Kalank Trailer: ಟ್ರೋಲಿಗರಿಗೆ ಆಹಾರವಾದ ಆಲಿಯಾ ಭಟ್​-ವರುಣ್​ ಧವನ್​

ಸ್ಟಾರ್​ ನಟರ ಬಳಗವೇ ಇರುವ ‘ಕಲಂಕ್​’ ಚಿತ್ರದ ಟ್ರೈಲರ್​ ಬಿಡುಗಡೆ ಆಗಿದೆ. ಇದರಲ್ಲಿ ಬರುವ ಕೆಲ ದೃಶ್ಯಗಳನ್ನು ಇಟ್ಟುಕೊಂಡು ಅನೇಕರು ಮೆಮೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಸಖತ್​ ವೈರಲ್​ ಆಗಿದೆ.

'ಕಲಂಕ್​' ಸಿನಿಮಾದ ಪೋಸ್ಟರ್​

'ಕಲಂಕ್​' ಸಿನಿಮಾದ ಪೋಸ್ಟರ್​

  • News18
  • Last Updated :
  • Share this:
ಸ್ಟಾರ್​ ನಟರ ಬಳಗವೇ ಇರುವ ‘ಕಲಂಕ್​’ ಚಿತ್ರದ ಟ್ರೈಲರ್​ ಬಿಡುಗಡೆ ಆಗಿದೆ. ಟ್ರೈಲರ್​ ಅದ್ಭುತವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಹೇಗಿರಲಿದೆ ಎನ್ನುವ ಚಿಕ್ಕ ಝಲಕ್​ ಟ್ರೈಲರ್​ನಲ್ಲಿ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಅಭಿಷೇಕ್​ ವರ್ಮನ್​.

ಅದ್ಭುತ ಸೆಟ್​, ಮನಸ್ಸಿಗೆ ಇಷ್ಟವಾಗುವ ಹಿನ್ನೆಲೆ ಸಂಗಿತ, ಸ್ಟಾರ್​ ಕಲಾವಿದರ ದಂಡು, ಕಣ್ಣಿಗೆ ಮುದ ನೀಡುವ ದೃಶ್ಯಗಳು. ಇಷ್ಟೆಲ್ಲ ವಿಚಾರಗಳು ಇದ್ದ ಮೇಲೆ ಟ್ರೈಲರ್​ ಇಷ್ಟವಾಗಲೇಬೇಕು. ‘ಕಲಂಕ್​’ ಟ್ರೈಲರ್​ ಜನ ಇಷ್ಟಪಟ್ಟಿದ್ದಾರೆ. ಟ್ರೈಲರ್​ ಬಿಡುಗಡೆ ಆದ 24 ಗಂಟೆ ಒಳಗೆ 1 ಕೋಟಿಗೂ ಅಧಿಕ ಬಾರ ವೀಕ್ಷಣೆ ಕಂಡಿರುವುದು ಇದಕ್ಕೆ ಸಾಕ್ಷಿ. ಅಚ್ಚರಿ ಎಂದರೆ, ಈ ಟ್ರೈಲರ್​​ ಈಗ ಟ್ರೋಲ್​ ಮಾಡುವವರ ಬಾಯಿಗೆ ಆಹಾರವಾಗಿದೆ.

ಟ್ರೈಲರ್​ನಲ್ಲಿ ಬರುವ ಕೆಲ ದೃಶ್ಯಗಳನ್ನು ಇಟ್ಟುಕೊಂಡು ಅನೇಕರು ಮೆಮೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಸಖತ್​ ವೈರಲ್​ ಆಗಿದೆ.ಚಿತ್ರದಲ್ಲಿ ಮಾಧುರಿ ದೀಕ್ಷಿತ್​, ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್​, ವರುಣ್​ ಧವನ್, ಆದಿತ್ಯ ರಾಯ್​ ಕಪೂರ್​, ಸಂಜಯ್​ ದತ್​ ಸೇರಿ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ. ಕರಣ್​ ಜೋಹರ್​ ಹಾಗೂ ಸಾಜಿದ್​ ನಾಡಿಯಾದ್ವಾಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಏ.17ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಕರಣ್​ ಜೋಹರ್​ ಸಿನಿಮಾ 'ಕಲಂಕ್'​ ಸೆಟ್​ನಲ್ಲಿ ಕಾಣಿಸಿಕೊಂಡ ಮಾಧುರಿ ದೀಕ್ಷಿತ್​

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

First published: