Varisu Video Leaked: ದಳಪತಿ ವಿಜಯ್ ನಟನೆಯ ವರಿಸು ಸಿನಿಮಾದ ವಿಡಿಯೋ ಲೀಕ್! ವಿಡಿಯೋ ನೋಡಿ ಗರಂ ಆದ ಅಭಿಮಾನಿಗಳು

ದಳಪತಿ ವಿಜಯ್​ ಅವರ ಅಭಿಮಾನಿಗಳು ಈ ದೃಶ್ಯ ವೈರಲ್​ ಆಗುತ್ತಿದ್ದಂತೆಯೇ ವಿಡಿಯೋವನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದಾರೆ. ಏಕೆಂದರೆ ಈ ಸಿನಿಮಾದ ದೃಶ್ಯಗಳು ಸೋರಿಕೆಯಾಗುದನ್ನು ತಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ದಳಪತಿ ವಿಜಯ್ ನಟನೆಯ ವರಿಸು ಸಿನಿಮಾದ ವಿಡಿಯೋ ಲೀಕ್

ದಳಪತಿ ವಿಜಯ್ ನಟನೆಯ ವರಿಸು ಸಿನಿಮಾದ ವಿಡಿಯೋ ಲೀಕ್

 • Share this:
  ತಮಿಳು ನಟ ದಳಪತಿ ವಿಜಯ್ (Thalapathy vijay) ತಮ್ಮ ಮುಂಬರುವ 'ವರಿಸು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಈ ಸಿನಿಮಾದ ಸುದ್ದಿಗಳು ದಿನೇ ದಿನೇ ಚರ್ಚೆಯಾಗುತ್ತಿದೆ. ಇದೀಗ ವರಿಸು (Varisu) ಸಿನಿಮಾ ಶೂಟಿಂಗ್​ ಸೆಟ್​ನಿಂದ ವಿಡಿಯೋವೊಂದು ಲೀಕ್ (Video Leak) ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆಯೇ ಲೀಕ್​ ಆದ ವಿಡಿಯೋದಲ್ಲಿ ವಿಜಯ್​ ನಟನೆಯ ಜೊತೆಗೆ ಮಾತು ಕೂಡ ಕೇಳುತ್ತಿದೆ. ವಿಜಯ್​ ಜೊತೆಗೆ ನಟ ಪ್ರಭು (Prabhu) ಮತ್ತು ಶರತ್​ ಕುಮಾರ್ (Sharath Kumar)​ ಕೂಡ ನಟಿಸುವುದು ಇದರಲ್ಲಿ ಕಾಣಬಹುದಾಗಿದೆ. ವರಿಸು ಚಿತ್ರತಂಡ ಆಸ್ಪತ್ರೆಯಲ್ಲಿ ಶೂಟಿಂಗ್​ ಮಾಡುತ್ತಿರುವ ದೃಶ್ಯ ಇದಾಗಿದ್ದು, ಚಿತ್ರೀಕರಣದ ವೇಳೆ ಮೊಬೈಲ್​ ಮೂಲಕ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದ್ದು, ಇದೀಗ ದೃಶ್ಯ ವೈರಲ್ ಆಗುತ್ತಿದೆ. ಅನೇಕರು ಈ ದೃಶ್ಯವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅದರಲ್ಲಿ ದಳಪತಿ ವಿಜಯ್​ ಅಭಿಮಾನಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣಸಿಂದ ಡಿಲೀಟ್​ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

  ವರ್ಷಕ್ಕೊಂದರಂತೆ ದಳಪತಿ ವಿಜಯ್​ ಸಿನಿಮಾ ಮಾಡುತ್ತಿದ್ದಾರೆ. ಸರ್ಕಾರ್​, ಬಿಗಿಲ್​, ಮಾಸ್ಟರ್​, ಬೀಸ್ಟ್​​ ಸಿನಿಮಾದಂತೆಯೇ ಮುಂಬರುವ ವರ್ಷಕ್ಕೆ ವರಿಸು ಸಿನಿಮಾದ ಮೂಲಕ ತೆರೆಗೆ ಬರಲಿದ್ದಾರೆ. ಆದರೆ ಅದಕ್ಕಾಗಿ ಈಗಲೇ ಸಿನಿಮಾ ಶ್ಯೂಟಿಂಗ್​ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಹೀಗಿರುವಾಗ ಚಿತ್ರೀಕರಣದ ವೇಳೆ ವರಿಸು ಸಿನಿಮಾದ ಶೂಟಿಂಗ್​ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ದಳಪತಿ ವಿಜಯ್​ ಅವರ ಅಭಿಮಾನಿಗಳು ಈ ದೃಶ್ಯ ವೈರಲ್​ ಆಗುತ್ತಿದ್ದಂತೆಯೇ ವಿಡಿಯೋವನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದಾರೆ. ಏಕೆಂದರೆ ಈ ಸಿನಿಮಾದ ದೃಶ್ಯಗಳು ಸೋರಿಕೆಯಾಗುದನ್ನು ತಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

  ಕೊಡಗಿನ ಬೆಡಗಿ ದಳಪತಿಗೆ ನಾಯಕಿ!

  'ವರಿಸು' ದಳಪತಿ ವಿಜಯ್​ ಅವರ ತಮಿಳು ಮತ್ತು ತೆಲುಗಿನಲ್ಲಿ ಬರುವ ದ್ವಿಭಾಷಾ ಸಿನಿಮಾವಾಗಿದೆ. ಇದನ್ನು ಟಾಲಿವುಡ್ ನಿರ್ದೇಶಕ ವಂಶಿ ನಿರ್ದೇಶಿಸುತ್ತಿದ್ದಾರೆ. ವಂಶಿ ಥೋಜಾಗೆ ಹೆಸರುವಾಸಿಯಾಗಿದ್ದಾರೆ. ವರಿಸು ಸಿನಿಮಾದಲ್ಲಿ ದಳಪತಿ ವಿಜಯ್​ಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಈ ಚಿತ್ರದ ಮೂಲಕ ರಶ್ಮಿಕಾ ಮತ್ತು ವಿಜಯ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಇಬ್ಬರ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಇದರಲ್ಲಿ ಶಾಮ್, ಶರತ್‌ಕುಮಾರ್, ಯೋಗಿ ಬಾಬು ಮತ್ತು ಪ್ರಭು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಸಂಗೀತವನ್ನು ತಮನ್ ಸಿದ್ಧಪಡಿಸುತ್ತಿದ್ದಾರೆ.

  ಇದನ್ನೂ ಓದಿ: Olavina Nildana: ತಾರಿಣಿಗೆ ಇರೋ ಸಮಸ್ಯೆಯ ಹೆಸರೇ ಸಿದ್ಧಾಂತ್, ಮೊಮ್ಮಗಳ ಅಳು ಕಂಡು ತಾತಾ ಕಂಗಾಲು!

  ‘ವರಿಸು’ ಚಿತ್ರದಲ್ಲಿ ದಳಪತಿ ಪಾತ್ರದ ಬಗ್ಗೆ ಮಾತನಾಡುವುದಾದರೆ, ಅವರು ಅದರಲ್ಲಿ ಆ್ಯಪ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮುಂಬರುವ ಯೋಜನೆಯ ಬಗ್ಗೆ ನಿರ್ಮಾಪಕರು ಮೌನ ವಹಿಸಿದ್ದಾರೆ. ಹೀಗಿರುವಾಗ 2023ರಲ್ಲಿ ಪೊಂಗಲ್ ಹಬ್ಬದಂದು ವರಿಸು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

  'ವರಿಸು' ಚಿತ್ರ ಹಲವು ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಇದು ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಂತಹ ಸ್ಥಳಗಳನ್ನು ಒಳಗೊಂಡಿದೆ.

  ಇದನ್ನೂ ಓದಿ: Bigg Boss OTT: ಮಧ್ಯರಾತ್ರಿ ಸೋನುಗೆ ಪೂಸಿ ಹೊಡೆಯಲು ಹೋದ ರಾಕೇಶ್; ಟ್ರೋಲ್ ರಾಣಿ ಸಿಟ್ಟಾಗಿದ್ಯಾಕೆ?

  ಇದರ ಹೊರತಾಗಿ ದಳಪತಿ ವಿಜಯ್ ಅವರ ಈ ಹಿಂದಿನ ಚಿತ್ರಗಳ ಬಗ್ಗೆ ಮಾತನಾಡುವುದಾದರೆ, ದಳಪತಿಈ ವರ್ಷ 'ಬೀಸ್ಟ್​' ಚಿತ್ರದಲ್ಲಿ ನಟಿಸಿದ್ದರು. ಇದನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಅವರ ಎದುರು ಬಾಲಿವುಡ್​ ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು, ಸೆಲ್ವರಾಘವನ್ ಮತ್ತು ಶೈನ್ ಟಾಮ್ ಚಾಚೋ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ, ಬೀಸ್ಟ್​ ಸಿನಿಮಾ ದಳಪತಿ ವಿಜಯ್​ ಅವರ ಇತರ ಸಿನಿಮಾದಷ್ಟು ದೊಡ್ಡ ಮಟ್ಟಿನ ಪ್ರತಿಕ್ರಿಯೆ ದೊರತಿಲ್ಲ.
  Published by:Harshith AS
  First published: