇರ್​ ಟ್ವೀಟ್​ ಮಾಡಿದ್ದಾರೆ. 'ಡಿಯರ್​ ಯೂಟ್ಯೂಬ್​!! ನನಗೆ ಸಾಕಷ್ಟು ಅಭಿಮಾನಿಗಳು ಮೆಸೇಜ್​ ಮಾಡಿ ಟ್ರೈಲರ್​ ಡಿಲೀಟ್​ ಆದ ಕಾರಣವನ್ನು ಕೇಳುತ್ತಿದ್ದಾರೆ. ಯೂಟ್ಯೂಬ್​ನಿಂದ ಯಾಕೆ ತೆಗೆದುಹಾಕಲಾಗಿದೆ ಎಂಬ ಬಗ್ಗೆ ನನಗೂ ಮಾಹಿತಿ ಬೇಕಾಗಿದೆ. ನಿನ್ನೆಯಷ್ಟೇ ನಮ್ಮ ಸಿನಿಮಾದ ಟ್ರೈಲರ್​ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂ. 1 ಸ್ಥಾನದಲ್ಲಿತ್ತು. ಈಗ 50ನೇ ಸ್ಥಾನದಲ್ಲೂ ಕಾಣಸಿಗುತ್ತಿಲ್ಲ. ನಮಗೆ ಸಹಾಯ ಮಾಡಿ' ಎಂದು ಟ್ವೀಟ್​ ಮಾಡಿದ್ದಾರೆ.

First published: