Beast: ಕನ್ನಡ ಸಿನಿಮಾ ಕಥೆ ಕದ್ದು `ಬೀಸ್ಟ್​’ ಅಂದ್ರಾ? ವಿಷ್ಣು ದಾದಾ ಪಾತ್ರವೇ ವಿಜಯ್​ ಚಿತ್ರಕ್ಕೆ ಸ್ಫೂರ್ತಿ!

ಕೆಲಕಡೆ ಈಗಾಗಲೇ ಟಿಕೆಟ್​ ಸೋಲ್ಡ್​ ಔಟ್ ​(Sold Out) ಆಗಿದೆ. ಈ ಹೊತ್ತಲ್ಲೇ ಮತ್ತೆ ಬೀಸ್ಟ್ ಸಿನಿಮಾ ಮತ್ತೊಂದು ವಿಚಾರಕ್ಕೆ ಸಖತ್​ವೈರಲ್​ ಆಗುತ್ತಿದೆ. ಈ ವಿಚಾರ ತಿಳಿದ ಕನ್ನಡಿಗರು ಇದು ನಿಜನಾ? ಎಂದು ಸೋಷಿಯಲ್​ ಮೀಡಿಯಾ(Social Media)ದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ವಿಷ್ಣು ದಾದಾ, ವಿಜಯ್​

ವಿಷ್ಣು ದಾದಾ, ವಿಜಯ್​

  • Share this:
ಬೀಸ್ಟ್ ​(Beast).. ತಮಿಳಿಗರ ಸೂಪರ್​ ಸ್ಟಾರ್ (Super Star)​ ದಳಪತಿ ವಿಜಯ್ ​(Thalapathy Vijay) ಅಭಿನಯದ ಮೋಸ್ಟ್​ ಎಕ್ಸ್​​ಪೆಕ್ಟೆಡ್ (Most Expected) ಸಿನಿಮಾ. ವಿಜಯ್​ ಸಿನಿಮಾ ರಿಲೀಸ್​ ಅಂದರೆ, ಅಲ್ಲಿ ಹಬ್ಬದ ವಾತಾವರಣ ಇದ್ದೆ ಇರುತ್ತೆ. ಆದರೆ, ಈ ಬಾರಿ ಈ ‘ಬೀಸ್ಟ್​’ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣ  ವಿಜಯ್​ ಅಲ್ಲ.. ನಮ್ಮ ರಾಕಿ ಭಾಯ್​. ಹೌದು, ರಾಕಿ ಭಾಯ್​ ಎದುರು ತೊಡೆ ತಟ್ಟಿ ಬೀಸ್ಟ್​ ಸಿನಿಮಾ ಅಖಾಡಕ್ಕೆ ಇಳಿದಿದೆ. ಏಪ್ರಿಲ್​ 13ರಂದು ಬೀಸ್ಟ್​ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಆನ್​ಲೈನ್(Online)ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ (Ticket Booking)​ ಓಪನ್ ಆಗಿದೆ. ಕೆಲಕಡೆ ಈಗಾಗಲೇ ಟಿಕೆಟ್​ ಸೋಲ್ಡ್​ ಔಟ್​ (Sold Out) ಆಗಿದೆ. ಈ ಹೊತ್ತಲ್ಲೇ ಮತ್ತೆ ಬೀಸ್ಟ್ ಸಿನಿಮಾ ಮತ್ತೊಂದು ವಿಚಾರಕ್ಕೆ ಸಖತ್​ವೈರಲ್​ ಆಗುತ್ತಿದೆ. ಈ ವಿಚಾರ ತಿಳಿದ ಕನ್ನಡಿಗರು ಇದು ನಿಜನಾ? ಎಂದು ಸೋಷಿಯಲ್​ ಮೀಡಿಯಾ(Social Media)ದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಒಂದೇ ಮಾಲ್​ ಸುತ್ತ ಸುತ್ತುತ್ತಾ ಬೀಸ್ಟ್​?

ದೇಶದಾದ್ಯಂತ ‘ಕೆಜಿಎಫ್ 2' ಹವಾ ಜೋರಾಗಿ ಎದ್ದಿದೆ. ಆದರೆ ಈ ಸಿನಿಮಾಕ್ಕೆ ತಮಿಳಿನ 'ಬೀಸ್ಟ್' ಸಿನಿಮಾ ಎದುರಾಳಿಯಾಗಿ ನಿಂತಿದೆ. 'ಕೆಜಿಎಫ್2' ಸಿನಿಮಾ ಏಪ್ರಿಲ್ 14 ಕ್ಕೆ ತೆರೆಗೆ ಬರುತ್ತಿದ್ದರೆ, ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 13 ಕ್ಕೆ ತೆರೆಗೆ ಬರುತ್ತಿದೆ. ಹೀಗಾಘಿ ‘ಬೀಸ್ಟ್​​’ ಸಿನಿಮಾದ ಬಗ್ಗೆ ಟಾಕ್ಸ್​ ಕೂಡ ಹೆಚ್ಚಾಗಿದೆ. ಆದರೆ, ‘ಬೀಸ್ಟ್​​’ ಸಿನಿಮಾದ ಟ್ರೈಲರ್​ ಯಾಕೋ ಎಲ್ಲರಿಗೂ ಇಷ್ಟವಾಗಿಲ್ಲ.ಟ್ರೈಲರ್​ನಲ್ಲೇ ಸಿನಿಮಾದ ಕಥೆ ತಿಳಿಯುತ್ತೆ.  ಭಯೊತ್ಪಾದಕರು ತಮ್ಮ ಮಾಲ್‌ನಲ್ಲಿರುವವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅದೇ ಮಾಲ್‌ನಲ್ಲಿ ಇರುವ ಮಾಜಿ ಸೈನಿಕ ವಿಜಯ್ ಭಯೋತ್ಪಾದಕರ ವಿರುದ್ಧ ಹೋರಾಡಿ ಹೇಗೆ ಅವರನ್ನೆಲ್ಲ ಬಿಡಿಸುತ್ತಾನೆ ಎಂಬುದು ಸಿನಿಮಾದ ಕತೆ.

ನಿಷ್ಕರ್ಷ ಕಥೆ ಕದ್ರಾ ನಿರ್ದೇಶಕ ನೆಲ್ಸನ್​?

ಇದೇ ಮಾದರಿಯ ಕಥೆ ಹೊಂದಿರುವ ಸಾಕಷ್ಟು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಎಲ್ಲರೂ ಇದು ಹಾಲಿವುಡ್​ನಿಂದ ಕದ್ದ ಕಥೆ ಎಂದು ಹೇಳುತ್ತಿದ್ದಾರೆ. ಆದರೆ, ಇದು ಕನ್ನಡದ ಸಿನಿಮಾದಿಂದಲೇ ಕದ್ದ ಕತೆ ಎನ್ನಲಾಗುತ್ತಿದೆ. ವಿಷ್ಣುದಾದಾ ಅಭಿನಯದ 1993 ರಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ ‘ನಿಷ್ಕರ್ಷ’ ಸಿನಿಮಾದ ಕಥೆಯನ್ನು ಕದ್ದು ‘ಬೀಸ್ಟ್’ ಸಿನಿಮಾ ಮಾಡಲಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

ಇದನ್ನೂ ಓದಿ: Rocking Star ಮಹಿಳಾ ಅಭಿಮಾನಿಗಳಿಗಾಗಿ KGF Chapter 2 'ಲೇಡಿಸ್ ಸ್ಪೆಷಲ್ ಶೋ'! ಎಲ್ಲಿ, ಯಾವಾಗ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ

ಎರಡೂ ಸಿನಿಮಾದಲ್ಲಿ ಒಂದೇ ಕಥೆ!

ತಮಿಳಿನ ‘ಬೀಸ್ಟ್’ ಸಿನಿಮಾದಲ್ಲಿ ಸಹ  ಕನ್ನಡದ ನಿಷ್ಕರ್ಷ ಸಿನಿಮಾ ಮಾದರಿಯ ಕಥೆ ಇದೆ. ಮಾಲ್ ಒಂದಕ್ಕೆ ನುಗ್ಗುವ ಭಯೋತ್ಪಾದಕರು ಅಲ್ಲಿನ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುತ್ತಾರೆ. ಮಾಲ್​​ನಲ್ಲೇ ಇರುವ ವಿಜಯ್ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾನೆ. ‘ನಿಷ್ಕರ್ಷ’ ಸಿನಿಮಾದಂತೆ ಇಲ್ಲಿಯೂ ಸಹ ವಿಜಯ್ ಸೈನಿಕ ಆಗಿರುತ್ತಾರೆ. ‘ನಿಷ್ಕರ್ಷ’ ಸಿನಿಮಾದಲ್ಲಿ ಅನಂತ್‌ನಾಗ್ ಪಾತ್ರ ವಿಷ್ಣುವರ್ಧನ್ ಪಾತ್ರದ ಪರಿಚಯ ಮಾಡುವಂತೆ, ಇಲ್ಲಿಯೂ ಬೇರೊಂದು ಪಾತ್ರ ವಿಜಯ್‌ ಪರಿಚಯ ಮಾಡುತ್ತದೆ. ಹೀಗಾಗಿ ಇದು ಕನ್ನಡದ ನಿಷ್ಕರ್ಷ ಸಿನಿಮಾದ ಕಥೆನೇ ಅಂತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: ಅಮೆರಿಕಾದಲ್ಲಿ ಸ್ನೇಹಾ ಹಿಂದೆ ಸುತ್ತಿದ್ದ ಅಲ್ಲು, ಪುಷ್ಪಾ ನಟನ ರಿಯಲ್ ಲವ್​ ಸ್ಟೋರಿ

ಕುವೈತ್​ನಲ್ಲಿ ವಿಜಯ್​ ಸಿನಿಮಾಗೆ ನಿಷೇಧ!
 ‘ಬೀಸ್ಟ್’ ಸಿನಿಮಾಕ್ಕೆ ದೊಡ್ಡ ಆರಂಭಿಕ ಹಿನ್ನಡೆಯೊಂದು ಎದುರಾಗಿದೆ. ‘ಬೀಸ್ಟ್’ ಸಿನಿಮಾದ ಪ್ರದರ್ಶನವನ್ನು ವಿದೇಶದಲ್ಲಿ ತಡೆಹಿಡಿಯಲಾಗಿದೆ. ಅರಬ್​ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇದೆ.ಅರಬ್ ದೇಶಗಳ ಕುವೈತ್‌ ರಾಷ್ಟ್ರದಲ್ಲಿ 'ಬೀಸ್ಟ್' ಸಿನಿಮಾ ಸೆನ್ಸಾರ್ ಪಾಸ್ ಮಾಡಲು ವಿಫಲವಾಗಿದ್ದು, ಅಲ್ಲಿ ಸಿನಿಮಾದ ಪ್ರದರ್ಶನವನ್ನು ತಡೆ ಹಿಡಿಯಲಾಗಿದೆ.
Published by:Vasudeva M
First published: