• Home
  • »
  • News
  • »
  • entertainment
  • »
  • Thalapathy Vijay: ಆ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿ ಬಿಟ್ರು ದಳಪತಿ ವಿಜಯ್; ಭಾರಿ ಟೀಕೆಗೆ ಒಳಗಾಯ್ತು ಈ ಸೀನ್

Thalapathy Vijay: ಆ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿ ಬಿಟ್ರು ದಳಪತಿ ವಿಜಯ್; ಭಾರಿ ಟೀಕೆಗೆ ಒಳಗಾಯ್ತು ಈ ಸೀನ್

ದಳಪತಿ ವಿಜಯ್

ದಳಪತಿ ವಿಜಯ್

ದಳಪತಿ ವಿಜಯ್ ಸಿನಿಮಾದ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿದ್ದಾರೆ. ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂದರೆ ಅಲ್ಲಿ ಸಾಹಸ, ಡೂಪ್, ಕೆಲ ಗ್ರಾಫಿಕ್ಸ್ ಗಳು ಇರುವುದು ಸಹಜ. ಇನ್ನೂ ಕೆಲವು ದೃಶ್ಯಗಳು ಯಾರು ಊಹಿಸಲಾಗದಷ್ಟು ವಿಚಿತ್ರವಾಗಿರುತ್ತವೆ.

  • Share this:

ಕೆಜಿಎಫ್ (KGF) ಬಿಡುಗಡೆಗೂ ಒಂದು ದಿನ ಮುನ್ನ ಅಂದರೆ ಏಪ್ರಿಲ್ 13ಕ್ಕೆ ಬಿಡುಗಡೆಯಾಗಿದ್ದ ದಳಪತಿ ವಿಜಯ್ (Thalapathy Vijay) ಮತ್ತು ಪೂಜಾ ಹೆಗ್ಡೆ (Pooja Hegde) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಮಿಳು (Tamil) ಸಾಹಸ ಚಿತ್ರ ಬೀಸ್ಟ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕೆಜಿಎಫ್ ಅಬ್ಬರ ಮತ್ತಿನ್ನಿತರ ಕಾರಣಗಳಿಂದಾಗಿ ಸಿನಿಮಾ (Cinema), ವಿಮರ್ಶಕರ ಮತ್ತು ಸಿನಿಪ್ರಿಯರ ಮನಗೆಲ್ಲಲಿಲ್ಲ. ಚಿತ್ರಮಂದಿರಗಳಲ್ಲಿ ಮಕಾಡೆ ಮಲಗಿದ 'ಬೀಸ್ಟ್' ಚಿತ್ರ ಇತ್ತೀಚೆಗೆ ನೆಟ್‌ಫ್ಲಿಕ್ಸ್ ನಲ್ಲಿ ಐದು ಭಾಷೆಗಳಲ್ಲಿ ರಿಲೀಸ್ (Release) ಆಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬೀಸ್ಟ್ ಸಿನಿಮಾ ಸ್ಟ್ರೀಮ್ ಆಗಿದೆ. ಆದರೆ ಅಲ್ಲೂ ಕೂಡ ಚಿತ್ರಕ್ಕೆ ಯಾವುದೇ ರೀತಿಯ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ.


ಒಂದು ದೃಶ್ಯದಿಂದಾಗಿ ಟ್ರೋಲ್ ಆದ ದಳಪತಿ ವಿಜಯ್
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ದಳಪತಿ ವಿಜಯ್ ಸಿನಿಮಾದ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿದ್ದಾರೆ. ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂದರೆ ಅಲ್ಲಿ ಸಾಹಸ, ಡೂಪ್, ಕೆಲ ಗ್ರಾಫಿಕ್ಸ್ ಗಳು ಇರುವುದು ಸಹಜ. ಇನ್ನೂ ಕೆಲವು ದೃಶ್ಯಗಳು ಯಾರು ಊಹಿಸಲಾಗದಷ್ಟು ವಿಚಿತ್ರವಾಗಿರುತ್ತವೆ. ಸಿನಿಮಾ ಬರೀ ಮನರಂಜನೆಗಾಗಿ ಮಾತ್ರ ಎಂದುಕೊಂಡರು ಸಹ ಅದರ ದೃಶ್ಯಗಳು ಇದು ಸಾಧ್ಯನಾ? ಹೀಗೆಲ್ಲಾ ನಡೆಯುತ್ತಾ ಎಂಬ ಚರ್ಚೆಗಳನ್ನು ಹುಟ್ಟುಹಾಕುತ್ತವೆ. ಸದ್ಯ ಬೀಸ್ಟ್ ಸಿನಿಮಾದ ಇಂಥದ್ದೇ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.


ಟ್ರೊಲ್ ಆದ ಆ ದೃಶ್ಯ ಯಾವುದು?
ಭಾರತೀಯ ವಾಯುಸೇನೆಯಿಂದ ನಿವೃತ್ತರಾಗಿರುವ ಗ್ರೂಪ್ ಕ್ಯಾಪ್ಟನ್ ಶಿವರಾಮನ್ ಸಜನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ RAW ಏಜೆಂಟ್ ವೀರ ರಾಘವನ್ ಆಗಿ ನಟಿಸಿರುವ ವಿಜಯ್ ಒಳಗೊಂಡಿರುವ ಚಿತ್ರದ ಒಂದು ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.


ನಿವೃತ್ತರಾಗಿರುವ ಗ್ರೂಪ್ ಕ್ಯಾಪ್ಟನ್ ಶಿವರಾಮನ್ ಹಂಚಿಕೊಂಡ ವಿಡಿಯೋದಲ್ಲಿ ವಿಜಯ್ ಶತ್ರುಗಳ ಕ್ಷಿಪಣಿಗಳಿಂದ ಸ್ಫೋಟಗೊಂಡ ತನ್ನ ಯುದ್ಧ ವಿಮಾನವನ್ನು ಹಾರಿಸುತ್ತಿದ್ದಾರೆ ಮತ್ತು ಕ್ಷಿಪಣಿಗಳು ಒಂದಕ್ಕೊಂದು ಅಪ್ಪಳಿಸಿದಾಗ ಚಿತ್ರದ ನಾಯಕ ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳುವುದರ ಜೊತೆಗೆ, ಅವರು "ನನಗೆ ಹಲವು ಪ್ರಶ್ನೆಗಳಿವೆ" ಎಂದು ದೃಶ್ಯದ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.


ಟ್ವಿಟ್ಟರ್ ನಲ್ಲಿ ಭಾರಿ ಟೀಕೆ
ಐಎಎಫ್ ಪೈಲಟ್ ಚಿತ್ರದ ದೃಶ್ಯದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ ನಂತರ ವಿಜಯ್ ಫೈಟರ್ ಜೆಟ್ ಅನ್ನು ಹಾರಿಸುತ್ತಿರುವ ದೃಶ್ಯವು ಟ್ವಿಟ್ಟರ್ ನಲ್ಲಿ ಭಾರಿ ಟೀಕೆಗೆ ಒಳಗಾಗಿದೆ. ನೆಟ್ಟಿಗರು ಚಿತ್ರದ ಮೇಕಿಂಗ್ ಅನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಮತ್ತೋರ್ವ ಯುದ್ಧ ಯೋಧ ಮೇಜರ್ ಅಮಿತ್ ಬನ್ಸಾಲ್ ಅವರು ಸಜನ್ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದು, "ಇದೇನು???????? ನನ್ನ ಮೆದುಳು ನಿಶ್ಚಲವಾಗಿದೆ... ಮುಂದೆ ಯೋಚಿಸಲು ಕೂಡ ಸಾಧ್ಯವಾಗುತ್ತಿಲ್ಲ... ತರ್ಕವೆಲ್ಲ ಚರಂಡಿಯಲ್ಲಿ ಹೋಗಿದೆ..." ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Rocking Star Yash: ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಶೇಕ್, ಧಾಕಡ್ ನಂತರ ಮತ್ತೊಂದು ಸಿನೆಮಾ ಫ್ಲಾಪ್


ಹಲವು ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ, "ಬಿಗಿಲ್ ನಂತರ, ಬೀಸ್ಟ್ ತನ್ನ ಹೆಸರು ಮತ್ತು ಖ್ಯಾತಿಯನ್ನು ಹಾಳು ಮಾಡಿಕೊಂಡಿದೆ. ಕಥೆಯಲ್ಲಿನ ತಾರ್ಕಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಸಮಯ ಇದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ದೃಶ್ಯವನ್ನು ಹಂಚಿಕೊಂಡು "ನನ್ನ ಕಣ್ಣುಗಳನ್ನು ಆಸಿಡ್ನಿಂದ ತೊಳೆಯಬೇಕು" ಎಂದು ಬರೆದಿದ್ದಾರೆ .


ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಂಡ ಸಿನೆಮಾ
ಟ್ರೇಲರ್ನಲ್ಲಿ ತೋರಿಸಿರುವಂತೆ, ಚೆನ್ನೈನ ಪ್ರತಿಷ್ಠಿತ ಮಾಲ್ವೊಂದಕ್ಕೆ ಉಗ್ರಗಾಮಿಗಳು ಅಟ್ಯಾಕ್ ಮಾಡುತ್ತಾರೆ. ಅಲ್ಲಿರುವ ನಾಗರೀಕರನ್ನು ಒತ್ತೆಯಾಳುಗಳಾನ್ನಾಗಿರಿಸಿಕೊಂಡು ಭಾರತದ ವಶದಲ್ಲಿರುವ ತಮ್ಮ ಉಗ್ರ ಸಂಘಟನೆಯ ನಾಯಕನನ್ನು ರಿಲೀಸ್ ಮಾಡುವಂತೆ ಬೇಡಿಕೆ ಇಡುತ್ತಾರೆ. ಅದೇ ಮಾಲಿನಲ್ಲಿ ಮಾಜಿ ರಾ ಏಜೆಂಟ್ ವೀರ ರಾಘವನ್ (ವಿಜಯ್) ಕೂಡ ಸಿಲುಕಿಕೊಂಡಿರುತ್ತಾನೆ. ಅಲ್ಲಿಂದ ಮುಂದೆ ಏನೆಲ್ಲ ಆಗುತ್ತದೆ ಅನ್ನೋದೇ ಸಿನಿಮಾದ ಕಥೆ.


ಇದನ್ನೂ ಓದಿ: KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!


ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಜೊತೆಗೆ ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೊ, ಲಿಲ್ಲಿಪುಟ್ ಫರುಕಿ ಮತ್ತು ಅಂಕುರ್ ಅಜಿತ್ ವಿಕಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಕಲಾನಿಧಿ ಮಾರನ್ ಅವರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ.

Published by:Ashwini Prabhu
First published: