ಬೆಂಕಿಪಟ್ಣ ನಾಯಕನ ಉಗ್ರ ಪ್ರತಾಪ: ಹಲವು ಹೊಸತನಗಳ ದ ಕಲರ್ ಆಫ್ ಟೊಮೆಟೊ

ದ ಕಲರ್ ಆಫ್ ಟೊಮೆಟೊ ಚಿತ್ರದ ಮೂಲಕ ನಟ ಪ್ರತಾಪ್ ನಾರಾಯಣ್, ಜಬರ್‍ದಸ್ತಾಗಿ ರೀಎಂಟ್ರಿ ಕೊಡುವ ಭರವಸೆ ನೀಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಟೀಸರ್ ಮುಖೇನ ಕುತೂಹಲ ಸೃಷ್ಟಿಸಿದ್ದಾರೆ.

ದ ಕಲರ್ ಆಫ್ ಟೊಮೆಟೊ ಚಿತ್ರದಲ್ಲಿ ಪ್ರತಾಪ್ ನಾರಾಯಣ್

ದ ಕಲರ್ ಆಫ್ ಟೊಮೆಟೊ ಚಿತ್ರದಲ್ಲಿ ಪ್ರತಾಪ್ ನಾರಾಯಣ್

  • Share this:
ಬೆಂಕಿಪಟ್ಣ (Benkipatna) ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿ, ಭರವಸೆ ಮೂಡಿಸಿದ್ದ ನಾಯಕ ನಟ ಪ್ರತಾಪ್ ನಾರಾಯಣ್ (Prathap Narayan) ನಂತರ ಸಿನಿಮಾಗಳಿಂದ ಕಣ್ಮರೆಯಾಗಿದ್ದರು. ಆದರೆ ಈಗ ಹೊಚ್ಚ ಹೊಸ ಅವತಾರದೊಂದಿಗೆ, ರಗಡ್​ ಲುಕ್‍ನಲ್ಲಿ ಎರಡು ವರ್ಷಗಳ ನಂತರ ಮತ್ತೆ ವಾಪಸ್ಸಾಗಿದ್ದಾರೆ. ದ ಕಲರ್ ಆಫ್ ಟೊಮೆಟೊ (The Color Of tomato) ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಚಿತ್ರಕ್ಕೆ ತಾಯಿ ಲೋಕೇಶ್ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಹಲವು ಹೊಸತನಗಳಿಂದ ಕೂಡಿದೆ. ದ ಕಲರ್ ಆಫ್ ಟೊಮೆಟೊ... ಹಿರಿಯ ಲೇಖಕರು, ದಲಿತ ಕವಿ, ಕಥೆಗಾರ, ಸಾಮಾಜಿಕ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರು ಬರೆದಿರುವ ಕಥೆ. ಹೆಸರೇ ಹೇಳುವಂತೆ ಇದು ರಕ್ತದ ಬಣ್ಣವನ್ನು ಸಿಂಬಾಲಿಕ್ ಆಗಿ ಹೇಳುತ್ತಿರುವ ಸಿನಿಮಾ.

ಈಗ್ಗೆ ಮೂರು ವರ್ಷಗಳ ಹಿಂದೆ ನಿರ್ದೇಶಕ ತಾಯಿ ಲೋಕೇಶ್, ರಾಮಯ್ಯ ಅವರನ್ನು ಒಂದು ವೆಬ್ ಪೋರ್ಟಲ್ ಮಾಡುವ ಕುರಿತು ಚರ್ಚಿಸಲು ಭೇಟಿಯಾಗಿದ್ದರಂತೆ. ಆಗ `ಅದನ್ನು ಮಾಡಲು ಬೇರೆ ಜನ ಇದ್ದಾರೆ. ಅದರ ಬದಲು ಒಂದು ಸಿನಿಮಾ ಇದೆ ಮಾಡುತ್ತೀರಾ ಎಂದು ದ ಕಲರ್ ಆಫ್ ಟೊಮೆಟೊ ಬಗ್ಗೆ ಹೇಳಿದ್ದೆ. ಕಲಾತ್ಮಕ ಚಿತ್ರ ಆಗುವ ರೀತಿಯಲ್ಲಿ ಕಥೆ ಮಾಡಿಕೊಂಡಿದ್ದೆ. ಆಗ ಲೋಕೇಶ್ ಹಿಂಸೆಯ ವ್ಯಾಖ್ಯಾನ ಬದಲಾಗಿದೆ ಎಂದರು. ಆಗ ನನಗೂ ಹೌದು ಕೆಲ ಬದಲಾವಣೆಗಳನ್ನು ಮಾಡಬೇಕು ಅಂತನ್ನಿಸಿತು. ಮಹೇಶ್ ಸುಖಧರೆ, ಶಿವರುದ್ರಯ್ಯ ಅವರಂತೆ ಹಲವು ನಿರ್ದೇಶಕರ ಮೊದಲ ಸಿನಿಮಾಗಳಿಗೆ ನಾನು ಕಥೆ ಕೊಟ್ಟಿದ್ದೇನೆ. ಆದರೆ ನನಗೆ ತಾಯಿ ಲೋಕೇಶ್ ಜತೆ ಕೆಲಸ ಮಾಡಿದ್ದು ತುಂಬ ಖುಷಿ ನೀಡಿತು. ನಾನಂತೂ ಅತ್ಯಂತ ಹೆಮ್ಮೆಯಿಂದ ಹೇಳುತ್ತಿದ್ದೇನೆ, ದ ಕಲರ್ ಆಫ್ ಟೊಮೆಟೊ, ಹೊಸ ಸಿನಿಮಾ ವ್ಯಾಖ್ಯಾನ ಹಾಗೂ ವ್ಯಾಕರಣ ಸೃಷ್ಟಿಸುತ್ತೆ ಎಂಬ ನಂಬಿಕೆ ಇದೆ' ಎಂದು ಚಿತ್ರದ ಬಗ್ಗೆ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಕೋಟಿಗಾನಹಳ್ಳಿ ರಾಮಯ್ಯ.ಇನ್ನು, ಈ ಚಿತ್ರದ ಮೂಲಕ ನಟ ಪ್ರತಾಪ್ ನಾರಾಯಣ್, ಜಬರ್‍ದಸ್ತಾಗಿ ರೀಎಂಟ್ರಿ ಕೊಡುವ ಭರವಸೆ ನೀಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಟೀಸರ್ ಮುಖೇನ ಕುತೂಹಲ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್​ ಮನೆಯಲ್ಲಿ ವಿಶೇಷ ಭೋಜನ ಸವಿದ ಮಂಜು ಪಾವಗಡ

`ಕೋಟಿಗಾನಹಳ್ಳಿ ರಾಮಯ್ಯ ಸರ್ ಅವರು ಕೊಟ್ಟಿರುವ ಕಥೆ ಎಂಬ ವಿಷಯ ತಿಳಿದಿದ್ದೇ ನಾನು ಸಿನಿಮಾ ಬಗ್ಗೆ ಮರು ಮಾತಾಡದೇ ಒಪ್ಪಿಕೊಂಡೆ. ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡುವುದು ಗೌರವದ ವಿಷಯ. ನಾನು ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರ ಅಭಿಮಾನಿ. ಇದು ಕಲ್ಪನೆಯ ಕಥೆ. ಒಂದು ಟೊಮೆಟೋ ಮಂಡಿಯಲ್ಲಿ ನಡೆಯುವ ಸ್ಟೋರಿ. ಪವರ್​ಗೋಸ್ಕರ ಜನ ಹೇಗೆ ಮಿಸ್‍ಯೂಸ್ ಮಾಡಿಕೊಳ್ಳುತ್ತಾರೆ ಎಂಬುದರ ಸುತ್ತ ಕಥೆ ಸುತ್ತುತ್ತದೆ. ಎಲ್ಲರಲ್ಲೂ ಒಳ್ಳೆಯವನೂ ಇರುತ್ತಾನೆ, ಕಟ್ಟವನೂ ಇರುತ್ತಾನೆ. ಹಾಗೆ ಒಳ್ಳೆಯವನಿಂದ ಕೆಟ್ಟ ಕೆಲಸ ಹೇಗೆ ಮಾಡಿಸುವುದು ಎಂಬುದು ಒನ್‍ಲೈನ್ ಸ್ಟೋರಿ. ತುಂಬಾ ಇಂಟರೆಸ್ಟಿಂಗ್ ಆಗಿದೆ' ಎಂದು ದ ಕಲರ್ ಆಫ್ ಟೊಮೆಟೊ ಬಗ್ಗೆ ಮಾಹಿತಿ ಹಂಚಿಕೊಂಡರು ಪ್ರತಾಪ್ ನಾರಾಯಣ್.

ಹಾಗೇ, ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿರುವ ನಿರ್ದೇಶಕ ತಾಯಿ ಲೋಕೇಶ್, `ಇದು ನಮ್ಮ ನೆಲದ ಸಿನಿಮಾ. ಸೈಲೆಂಟಾಗಿ ಹೇಳುವ ಬದಲಾಗಿ ವೈಲೆಂಟಾಗಿ ಹೇಳುತ್ತಿದ್ದೇವೆ. ಹಾಗಂತ ಕ್ರೌರ್ಯ, ಹಿಂಸೆಗಳಷ್ಟೇ ಈ ಸಿನಿಮಾದ ಆಶಯಗಳಲ್ಲ. ತುಂಬಾ ತಾಳ್ಮೆಯಲ್ಲೂ ಒಂದು ಕ್ರೌರ್ಯವಿರುತ್ತೆ, ಅದನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ. ಟೈಟಲ್ ಆಕರ್ಷಕವಾಗಿದೆ. ಟೊಮೆಟೊ ಹುಳಿನೂ ಇದೆ, ಸಿಹಿನೂ ಇದೆ. ನಮ್ಮ ಕಥೆಗೆ ಒಗ್ಗುವ ಟೈಟಲ್. ಜನಸಾಮಾನ್ಯರಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಇರುವ ಸಿನಿಮಾ. ಒಂದಷ್ಟು ಪಾತ್ರಗಳು ನಿಜವಾದ ಪಾತ್ರಗಳೇ ಆಗಿದ್ದರೂ, ಅದನ್ನು ಸಿನಿಮಾ ಶೈಲಿಯಲ್ಲಿ ತೋರಿಸಲಿದ್ದೇವೆ' ಎಂದು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಾರೆ.

ಇನ್ನು ಮೊದಲ ಸಿನಿಮಾ 5ಡಿ ರಿಲೀಸ್‍ಗೂ ಮೊದಲೇ ನಿರ್ಮಾಪಕರಾದ 1 ಟು 100 ಡ್ರೀಮ್ ಮೂವೀಸ್‍ನ ಕುಮಾರ್ ಹಾಗೂ ಸ್ವಾತಿ ಕುಮಾರ್ ಎರಡನೇ ಸಿನಿಮಾ ಲಾಂಚ್ ಮಾಡಿದ್ದಾರೆ.

ಇದನ್ನೂ ಓದಿ: Sumalatha Ambareesh-Abhishek Ambareesh ಮನೆಯಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ

`ಒಂದು ವರ್ಷದ ಹಿಂದೆ, 5ಡಿ ಚಿತ್ರಕ್ಕೂ ಮುನ್ನವೇ ದ ಕಲರ್ ಆಫ್ ಟೊಮೆಟೋ ಕಥೆ ಕೇಳಿದ್ದೆ. ಆದರೆ 5ಡಿ ಬಳಿಕ ಈ ಸಿನಿಮಾ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೆ. ಅದರಂತೆ ಈಗ ಪ್ರಾರಂಭಿಸಿದ್ದೇವೆ. ಅಕ್ಟೋಬರ್ ಮೊದಲ ವಾರ ಸಿನಿಮಾ ಸೆಟ್ಟೇರಲಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೂ ಚಿತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸಹ ಟೀಸರ್​ನಂತೆಯೇ ಕುತೂಹಲಕಾರಿಯಾಗಿರಲಿದೆ ಅಂತ  ಭರವಸೆ ನೀಡುತ್ತೇನೆ' ಎಂದು ಒಂದೊಳ್ಳೆ ಸಿನಿಮಾ ಮಾಡುತ್ತಿರುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕ ಕುಮಾರ್.
Published by:Anitha E
First published: