Thalapathy Vijay: ದಳಪತಿ ವಿಜಯ್ ಬಗ್ಗೆ ಅಭಿಮಾನಿಯ ಪ್ರಶ್ನೆಗೆ ಕಮಲ್ ಹಾಸನ್ ಹೀಗೆಂದಿದ್ದೇಕೆ?

ವಿಕ್ರಮ್ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರಂತೆ. ಕಮಲ್ ಹಾಸನ್ ಜೊತೆ ವಿಜಯ್ ಅಭಿನಯಿಸಿದ್ದಾರೆ ಎಂಬುದು ಸದ್ಯದ ಕಾಲಿವುಡ್ ನ ಲೇಟೆಸ್ಟ್ ಟಾಕ್. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಯೊಬ್ಬರು ವಿಕ್ರಮ್ ಸೀಕ್ವೆಲ್‌ನಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳುತ್ತಾರೆಯೇ ಎಂದು ಕೇಳಿದರು. ಇದಕ್ಕೆ ಕಮಲ್ ಹಾಸನ್ ಕುತೂಹಲಕಾರಿ ಉತ್ತರ ನೀಡಿದ್ದಾರೆ.

ದಳಪತಿ ವಿಜಯ್ ಮತ್ತು ಕಮಲ್ ಹಾಸನ್

ದಳಪತಿ ವಿಜಯ್ ಮತ್ತು ಕಮಲ್ ಹಾಸನ್

  • Share this:
ಲೆಜೆಂಡರಿ ನಟ ಕಮಲ್ ಹಾಸನ್ (Kamal Haasan) ಅವರ 'ವಿಕ್ರಮ್' (Vikram) ಚಿತ್ರ ಚಿತ್ರಮಂದಿರಗಳಲ್ಲಿ (Theatre) ಈಗಾಗಲೇ ಬಿಡುಗಡೆಯಾಗಿದ್ದು. ಲೋಕೇಶ್ ಕನಕರಾಜ್ ನಿರ್ದೇಶನದ ಕಮಲ್ ಹಾಸನ್ ಅವರ ಚಿತ್ರ ‘ವಿಕ್ರಮ್’ ದಕ್ಷಿಣದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕಮಲ್ ಹಾಸನ್ ಪ್ರಸ್ತುತ ಪ್ರಪಂಚದಾದ್ಯಂತ ತಮ್ಮ ಪ್ಯಾನ್ ಇಂಡಿಯನ್ ಚಲನಚಿತ್ರವನ್ನು (Cinema) ಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದ್ದರು. ವಿಕ್ರಮ್ ಸಿನಿಮಾ ಹಾಡುಗಳು (Songs) ಇತ್ತೀಚೆಗೆ ರಿಲೀಸ್ ಆಗಿದ್ದು ಸಕತ್ ಸುದ್ದಿ ಮಾಡುತ್ತಿವೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಫಹಾದ್ ಫಾಜಿಲ್ ಕೂಡ ನಟಿಸಿದ್ದಾರೆ. ಮೂವರು ನಾಯಕರಿರುವ ಈ ಚಿತ್ರದ ಮೇಲೆ ಈಗಾಗ್ಲೇ ಬೆಟ್ಟದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ವಿಕ್ರಮ್ ಸಿನೆಮಾದಲ್ಲಿ ದಳಪತಿ ವಿಜಯ್
ವಿಕ್ರಮ್ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರಂತೆ. ಕಮಲ್ ಹಾಸನ್ ಜೊತೆ ವಿಜಯ್ ಅಭಿನಯಿಸಿದ್ದಾರೆ ಎಂಬುದು ಸದ್ಯದ ಕಾಲಿವುಡ್ ನ ಲೇಟೆಸ್ಟ್ ಟಾಕ್. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಯೊಬ್ಬರು ವಿಕ್ರಮ್ ಸೀಕ್ವೆಲ್‌ನಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳುತ್ತಾರೆಯೇ ಎಂದು ಕೇಳಿದರು. ಇದಕ್ಕೆ ಕಮಲ್ ಹಾಸನ್ ಕುತೂಹಲಕಾರಿ ಉತ್ತರ ನೀಡಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಕಮಲ್ ಹಾಸನ್ ಹೇಳಿದ್ದೇನು?
ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, "ನಾನು ಈಗಾಗಲೇ ಒಬ್ಬ ಸ್ಟಾರ್‌ಗೆ ಬದ್ಧನಾಗಿದ್ದೇನೆ ಮತ್ತು ಅವರು ಯಾರೆಂದು ನಿಮಗೆಲ್ಲರಿಗೂ ತಿಳಿದಿದೆ" ಎಂದು ಅವರು ಸೂರ್ಯ ಅವರ ಅತಿಥಿ ಪಾತ್ರವನ್ನು ಉಲ್ಲೇಖಿಸಿ ಹೇಳಿದರು. ಅವರ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ದಳಪತಿ ವಿಜಯ್ ಅವರೊಂದಿಗೆ ಚಿತ್ರ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Hombale films: ಬಾಲಿವುಡ್‌ನತ್ತ ಹೊಂಬಾಳೆ ಚಿತ್ತ! ಹಿಂದಿ ಸಿನಿಮಾಕ್ಕೆ ರೆಡಿಯಾದ ಕೆಜಿಎಫ್ ನಿರ್ಮಾಪಕರು

ಇನ್ನೋರ್ವ ಅಭಿಮಾನಿ ಮುಂದೆ ವಿಜಯ್ ಅವರ ಸಿನಿಮಾ ನಿರ್ಮಾಣ ಮಾಡುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ ವಿಜಯ್ ಅವರ ಕಾಲ್ ಶೀಟ್ ಸಿಕ್ಕರೆ ಖಂಡಿತಾ ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದರು.

ಮೂರು ಸ್ಟಾರ್ ನಾಯಕರನ್ನು ಒಳಗೊಂಡ 'ವಿಕ್ರಮ್' ಚಿತ್ರ
ಜೂನ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್ 'ವಿಕ್ರಮ್' ಮೂರು ಸ್ಟಾರ್ ನಾಯಕರನ್ನು ಒಳಗೊಂಡ ಚಿತ್ರ. ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಮೊದಲ ಬಾರಿಗೆ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ, ಈ ಮೂವರನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಕಮಲ್ ಹಾಸನ್ ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಆರ್. ಮಹೇಂದ್ರನ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಕ್ರಮ್ ಚಿತ್ರದ ಸಹ ಪೋಷಕ ಪಾತ್ರಗಳಲ್ಲಿ ಕಾಳಿದಾಸ್ ಜಯರಾಮ್, ನರೈನ್, ಅರ್ಜುನ್ ದಾಸ್ ಮತ್ತು ಶಿವಾನಿ ನಾರಾಯಣನ್ ಕಾಣಿಸಿಕೊಂಡಿದ್ದಾರೆ.

ಪ್ರಿ-ರಿಲೀಸ್ ವ್ಯವಹಾರದಲ್ಲಿ ಆದ ಕಲೆಕ್ಷನ್
ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಕರಾಗಿದ್ದು, ಗಿರೀಶ್ ಗಂಗಾಧರನ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿದೆ. ವಿಕ್ರಮ್ ಚಿತ್ರ ಬಿಡುಗಡೆಗೆ ಮುನ್ನ ಸಖತ್ ಸುದ್ದಿ ಮಾಡುತ್ತಿದ್ದು ಪ್ರಿ-ರಿಲೀಸ್ ವ್ಯವಹಾರದಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟಿಟಿ ಹಕ್ಕುಗಳು (ಬಹು ಭಾಷೆಗಳಲ್ಲಿ) ದಾಖಲೆ ಬೆಲೆಗೆ ಮಾರಾಟವಾಗಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವಿಟ್ಟರ್‌ನಲ್ಲಿ ವಿಕ್ರಮ್ ಪ್ರಿ-ರಿಲೀಸ್ ವ್ಯವಹಾರದಲ್ಲಿ 200 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  777 Charlie: ನಿರ್ದೇಶಕ ಕಿರಣರಾಜ್ ಕೆ ಸಿನಿಮಾಕ್ಕೆ ಎಂಟ್ರಿ ಕೊಡುವ ಮುನ್ನ ಇವೆಲ್ಲಾ ಕೆಲಸಗಳನ್ನು ಮಾಡಿದ್ರಂತೆ

ಕೆಲವು ದಿನಗಳ ಹಿಂದೆ, ಮಾಸ್ಟರ್ ನಂತರ, ಲೋಕೇಶ್ ಕನಕರಾಜ್ ಮತ್ತು ವಿಜಯ್ ಅವರ ತಾತ್ಕಾಲಿಕವಾಗಿ ಹೆಸರಿಸಿದ ದಳಪತಿ 67 ನಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ. ಈ ಚಿತ್ರ ಮಾಸ್ ಮತ್ತು ಕ್ಲಾಸ್ ಕಾಂಬಿನೇಷನ್ ಆಗಿರುತ್ತದೆ ಎಂದು ನಿರ್ದೇಶಕರು ಹೇಳಿದ್ದರು.
Published by:Ashwini Prabhu
First published: