Roberrt Queen: ರಿಲೀಸ್​ ಆಯ್ತು ರಾಬರ್ಟ್​ ರಾಣಿ ಆಶಾ ಭಟ್​ ಫಸ್ಟ್​ ಲುಕ್ ಪೋಸ್ಟರ್​..!

Happy Birtday Asaha Bhat: ಭದ್ರಾವತಿಯ ಬೆಡಗಿ ಆಶಾ ಭಟ್​ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ರಾಬರ್ಟ್​ ಚಿತ್ರತಂಡದ ಕಡೆಯಿಂದ ಸಖತ್ ಉಡುಗೊರೆ ಸಿಕ್ಕಿದೆ.

ರಾಬರ್ಟ್​ ಸಿನಿಮಾದಲ್ಲಿ ಆಶಾ ಭಟ್​

ರಾಬರ್ಟ್​ ಸಿನಿಮಾದಲ್ಲಿ ಆಶಾ ಭಟ್​

  • Share this:
ರಾಬರ್ಟ್​ ಕ್ವೀನ್​ ಆಶಾ ಭಟ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಯ ಹುಟ್ಟುಹಬ್ಬಕ್ಕೆ 'ರಾಬರ್ಟ್'​ ಚಿತ್ರತಂಡ ಕಡೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಆಶಾ ಭಟ್​ ಅವರ ಫಸ್ಟ್​ಲುಕ್​ ಪೋಸ್ಟರ್ ಅನ್ನು ಇಂದು ಬರ್ತ್​ಡೇ ಗಿಫ್ಟ್​ ಆಗಿ ನಿರ್ದೇಶಕ ತರುಣ್​ ಸುಧೀರ್​ ರಿಲೀಸ್​ ಮಾಡಿದ್ದಾರೆ. ಕನ್ನಡತಿಯಾದರೂ ಬಾಲಿವುಡ್​ನಲ್ಲಿ ನಟಿಸುತ್ತಿರುವ ಆಶಾ ಭಟ್​ ರಾಬರ್ಟ್​ ಸಿನಿಮಾದ ಮೂಲಕ ಚಂದನವಕ್ಕೆ ಕಾಲಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಆಶಾ ಭಟ್​, ಡ್ಯಾನ್ಸಿಂಗ್​ ಕ್ವೀನ್​ ಸಹ ಹೌದು. ಭದ್ರಾವತಿಯ ಹುಡುಗಿ ಆಶಾ ಭಟ್​ ಮುಂಬೈನಲ್ಲಿ ಮಾಡೆಲಿಂಗ್​ ಮಾಡುತ್ತಾ, ಸಿನಿಮಾಗಳಲ್ಲಿ ಅವಕಾಶಗಿಟ್ಟಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಿಸ್​ ಸುಪ್ರಾ ನ್ಯಾಷನಲ್​ ಆಗಿ ಹೊರ ಹೊಮ್ಮಿದ್ದ ಆಶಾ ಭಟ್​ ಹಿಂದಿಯ ಜಂಗ್ಲಿ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟವರು. 

ಭದ್ರಾವತಿಯ ಬೆಡಗಿ ಆಶಾ ಭಟ್​ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ರಾಬರ್ಟ್​ ಚಿತ್ರತಂಡದ ಕಡೆಯಿಂದ ಸಖತ್ ಉಡುಗೊರೆ ಸಿಕ್ಕಿದೆ. ರಾಬರ್ಟ್​ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ತೆಗೆದ ಸ್ಟಿಲ್​ ಒಂದನ್ನು ನಿರ್ದೇಶಕ ತರುಣ್​ ಸುಧೀರ್​ ಹಂಚಿಕೊಂಡಿದ್ದಾರೆ.

Here is the first look of #RoberrtQueen @StarAshaBhat. She has done a amazing job in her debut. Her dance is something to look out for.



asha bhat, Roberrt, Darshan, first look of Roberrt queen Asha Bhat, sandalwood, Happy birthday Asha Bhat
ರಾಬರ್ಟ್​ ರಾಣಿ ಆಶಾ ಭಟ್​ ಫಸ್ಟ್​ಲುಕ್​ ಪೋಸ್ಟರ್​


ಆಶಾ ಭಟ್​ ಮೊದಲ ಸಿನಿಮಾದಲ್ಲೇ ಚೆನ್ನಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಅವರು ಡ್ಯಾನ್ಸ್ ಮಾಡುವ ರೀತಿ ನಿಜಕ್ಕೂ ಖುಷಿ ನೀಡುತ್ತದೆ ಎಂದು ಹೇಳುತ್ತಲೇ ಈ ಸಖತ್ ಸ್ಟಿಲ್​ ಪೋಸ್ಟ್​ ಮಾಡಿದ್ದಾರೆ ನಿರ್ದೇಶಕ. ಇನ್ನು ಡ್ಯಾನ್ಸ್​ ವಿಷಯಕ್ಕೆ ಬಂದರೆ, ಆಶಾ ಭಟ್​ ಸಖತ್ತಾಗಿ ಹೆಜ್ಜೆ ಹಾಕುತ್ತಾರೆ. ಅವರ ಇನ್​ಸ್ಟಾಗ್ರಾಂ ವಿಡಿಯೋಗಳನ್ನು ನೋಡಿದರೆ, ಇದನ್ನು ಹೇಳಬಹುದು.










ನಾಯಕಿ ಆಶಾ ಭಟ್​ ಬೆಂಗಳೂರಿನ ಆರ್​.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್​ ಮುಗಿಸಿದ್ದು, ಬಾಲಿವುಡ್​ ಸಿನಿಮಾ 'ಜಂಗ್ಲಿ'ಯಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿದ್ಯುತ್​ ಜಮ್ವಾಲ್​ ಜೊತೆ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಆದಿಪುರುಷ್​ ಸಿನಿಮಾದಿಂದ ಸೈಫ್​ ಅಲಿ ಖಾನ್​ರನ್ನು ಕೈಬಿಡುವಂತೆ ಟ್ವೀಟಿಗರ ಒತ್ತಾಯ..!

ದರ್ಶನ್​ ಅವರ ಬಹುನಿರೀಕ್ಷಿತ ಹಾಗೂ 53ನೇ ಸಿನಿಮಾ 'ರಾಬರ್ಟ್​'. ಹೌದು, ಈ ಚಿತ್ರದ ಮೇಲೆ ದಚ್ಚು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಇದರಲ್ಲಿ ದರ್ಶನ್​ ವಿಭಿನ್ನ ಪಾತ್ರ ಹಾಗೂ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ತಮ್ಮ ಲುಕ್​ ಅನ್ನೇ ಬದಲಾಯಿಸಿಕೊಂಡಿದ್ದಾರೆ.
Published by:Anitha E
First published: