ಸನ್ನಿ ಲಿಯೋನ್ ಬಳಿ ಬಂದು ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದ ಹಿರಿಯ ನಟ!
Sunny Leone: ಇತ್ತೀಚೆಗೆ ನಟಿ ಸನ್ನಿ ಲಿಯೋನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರನ್ನು ನೋಡಲು ಅನೇಕರು ಜಮಾಯಿಸಿದ್ದರು. ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಬಾಲಿವುಡ್ನ ಹಿರಿಯ ನಟ ಕಬೀರ್ ಬೇಡಿ ಸನ್ನಿ ಲಿಯೋನ್ ಅವರನ್ನು ನೋಡಿ ಫೋನ್ ನಂಬರ್ ಕೇಳಲು ಮುಂದಾಗಿದ್ದಾರೆ.
ಮಾದಕ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಚಿತ್ರಗಳಲ್ಲಿ ನಟಿಸುವ ಅವಕಾಶ ಕಮ್ಮಿಯಾದರೂ ಅಭಿಮಾನಿಗಳ ಸಂಖ್ಯೆ ಮಾತ್ರ ದೊಡ್ಡದಿದೆ. ಚಿಗುರು ಮೀಸೆ ಹುಡುಗರಿಂದ ಹಿಡಿದು ಬಿಳಿ ಕೂದಲಿನ, ಬೋಳು ತಲೆಯ ಅಜ್ಜಂದಿರವರೆಗೆ ಸಾಕಷ್ಟು ಅಭಿಮಾನಿಗಳನ್ನು ಸನ್ನಿಲಿಯೋನ್ ಹೊಂದಿದ್ದಾರೆ. ಅದರಂತೆ ಇಲ್ಲೊಬ್ಬ ಹಿರಿಯ ನಟರೊಬ್ಬರು ಸನ್ನಿಲಿಯೋನ್ ಕಂಡು ಆಕೆಯ ಬಳಿ ಫೋನ್ ನಂಬರ್ ಕೇಳಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಟಿ ಸನ್ನಿ ಲಿಯೋನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರನ್ನು ನೋಡಲು ಅನೇಕರು ಜಮಾಯಿಸಿದ್ದರು. ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಬಾಲಿವುಡ್ನ ಹಿರಿಯ ನಟ ಕಬೀರ್ ಬೇಡಿ ಸನ್ನಿ ಲಿಯೋನ್ ಅವರನ್ನು ನೋಡಿ ಫೋನ್ ನಂಬರ್ ಕೇಳಲು ಮುಂದಾಗಿದ್ದಾರೆ.
ಕಬೀರ್ ಬೇಡಿಕೆಗೆ ಸನ್ನಿ ಲಿಯೋನ್ ಕೂಲ್ ಆಗಿ ಉತ್ತರಿಸಿದ್ದಾರೆ. 74 ವರ್ಷದ ಕಬೀರ್ ಬೇಡಿ ಮೊಬೈಲ್ ನಂಬರ್ ಕೇಳಿದರೆಂದು ವಿಚಲಿತರಾಗಲಿಲ್ಲ. ಆದರೆ ತಮ್ಮ ನಂಬರ್ ಕೊಡುವ ಬದಲಿಗೆ ಪತಿ ಡೇನಿಯಲ್ ವೆಬ್ಬರ್ ಅವರ ಫೋನ್ ನಂಬರ್ ಕೊಟ್ಟಿದ್ದಾರೆ.
ಹಿರಿಯ ನಟ ಕಬೀರ್ ಬೇಡಿ 4ನೇ ವಿವಾಹವಾಗಿದ್ದಾರೆ. ಇತ್ತೀಚೆಗೆ 70ನೇ ವಯಸ್ಸಿನಲ್ಲಿ ಬಹುಕಾಲದ ಗೆಳತಿಯ ಪರ್ವಿನ್ ದುಸಾಂಜ್ ಜೊತೆ ನಾಲ್ಕನೇ ಮದುವೆ ಆಗಿದ್ದಾರೆ.