• Home
  • »
  • News
  • »
  • entertainment
  • »
  • Thalapathy Vijay: ದಳಪತಿ ಅಭಿಮಾನಿಗಳಿಗೆ ತ್ರಿಬಲ್ ಧಮಾಕ! ವಿಜಯ್ ಫ್ಯಾನ್ಸ್​ ಫುಲ್​ ದಿಲ್​ಖುಷ್​

Thalapathy Vijay: ದಳಪತಿ ಅಭಿಮಾನಿಗಳಿಗೆ ತ್ರಿಬಲ್ ಧಮಾಕ! ವಿಜಯ್ ಫ್ಯಾನ್ಸ್​ ಫುಲ್​ ದಿಲ್​ಖುಷ್​

‘ವಾರಿಸು‘ ಚಿತ್ರದ ಪೋಸ್ಟರ್

‘ವಾರಿಸು‘ ಚಿತ್ರದ ಪೋಸ್ಟರ್

ವಿಜಯ್ ನಟಿಸುತ್ತಿರುವ ಮುಂದಿನ ಚಿತ್ರ ವಾರಿಸು ಚಿತ್ರದ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳು ಹೊರಬಿದ್ದಿದೆ. ವಿಜಯ್ ಜನ್ಮದಿನದ ಪ್ರಯುಕ್ತ ಈಗಾಗಲೇ 3 ಪೋಸ್ಟರ್ ಬಿಡುಗಡೆಯಾಗಿದ್ದು, 3 ಪೋಸ್ಟರ್​ಗಳು ವಿಭಿನ್ನವಾಗಿದೆ.

  • Share this:

ಸೌತ್ ಇಂಡಿಯಾದ ಸ್ಟಾರ್​ ಹೀರೋ ತಮಿಳಿನ ದಳಪತಿ ವಿಜಯ್ (Vijay) ಅವರಿಗೆ ಇಂದು 48ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ಅದರಲ್ಲಿಯೂ ಅವರ ಅಭಿಮಾನಿಗಳಿಗೆ ಇಂದು ಹಬ್ಬವಿದ್ದಂತೆ. ಈಗಾಗಲೇ ವಿಜಯ್ ಬರ್ತಡೇ ಅನ್ನು ಅಭಿಮಾನಿಗಳು ಸಂಬ್ರಮದಿಂದ ಆಚರಿಸುತ್ತಿದ್ದಾರೆ. ಇದರ ನಡುವೆ ನಿನ್ನೆಯೇ ಬಿಡುಗಡೆಯಾಗಿದ್ದ ವಿಜಯ್ ಅವರ 66ನೇ ಚಿತ್ರದ ಟೈಟಲ್ ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಆದರೆ ಈ ಬಾರಿ ದಳಪತಿ ಅಭಿಮಾನಿಗಳಿಗೆ ವಿಜಯ್ ಒಂದಲ್ಲಾ, ಎರಡಲ್ಲಾ ಭಜರ್ರಿ ಮೂರು ಗಿಪ್ಟ್ ನೀಡಿದ್ದಾರೆ. ಹೌದು, ವಾರಿಸು ಚಿತ್ರದ ಟೈಟಲ್ ಪೋಸ್ಟರ್​ ಅನ್ನು ಜನ್ಮದಿನದ ಒಮದು ದಿನ ಮುಂಚಿತವಾಗಿ ಚಿತ್ರತಂಡ ರಿಲೀಸ್ ಮಾಡಿತ್ತು. ಅದರಂತೆ ಇಮದು ವಾರಿಸು ಚಿತ್ರದ 2 ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದೆ. ಅಲ್ಲಿಗೆ ಬರೋಬ್ಬರಿ 3 ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ವಿಜಯ್ ಅಭಿಮಾಣಿಗಳಿಗೆ ತ್ರಿಬಲ್ ಧಮಾಕಾ ನೀಡಿದ್ದಾರೆ.


3 ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ:


ಹೌದು, ಸಾಮಾನ್ಯವಾಗಿ ಹೀರೋಗಳ ಬರ್ತಡೇ ದಿನ ಅವರ ಮುಂದಿನ ಚಿತ್ರದ ಒಂದು ಪೋಸ್ಟರ್ ಅಥವಾ ಚಿಕ್ಕ ಟೀಸರ್ ಬಿಡುಗಡೆ ಮಾಡುವುದು ವಾಡಿಕೆ. ಆದರೆ ಇದನ್ನು ಇದೀಗ ವಾರಿಸು ಚಿತ್ರತಂಡ ಬ್ರೇಕ್ ಮಾಡಿದೆ. ದಳಪತಿ ವಿಜಯ್ ಜನ್ಮದಿನದ ನಿಮಿತ್ತ ಚಿತ್ರತಂಡ ವಾರಿಸು ಚಿತ್ರದ 3 ಪೋಸ್ಟರ್​ ಗಳನ್ನು ಬಿಡುಗಡೆ ಮಾಡಿದೆ.ನಿರೀಕ್ಷೆ ಹೆಚ್ಚಿಸಿದ ‘ವಾರಿಸು‘:


ಇನ್ನು, ವಿಜಯ್ ನಟಿಸುತ್ತಿರುವ ಮುಂದಿನ ಚಿತ್ರ ವಾರಿಸು ಚಿತ್ರದ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳು ಹೊರಬಿದ್ದಿದೆ. ವಿಜಯ್ ಜನ್ಮದಿನದ ಪ್ರಯುಕ್ತ ಈಗಾಗಲೇ 3 ಪೋಸ್ಟರ್ ಬಿಡುಗಡೆಯಾಗಿದ್ದು, 3 ಪೋಸ್ಟರ್​ಗಳು ವಿಭಿನ್ನವಾಗಿದೆ. ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್ ನಲ್ಲಿ ವಿಜಯ್ ಸಖತ್ ರಿಚ್​ ಲುಕ್ ನಲ್ಲಿ ಕಾಣಿಸಿಕೊಂಡರೆ, 2ನೇ ಪೋಸ್ಟರ್​ ನಲ್ಲಿ ಮಕ್ಕಳೊಂದಿಗೆ ಸಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಇನ್ನು, ಈಗ ಬಿಡುಗಡೆ ಆಗಿರುವ 3ನೇ ಪೋಸ್ಟರ್​ ನಲ್ಲಿ ಬೈಕ್​ ಮೇಲೆ ಕುಳಿತಿದ್ದು, ಸಖತ್ ರಗಡ್ ಲುಕ್ ನಲ್ಲಿ ಬಿಂಬಿಸಲಾಗಿದೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆಯು ಒಂದೇ ದಿನ ಮೂರು ಪಟ್ಟು ಹೆಚ್ಚಳವಾಗಿದೆ.ಗಮನ ಸೆಳೆದ ವಿಶೇಷ ಟ್ಯಾಗ್​ ಲೈನ್ :


ಚಿತ್ರದ ಟೈಟಲ್ ರಿವೀಲ್ ಮಾಡಿರುವ ಪೋಸ್ಟರ್​ ಅಲ್ಲಿ ವಿಶೇಷ ಟ್ಯಾಗ್​ ಲೈನ್ ನೀಡಿದ್ದು ವಿಜಯ್ ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ನೀಡಿದೆ. ಪೋಸ್ಟರ್​ ನಲ್ಲಿ  ‘ದಿ ಬಾಸ್ ರಿಟರ್ನ್​‘ ಎಂದು ಬರೆಯಲಾಗಿದ್ದು, ವಿಶೇಷವಾಗಿದೆ. ಇನ್ನು ಪೋಸ್ಟರ್​ ನಲ್ಲಿ ವಿಜಯ್ ಸಖತ್ ರಾಯಲ್ ಲುಕ್​ ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.


ಇದನ್ನೂ ಓದಿ: HBD Thalapathy Vijay: ಕಾಲಿವುಡ್​ನ ‘ಮಾಸ್ಟರ್​‘ಗೆ ಜನ್ಮದಿನದ ಸಂಭ್ರಮ, ಸಿನಿರಂಗದಲ್ಲಿ ಹೀಗಿದೆ ನೋಡಿ ದಳಪತಿ ಆರ್ಭಟ


ವಿಜಯ್​ಗೆ ಜೋಡಿಯಾಗಿ ರಶ್ಮಿಕಾ:


ಇನ್ನು, ವಿಜಯ್​ ಅವರ 66ನೇ ಚಿತ್ರವಾದ ವಾರಿಸು ಚಿತ್ರದಲ್ಲಿ ವಿಜಯ್​ಗೆ ಜೋಡಿಯಾಗಿ ಕನ್ನಡದ ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ವಿಜಯ್ ಜೊತೆ ಹೆಜ್ಜೆ ಹಾಕಲಿದ್ದು, ಚಿತ್ರದ ನಿರೀಕ್ಷೆಗಳು ಹೆಚ್ಚಿವೆ.

Published by:shrikrishna bhat
First published: