67 ನೇ ಪಾರ್ಲೆ, 2022 ಫಿಲ್ಮ್ ಫೇರ್ ಸೌಥ್ ಪ್ರಶಸ್ತಿ (67 th Parle Filmfare Awards South) ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 9) ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ತೆಲುಗು, ತಮಿಳು, ಕನ್ನಡ (Kannada) ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಅತ್ಯುತ್ತಮವಾದದ್ದಕ್ಕೆ ಪ್ರಶಸ್ತಿಗಳು ಲಭಿಸಿವೆ. 2020 ಮತ್ತು 2021 ರಲ್ಲಿ ತೆರೆಗೆ ಬಂದ ಅತ್ಯುತ್ತಮ ಚಲನಚಿತ್ರಗಳಿಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯ ಉತ್ತಮ ನಟ, ನಟಿ, ಚಲನಚಿತ್ರ ಯಾವುದು ಎಂದು ತಿಳಿಸಿಕೊಟ್ಟರು. ತೆಲುಗಿನಲ್ಲಿ ಅಲ್ಲು ಅರ್ಜುನ್ ಪ್ರಶಸ್ತಿ ಪಡೆದಿದ್ರೆ, ಕನ್ನಡದಲ್ಲಿ ಡಾಲಿ ಧನಂಜಯ್ (Daali Dhananjay) ಉತ್ತಮ ನಟರಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ನಮ್ಮನ್ನು ಅಗಲಿದ ಅಪ್ಪು, ಪುನೀತ್ ರಾಜ್ ಕುಮಾರ್ ಗೆ (Puneeth Rajkumar) ಜೀವಮಾನದ ಸಾಧನೆ ಪ್ರಶಸ್ತಿ ಲಭಿಸಿದೆ.
ಪಾರ್ಲೆ ಫಿಲ್ಮ್ಫೇರ್ ಅವಾಡ್ರ್ಸ್ ಸೌತ್ 2022 ರಲ್ಲಿ ವಿಜೇತರ ಸಂಪೂರ್ಣ ಪಟ್ಟಿ
ಕನ್ನಡ ಸಿನಿಮಾ ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಧನಂಜಯ್ (ಬಡವ ರಾಸ್ಕಲ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಮಹಿಳೆ) - ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ - ಆಕ್ಟ್ 1978
ಅತ್ಯುತ್ತಮ ನಿರ್ದೇಶಕ - ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಬಿ. ಸುರೇಶ (ಆಕ್ಟ್ 1978)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ - ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ರಘು ದೀಕ್ಷಿತ್- ಮಲೇ ಮಲೇ ಮಲೇ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಅತ್ಯುತ್ತಮ ಛಾಯಾಗ್ರಹಣ - ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ - ಜಾನಿ ಮಾಸ್ಟರ್ - ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ - ಪುನೀತ್ ರಾಜ್ಕುಮಾರ್
ತೆಲುಗು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್- ಭಾಗ 1)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಚಿತ್ರ - ಪುಷ್ಪ: ದಿ ರೈಸ್- ಭಾಗ 1
ಅತ್ಯುತ್ತಮ ನಿರ್ದೇಶಕ - ಸುಕುಮಾರ್ ಬಂಡ್ರೆಡ್ಡಿ (ಪುಷ್ಪಾ: ದಿ ರೈಸ್- ಭಾಗ 1)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಮುರಳಿ ಶರ್ಮಾ (ಅಲಾ ವೈಕುಂಠಪುರಮುಲೂ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಟಬು (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಸಾಹಿತ್ಯ - ಸೀತಾರಾಮ ಶಾಸ್ತ್ರಿ - ಲೈಫ್ ಆಫ್ ರಾಮ್ (ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ಸಿದ್ ಶ್ರೀರಾಮ್ - ಶ್ರೀವಲ್ಲಿ (ಪುಷ್ಪಾ: ದಿ ರೈಸ್- ಭಾಗ 1)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಇಂದ್ರಾವತಿ ಚೌಹಾಣ್ - ಊ ಅಂತವ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನೃತ್ಯ ಸಂಯೋಜನೆ - ಶೇಖರ್ ಮಾಸ್ಟರ್ - ರಾಮುಲೂ ರಾಮುಲಾ (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಛಾಯಾಗ್ರಹಣ - ಮಿರೋಸ್ಲಾ ಕುಬಾ ಬ್ರೋಜೆಕ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ಚೊಚ್ಚಲ ಪುರುಷ - ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ಚೊಚ್ಚಲ ಮಹಿಳೆ - ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನದ ಸಾಧನೆ ಪ್ರಶಸ್ತಿ - ಅಲ್ಲು ಅರವಿಂದ್
ತಮಿಳು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಸೂರ್ಯ (ಸೂರರೈ ಪೊಟ್ರು)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಲಿಜೋಮೋಲ್ ಜೋಸ್ (ಜೈ ಭೀಮ್)
ಅತ್ಯುತ್ತಮ ಚಿತ್ರ - ಜೈ ಭೀಮ್
ಅತ್ಯುತ್ತಮ ನಿರ್ದೇಶಕ - ಸುಧಾ ಕೊಂಗರ (ಸೂರರೈ ಪೊಟ್ರು)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಪಶುಪತಿ (ಸರಪತ್ತ ಪರಂಬರೈ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಊರ್ವಶಿ (ಸೂರರೈ ಪೊಟ್ರು)
ಅತ್ಯುತ್ತಮ ಸಂಗೀತ ಆಲ್ಬಮ್ - ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ- ಆಗಸಂ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಹೆಣ್ಣು) - ಧೀ- ಕಟ್ಟು ಪಾಯಲೆ (ಸೂರರೈ ಪೊಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ - ದಿನೇಶ್ ಕುಮಾರ್ - ವತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಹಣ - ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೊಟ್ರು)
ಇದನ್ನೂ ಓದಿ: Sanjjanaa Galrani Birthday: ಮುದ್ದು ಮಗನ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಸಂಜನಾ ಗಲ್ರಾನಿ
ಮಲಯಾಳಂ ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಬಿಜು ಮೆನನ್ (ಅಯ್ಯಪ್ಪನಂ ಕೋಶಿಯಂ)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ಹೆಣ್ಣು) - ನಿಮಿಷಾ ಸಜಯನ್ (ದ ಗ್ರೇಟ್ ಇಂಡಿಯನ್ ಕಿಚನ್)
ಅತ್ಯುತ್ತಮ ಚಿತ್ರ - ಅಯ್ಯಪ್ಪನಂ ಕೋಶಿಯಂ
ಅತ್ಯುತ್ತಮ ನಿರ್ದೇಶಕ - ಸೆನ್ನಾ ಹೆಗ್ಡೆ (ತಿಂಕಾಲಜ್ಞಾ ನಿಶ್ಚಯಂ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಜೋಜು ಜಾರ್ಜ್ (ನಾಯಟ್ಟು)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಗೌರಿ ನಂದಾ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಸಂಗೀತ ಆಲ್ಬಮ್ - ಎಂ. ಜಯಚಂದ್ರನ್ (ಸೂಫಿಯಂ ಸುಜಾತಯಂ)
ಅತ್ಯುತ್ತಮ ಸಾಹಿತ್ಯ - ರಫೀಕ್ ಅಹಮದ್ - ಅರಿಯತರಿಯತೆ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ಶಹಬಾಜ್ ಅಮಾನ್ - ಆಕಾಶಮಾಯವಳೆ (ವೆಲ್ಲಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಕೆ.ಎಸ್.ಚಿತ್ರ-ತೀರಮೆ (ಮಲಿಕ್)
ಇದನ್ನೂ ಓದಿ: Jodi No 01: ಜೋಡಿ ನಂಬರ್ 1 ಫಿನಾಲೆ, ಕಾರ್ಯಕ್ರಮಕ್ಕೆ ಮೆರುಗು ತುಂಬಿದ ದಿಗಂತ್-ಐಂದ್ರಿತಾ ರೈ
ಅಕ್ಟೋಬರ್ 23 ರಂದು ಮಧ್ಯಾಹ್ನ 3 ಗಂಟೆಗೆ ಝೀ ತೆಲುಗಿನಲ್ಲಿ, ಜೀ ಕನ್ನಡದಲ್ಲಿ ಅಕ್ಟೋಬರ್ 16 ರಂದು ಮಧ್ಯಾಹ್ನ 3 ಗಂಟೆಗೆ, ಜೀ ತಮಿಳು ಅಕ್ಟೋಬರ್ 16 ರಂದು ಮಧ್ಯಾಹ್ನ 3:30 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ