ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್​ ಚಿತ್ರದಲ್ಲಿ ಉದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚು!

ಅನುಪಮ್​ ಖೇರ್​ ಅವರು ಡಾ. ಸಿಂಗ್​ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮ್​ ಅವರ ಮೇಕ್​ ಓವರ್​ ಮೆಚ್ಚುವಂಥದ್ದು. ಅವರು ಮಾತನಾಡುವ ಶೈಲಿ, ದೇಹಭಾಷೆ ಮನಮೋಹನ್​ ಸಿಂಗ್ ಅವರನ್ನು ಹೋಲುವಂತಿದೆ.

news18
Updated:January 11, 2019, 4:04 PM IST
ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್​ ಚಿತ್ರದಲ್ಲಿ ಉದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚು!
ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​ ತಂಡ
news18
Updated: January 11, 2019, 4:04 PM IST
ರಾಜಕೀಯ ನಾಯಕರ ಬಯೋಪಿಕ್​ಗಳು ಭಾರತದಲ್ಲಿ ತೆರೆಕಂಡಿವೆಯಾದರೂ ಅಚ್ಚುಕಟ್ಟಾಗಿ ಯಾವ ಚಿತ್ರಗಳೂ ಮೂಡಿ ಬಂದಿರಲಿಲ್ಲ. ‘ಆ್ಯಕ್ಸಿಡೆಂಟಲ್​ ಪ್ರೈಮ್ ಮಿನಿಸ್ಟರ್​’ ಚಿತ್ರದ ಟ್ರೈಲರ್​ ತೆರೆಕಂಡಾಗ ಭಾರತದ ಚಿತ್ರರಂಗಕ್ಕೆ ರಾಜಕೀಯ ನಾಯಕನೊಬ್ಬನ ಅತ್ಯುತ್ತಮ ಬಯೋಪಿಕ್​ ಸಿಗಲಿದೆ ಎನ್ನುವ ಭರವಸೆ ಮೂಡಿತ್ತು. ಆದರೆ, ಸಿನಿಮಾ ಈ ಭರವಸೆಯನ್ನು ಹುಸಿ ಮಾಡಿದೆ.

ಮಾಜಿ ಪ್ರಧಾನಿ ಡಾ. ಮನಮೋಹನ್​ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್​ ಬಾರು ಬರೆದ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ನಿರ್ದೇಶಕ ವಿಜಯ್​ ರತ್ನಾಕರ್​ ಈ ಚಿತ್ರವನ್ನು ತೆರೆಮೇಲೆ ಅಚ್ಚುಕಟ್ಟಾಗಿ ತರುವ ಪ್ರಯತ್ನದಲ್ಲಿ ಸೋತಿದ್ದಾರೆ.

ಅಕ್ಷಯ್​ ಖನ್ನಾ (ಸಂಜಯ್​ ಬಾರು), ಅನುಪಮ್​ ಖೇರ್​ (ಮನಮೋಹನ್​ ಸಿಂಗ್​), ಸುಜ್ಜಾನೆ (ಸೋನಿಯಾ ಗಾಂಧಿ) ಇದಿಷ್ಟೇ ಪಾತ್ರಗಳಿಗೆ ಚಿತ್ರ ಸೀಮಿತವಾಗಿದೆ. ಇದು ಚಿತ್ರದ ದೊಡ್ಡ ಹಿನ್ನಡೆ ಎಂದರೆ ತಪ್ಪಾಗದು.

ಇದನ್ನೂ ಓದಿ: ತುಚ್ಛವಾಗಿ ಮಾತನಾಡಿದ ರಣವೀರ್​ಗೆ ಕ್ಲಾಸ್​ ತೆಗೆದುಕೊಂಡ ಅನುಷ್ಕಾ ಶರ್ಮಾ, ವಿಡಿಯೋ ವೈರಲ್​

2004ರಲ್ಲಿ ಪ್ರಧಾನಿಯಾಗಿ ಮನಮೋಹನ್​ ಸಿಂಗ್​ ಅಧಿಕಾರ ಸ್ವೀಕರಿಸುತ್ತಾರೆ. ಅಂದಿನಿಂದ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿ ಬಿಡುತ್ತಾರೆ ಸಿಂಗ್. ಅನೇಕ ಕಡೆಗಳಲ್ಲಿ ಅವರಿಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಯಾವ ಅವಕಾಶವನ್ನೂ ಸೋನಿಯಾ ಗಾಂಧಿ ನೀಡುವುದೇ ಇಲ್ಲ. ಸಿಂಗ್​ ವೈಯಕ್ತಿವಾಗಿ ಯಾವುದೇ ಭ್ರಷ್ಟ ಕಾರ್ಯ ಮಾಡುವುದಿಲ್ಲ. ಆದರೆ ಭ್ರಷ್ಟಾಚಾರ ನಡೆಯುವಾಗ ಕಣ್ಮುಚ್ಚಿಕೊಂಡು ನಿಲ್ಲುವ ಸ್ಥಿತಿ ಬರುತ್ತದೆ. ಸಿನಿಮಾ ಬ್ಯಾಲೆನ್ಸ್​ ತಪ್ಪಿ ಸಾಗುತ್ತಿದೆ ಎಂಬುದು ಆರಂಭದಲ್ಲೇ ಗೊತ್ತಾಗಿಬಿಡುತ್ತದೆ. ಮನಮೋಹನ್​ ಸಿಂಗ್​ ಓರ್ವ ದುರ್ಬಲ ಪ್ರಧಾನಿ ಎಂದು ತೋರಿಸುವುದು ನಿರ್ದೇಶಕರ ಉದ್ದೇಶದಂತೆ ಕಾಣುತ್ತದೆ.

ಅನುಪಮ್​ ಖೇರ್​ ಅವರು ಡಾ. ಮನಮೋಹನ್ ಸಿಂಗ್​ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮ್​ ಅವರ ಮೇಕ್​ ಓವರ್​ ಮೆಚ್ಚುವಂಥದ್ದು. ಅವರು ಮಾತನಾಡುವ ಶೈಲಿ, ದೇಹಭಾಷೆ ಮನಮೋಹನ್​ ಸಿಂಗ್ ಅವರನ್ನು ಹೋಲುವಂತಿದೆ. ಒಟ್ಟಾರೆ, ಈ ಚಿತ್ರದಲ್ಲಿ ಉದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚಿದ್ದಂತೆ ಕಾಣುತ್ತದೆ.
Loading...

ಇದನ್ನೂ ಓದಿ: ಇಂದು ಬಿಡುಗಡೆಯಾದ 'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಸಿನಿಮಾ ವಿರುದ್ಧ ಕಾಂಗ್ರೆಸ್​ ನಾಯಕರ ಆಕ್ರೋಶ

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...