Thalapathy 64: ಶಿವಮೊಗ್ಗ ಜೈಲಿನಲ್ಲಿ ಮುಖಾಮುಖಿಯಾಗ್ತಾರೆ ದಳಪತಿ- ಸೇತುಪತಿ!

Thalapathy 64 Tamil Movie: ಒಂದೂವರೆ ತಿಂಗಳ ಕಾಲ ಶಿವಮೊಗ್ಗದ ಜೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಳಪತಿ 64 ಸಿನಿಮಾ ಶೂಟಿಂಗ್ ನಡೆಯಲಿದೆ. ಕೊರಿಯನ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಶಿವಮೊಗ್ಗದ ಜೈಲು ನೋಡಲು ಬೇರೆ ಜೈಲುಗಳಿಗಿಂತ ವಿಭಿನ್ನವಾಗಿದೆ. ಹೀಗಾಗಿ, ಇಲ್ಲಿ ಈಗಾಗಲೇ ಕೆಲವು ಕನ್ನಡ ಸಿನಿಮಾಗಳನ್ನೂ ಚಿತ್ರೀಕರಿಸಲಾಗಿದೆ.

Sushma Chakre | news18-kannada
Updated:November 29, 2019, 3:02 PM IST
Thalapathy 64: ಶಿವಮೊಗ್ಗ ಜೈಲಿನಲ್ಲಿ ಮುಖಾಮುಖಿಯಾಗ್ತಾರೆ  ದಳಪತಿ- ಸೇತುಪತಿ!
ದಳಪತಿ ವಿಜಯ್- ವಿಜಯ್ ಸೇತುಪತಿ
  • Share this:
ಸಾಮಾನ್ಯವಾಗಿ ದೊಡ್ಡ ಬಜೆಟ್​ನ ಸಿನಿಮಾದಲ್ಲಿ ವಿದೇಶದಲ್ಲಿ ಶೂಟಿಂಗ್ ಮಾಡಿದರೇ ಅದಕ್ಕೊಂದು ವ್ಯಾಲ್ಯೂ ಎಂಬುದು ಹೆಚ್ಚಿನ ನಿರ್ಮಾಪಕರು, ನಟರು, ನಿರ್ದೇಶಕರ ನಂಬಿಕೆ. ಆದರೆ, ತಮಿಳುನಾಡಿನ ಸ್ಟಾರ್​ ನಟರಾದ ವಿಜಯ್ ಸೇತುಪತಿ ಮತ್ತು ವಿಜಯ್ ದಳಪತಿ ಕರ್ನಾಟಕದಲ್ಲಿ ಶೂಟಿಂಗ್ ಮಾಡಲು ಬರಲಿದ್ದಾರೆ. ಅದರಲ್ಲೇನು ವಿಶೇಷ? ಕರ್ನಾಟಕದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೇನು ಕಡಿಮೆಯೇ? ಎಂದು ನೀವು ಭಾವಿಸಬಹುದು. ಆದರೆ, ತಮಿಳಿನ ಈ ಸ್ಟಾರ್​ ನಟರ ಸಿನಿಮಾ ಚಿತ್ರೀಕರಣವಾಗುತ್ತಿರುವುದು ಶಿವಮೊಗ್ಗದ ಜೈಲಿನಲ್ಲಿ ಎಂಬುದು ವಿಶೇಷ.

ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ವಿಜಯ್ ಸೇತುಪತಿ ಇದೀಗ ಇಳಯ ದಳಪತಿ ವಿಜಯ್ ಜೊತೆಗೆ 'ದಳಪತಿ 64' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ದೆಹಲಿಯಲ್ಲಿ 1 ತಿಂಗಳ ಕಾಲ ಶೂಟಿಂಗ್ ಮುಗಿದಿದ್ದು, ಮುಂದಿನ ವಾರ 2ನೇ ಹಂತದ ಶೂಟಿಂಗ್​ಗಾಗಿ ಶಿವಮೊಗ್ಗದಲ್ಲಿರುವ ಜೈಲಿಗೆ ಬರಲಿದ್ದಾರೆ!

ಮಲೆಯಾಳಂ ನಟರಾದ ಆ್ಯಂಟನಿ ವರ್ಗೀಸ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ವರ್ಗೀಸ್ ಕೂಡ ಶಿವಮೊಗ್ಗದಲ್ಲಿ ನಡೆಯುವ ಫೈಟಿಂಗ್​ ಸೀನ್​ನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ 1ರಿಂದಲೇ ಶಿವಮೊಗ್ಗದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲಾಗಿದೆ.

ಒಬ್ಬನ ಮೇಲೆ ಇಬ್ಬರಿಗೆ ಒಲವು; ಅಷ್ಟಕ್ಕೂ ಬಿಗ್​ಬಾಸ್​ ಮನೆಯಲ್ಲಿ ಭೂಮಿ ಶೆಟ್ಟಿ- ಚೈತ್ರಾ ಕೋಟೂರು ಕಿತ್ತಾಡಿಕೊಂಡಿದ್ದು ಯಾರಿಗಾಗಿ?

ಒಂದೂವರೆ ತಿಂಗಳ ಕಾಲ ಶಿವಮೊಗ್ಗದ ಜೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ದಳಪತಿ 64' ಸಿನಿಮಾ ಶೂಟಿಂಗ್ ನಡೆಯಲಿದೆ. ಕೊರಿಯನ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಶಿವಮೊಗ್ಗದ ಜೈಲು ನೋಡಲು ಬೇರೆ ಜೈಲುಗಳಿಗಿಂತ ವಿಭಿನ್ನವಾಗಿದೆ. ಹೀಗಾಗಿ, ಇಲ್ಲಿ ಈಗಾಗಲೇ ಕೆಲವು ಕನ್ನಡ ಸಿನಿಮಾಗಳನ್ನೂ ಚಿತ್ರೀಕರಿಸಲಾಗಿದೆ. ಇದೀಗ ಮೊದಲ ಬಾರಿಗೆ ತಮಿಳಿನ ಸ್ಟಾರ್​ ನಟರ ಸಿನಿಮಾವೊಂದು ಶಿವಮೊಗ್ಗದ ಜೈಲಿನಲ್ಲಿ ಚಿತ್ರೀಕರಣವಾಗಲಿದೆ.

ಡಿಸೆಂಬರ್ 1ರಿಂದ 2020ರ ಜನವರಿ 18ರವರೆಗೆ ಶಿವಮೊಗ್ಗದ ಜೈಲಿನಲ್ಲಿ ದಳಪತಿ 64 ಸಿನಿಮಾ ಚಿತ್ರೀಕರಣವಾಗಲಿದೆ. ಸಿನಿಮಾದಲ್ಲಿ ಬರುವ ಬಹಳ ಮುಖ್ಯವಾದ ಸನ್ನಿವೇಶ ಮತ್ತು ಫೈಟಿಂಗ್ ಸನ್ನಿವೇಶಗಳ ಚಿತ್ರೀಕರಣ ಇಲ್ಲಿ ನಡೆಯಲಿದೆ. 1897ರಲ್ಲಿ ನಿರ್ಮಿಸಲಾದ ಈ ಜೈಲು 46 ಎಕರೆ ಜಾಗದಲ್ಲಿದೆ.

ಅಬ್ಬಾ..! ಈ ವಾರ ಬಿಡುಗಡೆ ಆಗುತ್ತಿದೆ 40ಕ್ಕೂ ಹೆಚ್ಚು ಸಿನಿಮಾಗಳು..!ಅಂಡರ್​ವರ್ಲ್ಡ್​ ಕತೆಯನ್ನು ಹೊಂದಿರುವ ಮಾಸ್​ ಸಿನಿಮಾ 'ದಳಪತಿ 64' ಇಳಯ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರಿಗೂ ಉತ್ತಮ ಬ್ರೇಕ್ ನೀಡುವ ಸಾಧ್ಯತೆಯಿದೆ. ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. ಮಾಳವಿಕಾ ಮೆನನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಅವರ ಪಾಲಿನ ಬಹುತೇಕ ಚಿತ್ರೀಕರಣವನ್ನು ಈಗಾಗಲೇ ಮುಗಿಸಲಾಗಿದೆ. ಫೆಬ್ರವರಿ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು. ಅನಿರುದ್ಧ್ ರವಿಚಂದ್ರನ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
First published: November 29, 2019, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading