KGF 2 v/s Beast: ಬ್ಯಾಡ ಬ್ಯಾಡ ಅಂದ್ರೂ ಮಾತು ಕೇಳದ ವಿಜಯ್​.. ರಾಕಿಭಾಯ್​ಗೆ ಸವಾಲ್​ ಹಾಕಿಯೇ ಬಿಟ್ಟ `ಬೀಸ್ಟ್’​!

ರಾಕಿ ಭಾಯ (Raki Bhai)​ ಎದುರು ಸವಾಲೆಸೆದಿದ್ದ ಬಾಲಿವುಡ್ (Bollywood)​ ಸೂಪರ್​ ಸ್ಟಾರ್​ ಆಮಿರ್​ ಖಾನ್ (Aamir Khan)​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಆದರೆ, ಯಾಕೋ ತಮಿಳು ಇಳಯದಳಪತಿ ಮಾತ್ರ ರಾಕಿ ಭಾಯ್​ ಎದುರು ಬಂದೇ ಬರುತ್ತೀನಿ ಅನ್ನುವಂತಿದೆ. ಸ್ವತಃ ವಿಜಯ್​(Vijay) ಫ್ಯಾನ್ಸ್​ ಅವರೇ ಬೇಡ ಬೇಡ ಅಂದರೂ ವಿಜಯ್​ ಹಾಗೂ ಅವರ ಬೀಸ್ಟ್ (Beast)​ ಸಿನಿಮಾ ತಂಡ ಮಾತು ಕೇಳಿಲ್ಲ.

ವಿಜಯ್​, ಯಶ್​

ವಿಜಯ್​, ಯಶ್​

  • Share this:
    ಏನ್‌, ನಮ್ಮನ್‌ ಕಂಡ್ರೆ ಉರ್ಕೋಳೋರು ಒಬ್ರಾ, ಇಬ್ರಾ. ದುಷ್ಮನ್ ಕಹಾ ಹೈ ಅಂದ್ರೇ ಊರ್ ತುಂಬ ಹೈ..!! ಈ ಡೈಲಾಗ್ (Dialogue)​ ಇವಾಗ ಯಾಕೆ ಹೇಳುತ್ತಾ ಇದ್ದೀವಿ ಅಂತ ಕನ್ಫೂಸ್​ ಆಯ್ತಾ? ಹೌದು, ಆಗಲೇ ಬೇಕು ವಿಷಯ ಏನಂದರೆ ಒಬ್ಬರು ಬೆಳಿತಾ ಇದ್ದಾರೆ ಅಂದರೆ ಅದನ್ನು ಹಾಳು ಮಾಡಲು ಸಾವಿರಾರು ಜನ ಕಾಯುತ್ತಾ ಇರುತ್ತಾರಂತೆ. ಅದು ರಾಕಿಂಗ್​ ಸ್ಟಾರ್​ ಯಶ್​(Rocking Star Yash)ಗೆ ಎದುರು ತೊಡೆ ತಟ್ಟುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ರಾಕಿ ಭಾಯ (Raki Bhai)​ ಎದುರು ಸವಾಲೆಸೆದಿದ್ದ ಬಾಲಿವುಡ್ (Bollywood)​ ಸೂಪರ್​ ಸ್ಟಾರ್​ ಆಮಿರ್​ ಖಾನ್ (Aamir Khan)​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಆದರೆ, ಯಾಕೋ ತಮಿಳು ಇಳಯದಳಪತಿ ಮಾತ್ರ ರಾಕಿ ಭಾಯ್​ ಎದುರು ಬಂದೇ ಬರುತ್ತೀನಿ ಅನ್ನುವಂತಿದೆ. ಸ್ವತಃ ವಿಜಯ್ ​(Vijay) ಫ್ಯಾನ್ಸ್​ ಅವರೇ ಬೇಡ ಬೇಡ ಅಂದರೂ ವಿಜಯ್​ ಹಾಗೂ ಅವರ ಬೀಸ್ಟ್ (Beast)​ ಸಿನಿಮಾ ತಂಡ ಮಾತು ಕೇಳಿಲ್ಲ.

    ಏಪ್ರಿಲ್​ 13ಕ್ಕೆ ತಮಿಳು ಬೀಸ್ಟ್​ ಸಿನಿಮಾ ರಿಲೀಸ್​!

    ಸಾವಿರಾರು ಅಲ್ಲ.. ಕೋಟ್ಯಂತರ ಜನ ಬಂದರು ಯಶ್​ ಅವರ ದಾಖಲೆ (Records)ಗಳನ್ನು ಟಚ್​ ಮಾಡುವುದಕ್ಕೂ ಆಗಲ್ಲ. ಕೆಜಿಎಫ್​ ಸಿನಿಮಾ ಮೂಲಕ ಯಶ್​ ಮಾಡಿರುವ ದಾಖಲೆಗಳ ಬಳಿ ಬರಲು ಅದೆಷ್ಟೋ ಸಿನಿಮಾಗಳು ಪ್ರಯತ್ನ ನಡೆಸುತ್ತಲೇ ಇದೆ. ಕೆಜಿಎಫ್​ ಚಾಪ್ಟರ್​ 2 (KGF Chapter 2) ಸಿನಿಮಾ ಏಪ್ರಿಲ್​ 14ಕ್ಕೆ ಇಡಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿರುವುದು ಗೊತ್ತೆ ಇದೆ. ಇದೀಗ ತಮಿಳು ನಟ ವಿಜಯ್​ ಅಭಿನಯದ ‘ಬೀಸ್ಟ್​’ ಸಿನಿಮಾ ಕೂಡ ಏಪ್ರಿಲ್​ 13ಕ್ಕೆ ತೆರೆ  ಬರುವುದಾಗಿ ಚಿತ್ರತಂಡ ಅನೌನ್ಸ್​ ಮಾಡಿದೆ. ವಿಜಯ್ ಸಿನಿಮಾ ‘ಕೆಜಿಎಫ್ 2’ ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ.

    ಯಶ್​ ಮುಂದೆ ಮಕಾಡೆ ಮಲಗಿದ್ದ ಕಿಂಗ್​ ಶಾರುಖ್​ ಖಾನ್​!

    ಕೆಜಿಎಫ್ ಚಾಪ್ಟರ್​​ 1​ ಸಿನಿಮಾ ಬಿಡುಗಡೆಯಾದಗ ಬಾಲಿವುಡ್​ನ ಬಾದ್​ಷಾ ಶಾರುಖ್​ ಖಾನ್​ (Shah Rukh Khan) ಅವರ ಜೀರೋ (Zero) ಸಿನಿಮಾ ರಿಲೀಸ್​ ಆಗಿತ್ತು. ಆದರೆ, ರಾಕಿ ಭಾಯ್​ ಅಬ್ಬರದ ಮುಂದೆ ಜೀರೋ ಮಕಾಡೆ ಮಲಗಿತ್ತು. ಇದೀಗ ತಮಿಳು ನಟ ವಿಜಯ್​​ ಅಭಿನಯದ ಬೀಸ್ಟ್​​ ಸಿನಿಮಾ ಕೂಡ ಏಪ್ರಿಲ್​ 13 ರಂದೇ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇಷ್ಟು ದಿನ ಗಾಸಿಪ್ ರೂಪದಲ್ಲಿ ಇದ್ದ ಈ ಸುದ್ದಿ ಈಗ ಅಧಿಕೃತ ಆಗಿ ಬಿಟ್ಟಿದೆ. ಸಿನಿಮಾ ನಿರ್ಮಾಣ ಸಂಸ್ಥೆಯೆ ಈ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿದೆ.

    ಇದನ್ನೂ ಓದಿ: ಇಂದೇ ಅಪ್ಪಳಿಸಿದ 'ತೂಫಾನ್', ಧೂಳೆಬ್ಬಿಸುತ್ತಿದೆ 'ಕೆಜಿಎಫ್‌ 2' ಫಸ್ಟ್ Lyrical Song

    ರಾಕಿಭಾಯ್​ ಎದುರು ತೊಡೆ ತಟ್ಬೇಡಿ ಎಂದ ಫ್ಯಾನ್ಸ್​!

    ‘ಕೆಜಿಎಫ್​ 2’ ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್​ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್​ನಿಂದ ‘ಬೀಸ್ಟ್​’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಪ್ಲೀಸ್​ ರಾಕಿ ಬಾಯ್​ ಎದುರು ತೊಡೆ ತಟ್ಬೇಡಿ ಎಂದು ನೆಟ್ಟಿಗರು ಬೀಸ್ಟ್​ ಚಿತ್ರತಂಡದವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.


    ಇದನ್ನೂ ಓದಿ: ಅಪ್ಪು-ಅಣ್ಣಾವ್ರ ಕೊನೆ ಸಿನಿಮಾದಲ್ಲಿ ಒಂದೇ ಸಂದೇಶ! ಪುನೀತ್​ ನಿಜಕ್ಕೂ ತಂದೆ ತಕ್ಕ ಮಗ..

    ಕಲೆಕ್ಷನ್​ ಮೇಲೆ ಹೊಡೆತ ಬೀಳೋದು ಖಚಿತ!

    ‘ಕೆಜಿಎಫ್ 2’ ಚಿತ್ರಕ್ಕೂ ಒಂದು ದಿನ ಮೊದಲು, ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿದೆ. ಹಾಗಾಗಿ ಈ ಎರಡು ಚಿತ್ರಗಳ ರಿಲೀಸ್ ನಡುವೆ ಅಷ್ಟೇನು ಅಂತರ ಇಲ್ಲ. ಆದರೂ ಕೂಡ ಹೀಗೆ ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.
    Published by:Vasudeva M
    First published: