ಏನ್, ನಮ್ಮನ್ ಕಂಡ್ರೆ ಉರ್ಕೋಳೋರು ಒಬ್ರಾ, ಇಬ್ರಾ. ದುಷ್ಮನ್ ಕಹಾ ಹೈ ಅಂದ್ರೇ ಊರ್ ತುಂಬ ಹೈ..!! ಈ ಡೈಲಾಗ್ ಇವಾಗ ಯಾಕೆ ಹೇಳುತ್ತಾ ಇದ್ದೀವಿ ಅಂತ ಕನ್ಫೂಸ್ ಆಯ್ತಾ? ಹೌದು, ಆಗಲೇ ಬೇಕು ವಿಷಯ ಏನಂದರೆ ಒಬ್ಬರು ಬೆಳಿತಾ ಇದ್ದಾರೆ ಅಂದರೆ ಅದನ್ನು ಹಾಳು ಮಾಡಲು ಸಾವಿರಾರು ಜನ ಕಾಯುತ್ತಾ ಇರುತ್ತಾರಂತೆ. ಇದೀಗ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರಿಗೂ ಈ ಮಾತು ಅನ್ವಯಿಸುತ್ತೆ. ಆದರೆ, ಸಾವಿರಾರು ಅಲ್ಲ.. ಕೋಟ್ಯಂತರ ಜನ ಬಂದರು ಯಶ್ ಅವರ ದಾಖಲೆ (Records)ಗಳನ್ನು ಟಚ್ ಮಾಡುವುದಕ್ಕೂ ಆಗಲ್ಲ. ಕೆಜಿಎಫ್ ಸಿನಿಮಾ ಮೂಲಕ ಯಶ್ ಮಾಡಿರುವ ದಾಖಲೆಗಳ ಬಳಿ ಬರಲು ಅದೆಷ್ಟೋ ಸಿನಿಮಾಗಳು ಪ್ರಯತ್ನ ನಡೆಸುತ್ತಲೇ ಇದೆ. ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಬರುವುದಾಗಿ ಅನೌನ್ಸ್ ಮಾಡಿದೆ. ಇದನ್ನು ಸಹಿಸದ ದೊಡ್ಡ ದೊಡ್ಡ ಸ್ಟಾರ್ಗಳು ಯಶ್ ಎದುರು ತಮ್ಮ ಸಿನಿಮಾ ರಿಲೀಸ್ ಮಾಡಿ ಸವಾಲು ಹಾಕುವ ಕೆಲಸ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ಬಿಡುಗಡೆಯಾದಗ ಬಾಲಿವುಡ್ನ ಬಾದ್ಷಾ ಶಾರುಖ್ ಖಾನ್(Shah Rukh Khan) ಅವರ ಜೀರೋ(Zero) ಸಿನಿಮಾ ರಿಲೀಸ್ ಆಗಿತ್ತು. ಆದರೆ, ರಾಕಿ ಭಾಯ್ ಅಬ್ಬರದ ಮುಂದೆ ಜೀರೋ ಮಕಾಡೆ ಮಲಗಿತ್ತು. ಇದೀಗ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕೂಡ ಏಪ್ರಿಲ್ 14 ರಂದೇ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಈ ವಿಚಾರ ಸಖತ್ ಟ್ರೋಲ್ ಆಗಿದ್ದು ನಿಮಗೆ ಗೊತ್ತೆ ಇದೆ. ಹೊಸ ವಿಚಾರ ಏನಂದರೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಕೆಜಿಎಫ್ 2 ಎದುರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಕೆಜಿಎಫ್ 2 ಎದುರು ಬರುತ್ತಂತೆ ವಿಜಯ್ ‘ಬೀಸ್ಟ್’!
‘ಕೆಜಿಎಫ್ 2’ ಎದುರು ದೊಡ್ಡದೊಡ್ಡ ಚಿತ್ರಗಳು ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿವೆ. ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್’ (Beast) ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್ನಲ್ಲಿ ಏಪ್ರಿಲ್ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಘೋಷಣೆ ಮಾಡಿದೆ. ಅದು ‘ಕೆಜಿಎಫ್ 2’ ಎದುರೇ ಆಗಿರಲಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಏನು ಮಾಡಿದರೂ, ಇದೊಂದು ತಪ್ಪು ಮಾಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ : ನಾಳೆ ಸಿಲಿಕಾನ್ ಸಿಟಿಯಲ್ಲಿ `ಆರ್ಆರ್ಆರ್‘ ಪ್ರೀ ರಿಲೀಸ್ ಇವೆಂಟ್: ಅಬ್ಬಬ್ಬಾ.. ಇವ್ರೆಲ್ಲಾ ಹೋಗ್ತಿದ್ದಾರೆ!
ರಾಕಿಭಾಯ್ ಎದುರು ತೊಡೆ ತಟ್ಬೇಡಿ ಎಂದ ಫ್ಯಾನ್ಸ್!
‘ಕೆಜಿಎಫ್ 2’ ತಮಿಳಿಗೂ ಡಬ್ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್ನಿಂದ ‘ಬೀಸ್ಟ್’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಕನ್ನಡ ಸಿನಿಮಾಗಳಿಗೆ ತೊಂದರೆ ಮಾಡುವ ಆಲೋಚನೆ ಇಲ್ಲದಿದ್ದರೂ, ಪೈಪೋಟಿ ನೀಡುವ ಕೆಲಸವನ್ನು ಎಲ್ಲ ಭಾಷೆಯ ಚಿತ್ರರಂಗದವರು ಮಾಡುತ್ತಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.ಈ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಸಂಜಯ್ ದತ್ ಸಿನಿಮಾದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಬಹುನಿರೀಕ್ಷಿತ ಪಟ್ಟಿಯಲ್ಲಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ. ಕೆಜಿಎಫ್ ಚಿತ್ರತಂಡ ಸದ್ಯ ಬಾಕಿ ಇರುವ ಚಿತ್ರದ ಕೆಲಸಗಳನ್ನು ಮಾಡಿ ಮುಗಿಸುತ್ತಿದೆ. ರಿಲೀಸ್ ಹತ್ತಿರ ಆಗುತ್ತಿದ್ದಂತೆ. ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ