Thalapathy Vijay: ವಿಜಯ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಖತ್​ ಗಿಫ್ಟ್, ಹೊಸ ಚಿತ್ರದ ಟೈಟಲ್ ಅನೌನ್ಸ್

ಸೌತ್ ಇಂಡಿಯಾದ ಸ್ಟಾರ್​ ಹೀರೋ ತಮಿಳಿನ ತಳಪತಿ ವಿಜಯ್ (Vijay) ಅವರಿಗೆ ಇಂದು 48ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ಈ ವೇಳೆ ಅವರ ಹೊಸ ಚಿತ್ರಕ್ಕೆ ಟೈಟಲ್ ಅನೌನ್ಸ್ ಮಾಡಲಾಗಿದ್ದು, ಈ ಕುರಿತ ಚಿತ್ರದ (Movie) ಹೊಸ ಪೋಸ್ಟರ್ ಅನ್ನೂ ಸಹ ಚಿತ್ರತಂಡ ಹಂಚಿಕೊಂಡಿದೆ. 

ವಾರಿಸು ಚಿತ್ರದ ಪೋಸ್ಟರ್​

ವಾರಿಸು ಚಿತ್ರದ ಪೋಸ್ಟರ್​

  • Share this:
ಸೌತ್ ಇಂಡಿಯಾದ ಸ್ಟಾರ್​ ಹೀರೋ ತಮಿಳಿನ ದಳಪತಿ ವಿಜಯ್ (Vijay) ಅವರಿಗೆ ಇಂದು 48ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ವಿಜಯ್ ಅಭಿನಯದ ಮುಂಬರುವ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದ್ದು, ಈ ಕುರಿತ ಚಿತ್ರದ (Movie) ಹೊಸ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ವಿಜಯ್ ಅವರ 66 ನೇ ಚಿತ್ರವನ್ನು ವಂಶಿ ಪೈಡಿಪಲ್ಲಿ (Vamshi Paidipally) ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕರಾದ ದಿಲ್ ರಾಜು, ಶಿರೀಶ್, ಪರಮ್ ವಿ ಪೊಟ್ಲೂರಿ ಮತ್ತು ಪರ್ಲ್ ವಿ ಪೊಟ್ಲೂರಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಪಿವಿಪಿ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ.

‘ವಾರಿಸು‘ ಅವತರಾದಲ್ಲಿ ದಳಪತಿ : 

ಇನ್ನು, ತಳಪತಿ ವಿಜಯ್ ಅವರ 66ನೇ ಚಿತ್ರಕ್ಕೆ ‘ವಾರಿಸು‘ ಎಂದು ಟೈಟಲ್ ಫಿಕ್ಸ್ ಆಗಿದೆ. ತಮಿಳಿನಲ್ಲಿ ವಾರಿಸು, ಅಂತೆಯೇ ತೆಲುಗಿನಲ್ಲಿ ‘ವಾರಸಡು‘ ಎಂಬ ಶೀರ್ಷಿಕೆಯಲ್ಲಿ ಚಿತ್ರ ತೆರೆಕಾಣಲಿದೆ. ವಿಜಯ್ ಜನ್ಮದಿನದ ಒಂದು ದಿನ ಮುಂಚಿತವಾಗಿ ಟೈಟಲ್​ ಅನ್ನು ರಿವೀಲ್ ಮಾಡಲಾಗಿದ್ದು, ಟ್ವಿಟರ್​ ನಲ್ಲಿ ಈ ಫೊಸ್ಟರ್​ ಸಖತ್ ಸದ್ದು ಮಾಡುತ್ತಿದೆ. ಪೋಸ್ಟರ್​ ಅನ್ನು ವಿಜಯ್, ಸೇರಿದಂತೆ ಅನೇಕ ಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಳಪತಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.





ಗಮನ ಸೆಳೆದ ವಿಶೇಷ ಟ್ಯಾಗ್​ ಲೈನ್ :

ಹೌದು, ಚಿತ್ರದ ಟೈಟಲ್ ರಿವೀಲ್ ಮಾಡಿರುವ ಪೋಸ್ಟರ್​ ಅಲ್ಲಿ ವಿಶೇಷ ಟ್ಯಾಗ್​ ಲೈನ್ ನೀಡಿದ್ದು ವಿಜಯ್ ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ನೀಡಿದೆ. ಪೋಸ್ಟರ್​ ನಲ್ಲಿ  ‘ದಿ ಬಾಸ್ ರಿಟರ್ನ್​‘ ಎಂದು ಬರೆಯಲಾಗಿದ್ದು, ವಿಶೇಷವಾಗಿದೆ. ಇನ್ನು ಪೋಸ್ಟರ್​ ನಲ್ಲಿ ವಿಜಯ್ ಸಖತ್ ರಾಯಲ್ ಲುಕ್​ ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಚಿತ್ರದ ಮುಹೂರ್ತದ ಸಮಯದಲ್ಲಿ ರಶ್ಮಿಕಾ ಮತ್ತು ವಿಜಯ್ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ: HBD Thalapathy Vijay: ಕಾಲಿವುಡ್​ನ ‘ಮಾಸ್ಟರ್​‘ಗೆ ಜನ್ಮದಿನದ ಸಂಭ್ರಮ, ಸಿನಿರಂಗದಲ್ಲಿ ಹೀಗಿದೆ ನೋಡಿ ತಳಪತಿ ಆರ್ಭಟ

ವಿಜಯ್​ಗೆ ಜೋಡಿಯಾಗಲಿದ್ದಾರೆ ಕನ್ನಡದ ಬೆಡಗಿ:

ಇನ್ನು, ವಿಜಯ್​ ಅವರ 66ನೇ ಚಿತ್ರವಾದ ವಾರಿಸು ಚಿತ್ರದಲ್ಲಿ ವಿಜಯ್​ಗೆ ಜೋಡಿಯಾಗಿ ಕನ್ನಡದ ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ವಿಜಯ್ ಜೊತೆ ಹೆಜ್ಜೆ ಹಾಕಲಿದ್ದು, ಚಿತ್ರದ ನಿರೀಕ್ಷೆಗಳು ಹೆಚ್ಚಿವೆ.

ವಾರಿಸು ಚಿತ್ರದ ಮುಹೂರ್ತದ ವೇಳೆ


ಧೋನಿ ಜೊತೆ ವಿಜಯ್ ಸಿನಿಮಾ:

ಹೌದು, ಕೆಲ ಮೂಲಗಳ ಪ್ರಕಾರ ಧೋನಿ ಜೊತೆ ತಳಪತಿ ವಿಜಯ್ ಸಿನಿಮಾ ಮಾಡಲಿದ್ದಾರಂತೆ. ಅಲ್ಲದೇ ಈಗಾಗಲೇ ಧೋನಿ ಚಿತ್ರ ನಿರ್ಮಾಣಕ್ಕೆ ಕೈ ಹಾಕುವುದಾಗಿ ಹೇಳಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ವಿಜಯ್ ಅವರ ಮುಂದಿನ ಚಿತ್ರವನ್ನು ಕ್ಯಾಪ್ಟನ್ ಕೂಲ್ ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಕಾಲಿವುಡ್​ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
Published by:shrikrishna bhat
First published: