ಮನಮೋಹನ್​ ಸಿಂಗ್​ ನಂತರ ಪ್ರಿಯಾಂಕಾ ಹಾಗೂ ರಾಹುಲ್​ ಗಾಂಧಿ ಫಸ್ಟ್​ಲುಕ್​ ಬಿಡುಗಡೆ

news18
Updated:June 28, 2018, 4:01 PM IST
ಮನಮೋಹನ್​ ಸಿಂಗ್​ ನಂತರ ಪ್ರಿಯಾಂಕಾ ಹಾಗೂ ರಾಹುಲ್​ ಗಾಂಧಿ ಫಸ್ಟ್​ಲುಕ್​ ಬಿಡುಗಡೆ
news18
Updated: June 28, 2018, 4:01 PM IST
ನ್ಯೂಸ್​ 18 ಕನ್ನಡ 

'ದ ಆಕ್ಸಿಡೆಂಟಲ್​ ಪ್ರೈಮಿನಿಸ್ಟರ್​' ಸಿನಿಮಾದ ತಾರಾಬಳಗದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಸಾಕಷ್ಟಿದೆ. ಈ ಹಿಂದೆ ಈ ಸಿನಿಮಾ ತಂಡ ಮನಮೋಹನ್​ ಸಿಂಗ್​ ಅವರ ಲುಕ್​ ಬಿಡುಗಡೆ ಮಾಡಿತ್ತು. ಇಂದು ಪ್ರಿಯಾಂಕಾ ಹಾಗೂ ರಾಹುಲ್​ ಗಾಂಧಿ ಅವರ ಫಸ್ಟ್​ಲುಕ್ ಅನ್ನು ನಟ ಅನುಪಮ್​ ಖೇರ್​​ ಬಿಡುಗಡೆ ಮಾಡಿದ್ದಾರೆ.

 
Introducing @arjun__mathur as #ShriRahulGandhi and @aahanakumra as #MsPriyankaGandhi.🙏 #TheAccidentalPrimeMinister @tapmofficial #2004 #OathCeremony #VijayGutte @sunil_s_bohra


Loading...

A post shared by Anupam Kher (@anupampkher) on


ಅನುಪಮ್ ಖೇರ್​ ತಮ್ಮ ಇನ್​ಸ್ಟಾಗ್ರಾಂಖಾತೆಯಲ್ಲಿ ಒಂದು ಚಿತ್ರವನ್ನು ಶೇರ್​ ಮಾಡಿದ್ದು, ಇದರಲ್ಲಿ ಅವರು ಮನಮೋಹನ್​ ಸಿಂಗ್​ ಪಾತ್ರದಲ್ಲಿ, ಅರ್ಜುನ್​ ಮಯೂರ್​ ರಾಹುಲ್​ ಗಾಂಧಿ ಪಾತ್ರದಲ್ಲಿ ಹಾಗೂ ಪ್ರಿಯಾಂಕಾ ಪಾತ್ರದಲ್ಲಿ ಅಹಾನಾ ಕುರ್ಮಾ ಕಾಣಿಸಿಕೊಂಡಿದ್ದಾರೆ.

 ಈ ಹಿಂದೆ ಅನುಪಮ್​ ಖೇರ್​ ಅವರು ನಟ ರಾಮ್​ ಅವತಾರ್​ ಭಾರದ್ವಾಜ್​ ಅವರ ಪೋಸ್ಟರ್​ ಅನ್ನು ರಿವೀಲ್​ ಮಾಡಿದ್ದರು. ರಾಮ್​ ಅವರು ವಾಜಪೇಯಿ ಅವರ ಪಾತ್ರಕ್ಕೆ ಬಣ್ಣ ಹಚ್ಚಿದರೆ,  ಜರ್ಮನ್​ ನಟಿ ಸುಸೈನ್​ ಬನರ್ಟ್​ ಸೋನಿಯಾ ಗಾಂಧಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.ಸಂಜಯ ಬಾರು ಅವರ ಕೃತಿಯಾಧಾರಿತವಾಗಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಪುಸ್ತಕದ ಕತೃವಿನ ಪಾತ್ರದಲ್ಲಿ ಅಕ್ಷಯ್​​ ಖನ್ನಾ ಅಭಿನಯಿಸುತ್ತಿದ್ದಾರೆ. ಸಂಜಯ ಬಾರು ಅವರು ಮನಹಮೋಹನ್​ ಸಿಂಗ್​ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...