Tiger Shroff and Disha Patani: ಟೈಗರ್ ಶ್ರಾಫ್-ದಿಶಾ ನಡುವೆ ಬ್ರೇಕಪ್ ಆಗೋದಕ್ಕೆ ಆ ಒಂದು ವಿಷಯಾನೇ ಕಾರಣವಂತೆ

ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ಅವರ ಬ್ರೇಕಪ್ ಆದ ಸುದ್ದಿಗಳು ಹರಿದಾಡುತ್ತಿದ್ದು, ಅವುಗಳು ನಿಜವೇ ಅಥವಾ ಬರೀ ಊಹಾಪೋಹಗಳೇ ಅಂತ ಅನೇಕ ಜನ ಅಭಿಮಾನಿಗಳಿಗೆ ಅರ್ಥವಾಗದೆ ಗೊಂದಲದಲ್ಲಿದ್ದರು. ಈ ಇಬ್ಬರೂ ಸುಮಾರು 6 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಮತ್ತು ಅವರು ಇವರಿಬ್ಬರು ಬೇರ್ಪಡಲು ಪ್ರಮುಖ ಕಾರಣವನ್ನು ಸಹ ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ ನೋಡಿ.

ಟೈಗರ್ ಶ್ರಾಫ್ ಮತ್ತು ದಿಶಾ ಪಾಟ್ನಿ

ಟೈಗರ್ ಶ್ರಾಫ್ ಮತ್ತು ದಿಶಾ ಪಾಟ್ನಿ

  • Share this:
ನಿನ್ನೆ ಮೊನ್ನೆ ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮತ್ತು ನಟಿ ದಿಶಾ ಪಾಟ್ನಿ (Disha Patni) ಅವರ ಬ್ರೇಕಪ್ ಆದ ಸುದ್ದಿಗಳು ಹರಿದಾಡುತ್ತಿದ್ದು, ಅವುಗಳು ನಿಜವೇ ಅಥವಾ ಬರೀ ಊಹಾಪೋಹಗಳೇ ಅಂತ ಅನೇಕ ಜನ ಅಭಿಮಾನಿಗಳಿಗೆ ಅರ್ಥವಾಗದೆ ಗೊಂದಲದಲ್ಲಿದ್ದರು. ಆದರೆ ಇವತ್ತು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಈ ಇಬ್ಬರೂ ಬಾಲಿವುಡ್ ನಟ ಮತ್ತು ನಟಿ ಸುಮಾರು 6 ವರ್ಷಗಳ ಸುದೀರ್ಘ ಸಂಬಂಧವನ್ನು (Relationship) ಕೊನೆಗೊಳಿಸಿದ್ದಾರೆ ಮತ್ತು ಅವರು ಇವರಿಬ್ಬರು ಬೇರ್ಪಡಲು ಪ್ರಮುಖ ಕಾರಣವನ್ನು ಸಹ ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ ನೋಡಿ.

ಟೈಗರ್ ಶ್ರಾಫ್, ದಿಶಾ ಪಾಟ್ನಿ ಸಂಬಂಧದ ಬಗ್ಗೆ ಹೇಳಿದ ಜಾಕಿ  ಶ್ರಾಫ್
ಇ ಟೈಮ್ಸ್ ವರದಿ ಮಾಡಿರುವ ಪ್ರಕಾರ "ಟೈಗರ್ ತನ್ನ ಹೆತ್ತವರಾದ ಜಾಕಿ ಮತ್ತು ಆಯೇಷಾ ಅವರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದಾಗಿನಿಂದಲೂ ಟೈಗರ್ ನಟಿ ದಿಶಾ ಅವರ ಜೊತೆಗೆ ವಾಸಿಸುತ್ತಿದ್ದರು. ಅವರು ಒಟ್ಟಿಗೆ ಇದ್ದಾಗಿನಿಂದಲೂ ಅನೇಕ ವದಂತಿಗಳು ಹರಿದಾಡಿದವು. ಇವರಿಬ್ಬರು ತುಂಬಾ ವರ್ಷಗಳಿಂದ ಜೊತೆಯಲ್ಲಿ ಇರುವುದರಿಂದ ದಿಶಾ ಈ ವರ್ಷ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ತದ ನಂತರ ದಿಶಾ ತನ್ನ ಮನಸ್ಸಿನಲ್ಲಿರುವ ಈ ಭಾವನೆಯನ್ನು ನಟ ಟೈಗರ್ ಬಳಿ ವ್ಯಕ್ತಪಡಿಸಿದ್ದಾರೆ. ಆದರೆ ಟೈಗರ್ ಅದನ್ನು ಸುತಾರಾಂ ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Urfi Javed: ಉರ್ಫಿ ಉಡುಪಿನ ಹಿಂದಿನ ಆಲೋಚನೆ ಭಾರೀ ಬೊಂಬಾಟ್! ಖ್ಯಾತ ಫ್ಯಾಷನ್ ಡಿಸೈನರ್ ಹೊಗಳಿಕೆ

ಸಹಜವಾಗಿಯೇ ನಟಿ ದಿಶಾ ಅವರು ಟೈಗರ್ ಗೆ ತನ್ನನ್ನು ಮದುವೆಯಾಗು ಅಂತ ಒಂದೆರಡು ಬಾರಿ ಕೇಳಿದರೂ ಸಹ ಪ್ರತಿ ಬಾರಿಯೂ, ಟೈಗರ್ ನ ಪ್ರತಿಕ್ರಿಯೆ 'ಇಲ್ಲ, ಸದ್ಯಕ್ಕೆ ಆಗೋದು ಬೇಡ' ಅಂತಾನೆ ಹೇಳುತ್ತಾ ಮದುವೆಯ ವಿಷಯವನ್ನು ತಳ್ಳಿ ಹಾಕುತ್ತಾ ಬಂದಿದ್ದರು. ಟೈಗರ್ ಸದ್ಯಕ್ಕೆ ವೈವಾಹಿಕ ಸಂಬಂಧಕ್ಕೆ ಬದ್ಧರಾಗಲು ಸಿದ್ಧರಿರಲಿಲ್ಲ” ಎಂದು ಇವರಿಬ್ಬರಿಗೆ ತುಂಬಾನೇ ಆಪ್ತರಾಗಿರುವ ಮೂಲದಿಂದ ತಿಳಿದು ಬಂದಿದೆ.

ಮದುವೆ ಬಗ್ಗೆ ಏನು ಹೇಳಿದ್ರು ಟೈಗರ್ ಶ್ರಾಫ್ ಅವರ ತಂದೆ
ಟೈಗರ್ ಶೀಘ್ರದಲ್ಲೇ ಮದುವೆಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಜಾಕಿ ಶ್ರಾಫ್ ಮಾರ್ಚ್ 2022 ರಲ್ಲಿ ಮಾಧ್ಯಮದ ಒಂದು ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಟೈಗರ್ ಮತ್ತು ದಿಶಾ ಗಂಡ ಹೆಂಡತಿಯಾಗಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ವೇಗವಾಗಿ ಹರಿದಾಡಲು ಪ್ರಾರಂಭಿಸಿದ ಸಮಯ ಅದು. ಜಾಕಿ ಶ್ರಾಫ್ ಅವರು "ಟೈಗರ್ ಈಗ ತನ್ನ ಕೆಲಸವನ್ನು ಮದುವೆಯಾಗಿದ್ದಾನೆ. ಟೈಗರ್ ತನ್ನ ಗಮನವನ್ನು ಸಂಪೂರ್ಣವಾಗಿ ತನ್ನ ಕೆಲಸದ ಮೇಲೆ ಕೇಂದ್ರೀಕರಿಸಿದ್ದಾನೆ" ಎಂದು ಹೇಳಿದ್ದರು.

ಅವರು ಮಾಧ್ಯಮಗಳ ಮತ್ತೊಂದು ಸಂದರ್ಶನದಲ್ಲಿ "ಟೈಗರ್ ತನ್ನ ಮೊದಲ ಸ್ನೇಹಿತನನ್ನು ಕಂಡು ಕೊಂಡನು, ಅವಳು 25 ವಯಸ್ಸಿನ ಹುಡುಗಿ. ಅವರಿಬ್ಬರು ಒಂದೇ ರೀತಿಯ ಉತ್ಸಾಹಗಳನ್ನು ಹಂಚಿಕೊಳ್ಳುತ್ತಾರೆ, ನೃತ್ಯ ಮತ್ತು ತಾಲೀಮುಗಳನ್ನು ಒಟ್ಟಿಗೆ ಹಂಚಿಕೊಳ್ಳುತ್ತಾರೆ. ಅವಳು ಸೈನ್ಯದ ಅಧಿಕಾರಿಗಳ ಕುಟುಂಬದಿಂದ ಬಂದವಳು, ಆದ್ದರಿಂದ ಅವಳು ಶಿಸ್ತಿನ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಅವರು ಭವಿಷ್ಯದಲ್ಲಿ ಮದುವೆಯಾಗಬಹುದು ಅಥವಾ ಜೀವನ ಪರ್ಯಂತ ಸ್ನೇಹಿತರಾಗಿಯೇ ಉಳಿಯಬಹುದು ಎಂದು ಯಾರಿಗೆ ಗೊತ್ತು" ಎಂದು ಸಹ ಜಾಕಿ ಹಿಂದೊಮ್ಮೆ ಹೇಳಿದ್ದರು.

ಟೈಗರ್ ಮದುವೆಗೆ ಒಪ್ಪದೆ ಇರುವ ವಿಚಾರವನ್ನು ದಿಶಾ ಹೇಗೆ ತೆಗೆದುಕೊಂಡಿದ್ದಾರೆ?
ಟೈಗರ್ ಮತ್ತು ದಿಶಾ ಅವರ ಸಂಬಂಧದಲ್ಲಿ ಇತ್ತೀಚೆಗೆ ಆದ ಕೆಲವು ಬದಲಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಜಾಕಿ, "ನೋಡಿ, ಅವರು ಒಟ್ಟಿಗೆ ಇದ್ದಾರೆಯೇ ಅಥವಾ ಇಲ್ಲವೇ, ಅವರು ಪರಸ್ಪರ ಹೊಂದಿಕೆಯಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅವರಿಗೆ ಬಿಟ್ಟಿದ್ದು. ಇದು ಅವರ ಪ್ರೇಮಕಥೆ, ಅವರಂತೆ ನಾನು ಮತ್ತು ನನ್ನ ಹೆಂಡತಿ ಆಯೇಷಾ ಸಹ ನಮ್ಮ ಪ್ರೇಮಕಥೆಯನ್ನು ಹೊಂದಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: Vijay Deverakonda: ಲೋಕಲ್​ ಟ್ರೈನ್​ನಲ್ಲಿ ಅನನ್ಯಾ ಪಾಂಡೆ ತೊಡೆ ಮೇಲೆ ಮಲಗಿದ ಲೈಗರ್​! ಫೋಟೋ ನೋಡಿ ಬೆರಗಾದ ಫ್ಯಾನ್ಸ್

"ಟೈಗರ್ ಮತ್ತು ದಿಶಾಗೆ ಪರಸ್ಪರರ ಬಗ್ಗೆ ಯಾವುದೇ ದ್ವೇಷವಿಲ್ಲ. ಈ ಸಂಬಂಧದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ದಿಶಾ ಎಂದು ಜನರು ಹೇಳುತ್ತಿದ್ದಾರೆ, ಆದರೆ ನಿಜ ಹೇಳಬೇಕೆಂದರೆ, ಇಬ್ಬರೂ ಪರಸ್ಪರ ಹೆಚ್ಚು ಪ್ರೀತಿ ಮಾಡುತ್ತಿದ್ದರು ಎಂದು ವರದಿ ಹೇಳುತ್ತದೆ. ಟೈಗರ್ ಮದುವೆಗೆ ಒಪ್ಪದೆ ಇರುವ ವಿಚಾರವನ್ನು ದಿಶಾ ಹೇಗೆ ತೆಗೆದುಕೊಂಡಿದ್ದಾರೆ ಎಂದು ಕೇಳಿದಾಗ ಮೂಲವು "ದಿಶಾ ಅದನ್ನು ಚೆನ್ನಾಗಿಯೇ ತೆಗೆದುಕೊಂಡಿದ್ದಾರೆ, ಯಾರ ಮೇಲೂ ಸಿಟ್ಟಾಗಿಲ್ಲ. ಜೊತೆಗೆ ಯಾರಿಗೆ ಗೊತ್ತು, ಅವರು ಸ್ವಲ್ಪ ಸಮಯದ ನಂತರ ಮತ್ತೆ ಒಂದಾಗಬಹುದು" ಎಂದು ಹೇಳಿದರು.
Published by:Ashwini Prabhu
First published: