ವಿವಾದಕ್ಕೆ ಕಾರಣವಾಯ್ತು ತರುಣ್ ಸುಧೀರ್ ಟ್ವೀಟ್; ನಿರ್ದೇಶಕನ ವಿರುದ್ಧ ರಕ್ಷಿತ್, ಸುದೀಪ್ ಅಭಿಮಾನಿಗಳು ಫುಲ್ ಗರಂ

ರಕ್ಷಿತ್​ ಹೊಸ ಲುಕ್​ ಶಾಹಿದ್ ಕಪೂರ್ ಅಭಿನಯದ ‘ಫಟಾ ಪೋಸ್ಟರ್​ ನಿಕ್ಲಾ ಹೀರೋ’ ಸಿನಿಮಾದ ಲುಕ್​ನಂತಿದೆ. ಅದನ್ನೇ ಭಟ್ಟಿ ಇಳಿಸಲಾಗಿದೆ ಎಂದು ಅನೇಕರು ಬರೆದುಕೊಂಡಿದ್ದರು. ಇದೇ ಮಾದರಿಯಲ್ಲಿ ತರುಣ್​ ಬರೆದುಕೊಂಡಿದ್ದರು. 

Rajesh Duggumane | news18
Updated:June 7, 2019, 11:44 AM IST
ವಿವಾದಕ್ಕೆ ಕಾರಣವಾಯ್ತು ತರುಣ್ ಸುಧೀರ್ ಟ್ವೀಟ್; ನಿರ್ದೇಶಕನ ವಿರುದ್ಧ ರಕ್ಷಿತ್, ಸುದೀಪ್ ಅಭಿಮಾನಿಗಳು ಫುಲ್ ಗರಂ
ತರುಣ್​ ಸುಧೀರ್​
  • News18
  • Last Updated: June 7, 2019, 11:44 AM IST
  • Share this:
ಗುರುವಾರ ರಕ್ಷಿತ್​ ಶೆಟ್ಟಿ ಜನ್ಮ ದಿನ. ಹಾಗಾಗಿ, ಅವರ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟರ್​ ಹಾಗೂ ಟೀಸರ್​ ರಿಲೀಸ್​ ಆಗಿತ್ತು. ಪೋಸ್ಟರ್​ ನೋಡಿ ಸಾಕಷ್ಟು ಜನರು ವಿಶ್​ ಮಾಡಿದ್ದರು. ನಿರ್ದೇಶಕ ತರುಣ್​ ಸುಧೀರ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದರು. ಆದರೆ, ಅವರ ಟ್ವೀಟ್​ ಈಗ ವಿವಾದದ ಕಿಡಿ ಹೊತ್ತಿಸಿದೆ.

ನಿನ್ನೆ ಬಿಡುಗಡೆ ಮಾಡಿದ ಹೊಸ ಲುಕ್​ನಲ್ಲಿ ರಕ್ಷಿತ್​ ಶೆಟ್ಟಿ ಪೋಸ್ಟರ್​ ಒಂದನ್ನು ಹರಿದುಕೊಂಡು ಬರುತ್ತಿದ್ದಾರೆ. ಕೈಯಲ್ಲಿ ಗನ್​  ಹಿಡಿದಿದ್ದು, ಅವರ ಹಿಂಬದಿಯಿಂದ ಗುಂಡುಗಳ ಸುರಿಮಳೆಯೇ ಹರಿದುಬರುತ್ತಿದೆ. ಇದು ಶಾಹಿದ್ ಕಪೂರ್ ಅಭಿನಯದ ‘ಫಟಾ ಪೋಸ್ಟರ್​ ನಿಕ್ಲಾ ಹೀರೋ’ ಸಿನಿಮಾದ ಲುಕ್​ನಂತಿದೆ. ಅದನ್ನೇ ಭಟ್ಟಿ ಇಳಿಸಲಾಗಿದೆ ಎಂದು ಅನೇಕರು ಬರೆದುಕೊಂಡಿದ್ದರು.  ಇದೇ ಮಾದರಿಯಲ್ಲಿ ತರುಣ್​ ಬರೆದುಕೊಂಡಿದ್ದರು.

ಅವನೇ ಶ್ರೀಮನ್ನಾರಾಯಣ’ ಪೋಸ್ಟರ್​ ಹಾಕಿ ಟ್ವೀಟ್​ ಮಾಡಿದ್ದ ತರುಣ್​ ಸುಧೀರ್​, “ಫಟಾ ಪೋಸ್ಟರ್​ ನಿಕ್ಲಾ ಹೀರೋ, ನಿಜಕ್ಕೂ ಇದು ಉತ್ತಮ ಪೋಸ್ಟರ್​. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು,” ಎಂದು ಬರೆದುಕೊಂಡಿದ್ದರು. ಇದಕ್ಕೆ ಅನೇಕರು ಕೆಂಡಕಾರಿದ್ದಾರೆ. ‘ನಿಮಗೆ ಸುಂದರವಾದ ಒಂದು ಪೋಸ್ಟರ್​ ಮಾಡಲು ಬರುವುದಿಲ್ಲ. ಹೀಗಿರುವಾಗ ಬೇರೆಯವರ ಬಗ್ಗೆ ಮಾತನಾಡಬೇಡಿ,’ ಎಂದಿದ್ದಾರೆ.


ಇದನ್ನೂ ಓದಿ:  ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಗಿಫ್ಟ್ ಮೇಲೆ ಗಿಫ್ಟ್; ಸಿನಿಮಾ ಪೋಸ್ಟರ್, ಟೀಸರ್ ಸುಗ್ಗಿ

ಇನ್ನು, ತರುಣ್​ ಸುಧೀರ್​ ವಿರುದ್ಧ ಸುದೀಪ್​ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೊನ್ನೆ ಸುದೀಪ್​ ಅಭಿನಯದ ‘ಪೈಲ್ವಾನ್​’ ಪೋಸ್ಟರ್​ ಬಿಡುಗಡೆ ಆಗಿತ್ತು. ಈ ತಂಡಕ್ಕೆ ಶುಭಾಶಯ ಹೇಳುವುದು ಹಾಗಿರಲಿ ಆ ಬಗ್ಗೆ ಒಂದಕ್ಷರವನ್ನೂ ತರುಣ್​ ಬರೆದುಕೊಂಡಿರಲಿಲ್ಲ. ಆದರೆ, ‘ಅವರು ಅವನೇ ಶ್ರೀಮನ್ನಾರಾಯಣ’ ಸಿನಿಮಾ ತಂಡಕ್ಕೆ ಆಲ್​ ದಿ ಬೆಸ್ಟ್​ ಎಂದಿದ್ದರು. ಇದಕ್ಕೆ ಸುದೀಪ್​ ಅಭಿಮಾನಿಗಳು ಸಿಟ್ಟಾಗಿದ್ದಾರೆ. ತರುಣ್​ ಈ ರೀತಿ ಮಾಡಬಾರದಿತ್ತು ಎಂದು ಬರೆದುಕೊಂಡಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್​


ದರ್ಶನ್​ ಹಾಗೂ ಸುದೀಪ್​ ನಡುವಿನ ಗೆಳೆತನ ಈ ಹಿಂದೆ ಮುರಿದು ಬಿದ್ದಿತ್ತು. ದರ್ಶನ್​ ಅಭಿನಯದ ‘ರಾಬರ್ಟ್​​’ ಚಿತ್ರವನ್ನು ತರುಣ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸುದೀಪ್​ ಚಿತ್ರಕ್ಕೆ ತರುಣ್​ ಆಲ್​ ದಿ ಬೆಸ್ಟ್​​ ಹೇಳಿಲ್ಲ ಎನ್ನುವ ಮಾತು ಟ್ವಿಟ್ಟರ್​ನಲ್ಲಿ ಹರಿದಾಡಿದೆ.

ಫಟಾ ಪೋಸ್ಟರ್​ ನಿಕ್ಲಾ ಹೀರೋ ಸಿನಿಮಾ ಪೋಸ್ಟರ್​


ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ಇಂದು ಜನ್ಮ ದಿನದ ಸಂಭ್ರಮ; ವಿಶ್​ ಮಾಡ್ತಾರಾ ರಶ್ಮಿಕಾ ಮಂದಣ್ಣ?

First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ