ರಾಷ್ಟ್ರಪ್ರಶಸ್ತಿ ಕಾರ್ಯಕ್ರಮಕ್ಕಾಗಿ ಮಾಡಿಸಿಕೊಂಡ ಒಡವೆಗಳನ್ನು ಈಗ ತೊಟ್ಟ Kangana Ranaut: ಹೇಗಿದೆ ನೋಡಿ ಆ ನೆಕ್ಲೆಸ್

ತಲೈವಿ ಸಿನಿಮಾದ ಹಾಡಿನ ರಿಲೀಸ್​ಗಾಗಿ ಚೆನ್ನೈನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಂಗನಾ ಸಖತ್ ವಿಶೇಷವಾಗಿ ಸಿದ್ಧರಾಗಿದ್ದರು. ಹೌದು, ಕಾಂಜಿವರಂ ಸೀರೆಯುಟ್ಟು, ಅದರ ಜೊತೆಗೆ ಹೇಳಿ ಮಾಡಿಸಿಕೊಂಡಿದ್ದ ಆಭರಣಗಳನ್ನು ತೊಟ್ಟಿದ್ದರು.

ತಲೈವಿ ಸಿನಿಮಾದಲ್ಲಿ ಕಂಗನಾ

ತಲೈವಿ ಸಿನಿಮಾದಲ್ಲಿ ಕಂಗನಾ

  • Share this:
ಬಾಲಿವುಡ್ ಕ್ವೀನ್ ಕಂಗನಾ ರನೋತ್ (Kangana Ranaut) ಸದ್ಯ ತಲೈವಿ (Thalavii) ಸಿನಿಮಾದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ತಲೈವಿ ಚಿತ್ರ ರಿಲೀಸ್ ಆಗಲಿದೆ. ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ಬಯೋಪಿಕ್ (J Jayalalithaa Biopic) ಇದಾಗಿದೆ. ಈ ಸಿನಿಮಾದ ರಿಲೀಸ್​ಗೆ ಕೆಲವೇ ಕೆಲವು ದಿನಗಳು ಇರುವಾಗಲೇ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಿದೆ. ಕಂಗನಾ ರನೋತ್​ ತಲೈವಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ಕಂಗನಾ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದ ಮೇಲೆ ಕಂಗನಾ ಹಾಗೂ ಚಿತ್ರತಂಡ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೌದು, ಈಗಾಗಲೇ ರಿಲೀಸ್​ ಆಗಿರುವ ಹಾಡು, ಪೋಸ್ಟರ್​ ಹಾಗೂ ವಿಡಿಯೋ ತುಣುಕುಗಳು ತಲೈವಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. 

ಕಳೆದ ಶನಿವಾರಷ್ಟೆ ಕಂಗನಾ ರನೋತ್ ಹಾಗೂ ತಲೈವಿ ಸಿನಿಮಾದ ನಿರ್ದೇಶಕ ಎ. ಎಲ್​. ವಿಜಯ್​ ಅವರು ದಿ. ಜೆ. ಜಯಲಲಿತಾ ಅವರ ಸ್ಮಾರಕ್ಕೆ ಭೇಟಿ ಕೊಟ್ಟು ಪುಷ್ಪ ನಮನ ಸಲ್ಲಿಸಿದ್ದರು. ಜೊತೆಗೆ ಎಂಜಿಆರ್​ ಅವರ ಸ್ಮಾರಕಕ್ಕೂ ಪುಷ್ಪಗುಚ್ಛ ಸಮರ್ಪಿಸಲಾಯಿತು. ಇನ್ನು ಕಂಗನಾ ನಿತ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್​ಗಳನ್ನು ಮಾಡುತ್ತಲೇ ಇದ್ದಾರೆ.






ತಲೈವಿ ಸಿನಿಮಾದ ಹಾಡಿನ ರಿಲೀಸ್​ಗಾಗಿ ಚೆನ್ನೈನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಂಗನಾ ಸಖತ್ ವಿಶೇಷವಾಗಿ ಸಿದ್ಧರಾಗಿದ್ದರು. ಹೌದು, ಕಾಂಜಿವರಂ ಸೀರೆಯುಟ್ಟು, ಅದರ ಜೊತೆಗೆ ಹೇಳಿ ಮಾಡಿಸಿಕೊಂಡಿದ್ದ ಆಭರಣಗಳನ್ನು ತೊಟ್ಟಿದ್ದರು.

ಇದನ್ನೂ ಓದಿ: Anant Nag: ಆಬ್ರಕಡಾಬ್ರ ಚಿತ್ರತಂಡದ ಜೊತೆ ಕೇಕ್​ ಕತ್ತರಿಸಿದ ಅನಂತ್​ ನಾಗ್​..!

ಹೌದು, ಕಂಗನಾ ಈ ಫೋಟೋದಲ್ಲಿ ತೊಟ್ಟಿರುವ ಆಭರಣಗಳನ್ನು ತಮ್ಮ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಮಾಡಿಸಿಕೊಂಡಿದ್ದರಂತೆ. ಕೋವಿಡ್​ ಕಾರಣದಿಂದಾಗಿ ಆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಡವಾಗಿದ್ದು, ಇನ್ನು ತಡೆಯಲಾರದೆ ತಲೈವಿ ಸಿನಿಮಾದ ಕಾರ್ಯಕ್ರಮದಲ್ಲೇ ಎಮರಾಲ್ಡ್​ನ ನೆಕ್​ ಪೀಸ್ ಹಾಗೂ ಕವಿಯೋಲೆಯನ್ನು ಧರಿಸಿದ್ದಾಗಿ ಕಂಗನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.




ತಡವಾಗಿ ಪ್ರಕಟವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಕೊರೋನಾ ಕಾರಣದಿಂದಾಗಿ ಒಂದು ವರ್ಷ ತಡವಾಗಿ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಯಿತು. ಇದರಲ್ಲಿ ಮಣಿಕರ್ಣಿಕಾ ಹಾಗೂ ಪಂಗಾ ಸಿನಿಮಾದಲ್ಲಿನ ನಟನೆಗಾಗಿ ಕಂಗನಾ ರನೋತ್​ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಗರ್ಲ್​ಫ್ರೆಂಡ್ಸ್​​ಗೆ ಸಹೋದರಿಯ ಬಟ್ಟೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದ Ranbir Kapoor..!

ನಟಿ ಕಂಗನಾ ರನೋತ್ ಅವರು ಜಯಲಲಿತಾರ ಪಾತ್ರದಲ್ಲಿ ನಟಿಸಿದರೆ, ಖ್ಯಾತ ನಟ ಅರವಿಂದ್ ಸ್ವಾಮಿ ಅವರು ಎಂಜಿಆರ್​ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಂಗನಾ ಹಾಗೂ ಅರವಿಂದ್​ ಸ್ವಾಮಿ ಅವರ ಕಾಂಬಿನೇಷನ್ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕಡೆ ಧಾಡಕ್​ ಶೂಟಿಂಗ್ ಇತ್ತೀಚೆಗಷ್ಟೆ ಮುಗಿದಿದೆ.​ ಇದರ ತಮ್ಮ ಮುಂದಿನ ಪ್ರಾಜೆಕ್ಟ್​ನ ಕೆಲಸಗಳಲ್ಲೂ ಕಂಗನಾ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಮೇಘನಾ ರಾಜ್​ ಮಗ Raayan Raj Sarja ನಾಮಕರಣದಲ್ಲಿ ಚಿರು ಸ್ನೇಹಿತರ ಸಮಾಗಮ..!

ಮುಂದಿನ ಸಿನಿಮಾದಲ್ಲಿ ಕಂಗನಾ ಅವರು ಮಾಜಿ ಪ್ರಧಾನಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಕಂಗನಾ ರನೋತ್​ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಬಗ್ಗೆ ತಿಳಿದೇ ಇದೆ. ಈ ಸಿನಿಮಾ ಕುರಿತಂತೆ ಇತ್ತೀಚೆಗಷ್ಟೆ ಹೊಸ ಅಪ್ಡೇಟ್​ ಹೊರ ಬಿದ್ದಿತ್ತು. ಹೌದು, ಈ ಸಿನಿಮಾಗೆ ಟೈಟಲ್​ ಫಿಕ್ಸ್​ ಆಗಿದ್ದು, ಪಾತ್ರಕ್ಕೆ ಅಗತ್ಯವಿರುವ ಸಿದ್ಧತೆಗಳನ್ನೂ ಸಹ ಆರಂಭಿಸಿದ್ದಾರಂತೆ.
Published by:Anitha E
First published: