Jayalalithaa ಸಿಎಂ ಆದ ನಂತರದ ಜರ್ನಿ ತೋರಿಸಲಿದೆಯೇ Thalaivii 2 ಚಿತ್ರ..?

ಈಗಾಗಲೇ ಬಿಡುಗಡೆಯಾದಂತಹ ‘ತಲೈವಿ’ ಚಿತ್ರದಲ್ಲಿ ಜಯಲಲಿತಾ ಬಾಲ್ಯದ ಜೀವನ, ಅವರ ಚಿತ್ರರಂಗದ ಪಯಣ ಹಾಗೂ ರಾಜಕೀಯ ಜೀವನವನ್ನು ತೋರಿಸಿದ್ದರೂ ಅದೇಕೋ ಪರಿಪೂರ್ಣವಾಗಿಲ್ಲ ಎನ್ನುವುದು ತುಂಬಾ ಜನರ ಅನಿಸಿಕೆಯಾಗಿದೆ. ಹೀಗಾಗಿಯೇ ತಲೈವಿ 2 ಸಿನಿಮಾದ ತಯಾರಿಯಲ್ಲಿದೆಯಂತೆ ಚಿತ್ರತಂಡ.

ಸೆಟ್ಟೇರಲು ಸಿದ್ಧವಾಗುತ್ತಿದೆ ತಲೈವಿ 2 ಸಿನಿಮಾ

ಸೆಟ್ಟೇರಲು ಸಿದ್ಧವಾಗುತ್ತಿದೆ ತಲೈವಿ 2 ಸಿನಿಮಾ

  • Share this:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ  (Jayalalithaa) ಜೀವನಧಾರಿತ ಚಿತ್ರವಾದ 'ತಲೈವಿ' ಈಗಾಗಲೇ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವೈಯಕ್ತಿಕವಾಗಿ ನಟಿ ಕಂಗನಾ ರನೌತ್  (Kangana Ranaut) ನಟನೆಯನ್ನು ಸಹ ಜನರು ಮೆಚ್ಚಿಕೊಂಡಿದ್ದಾರೆ. ಇದೆಲ್ಲಾ ನಮಗೆ ಗೊತ್ತಿರುವಂತಹ ವಿಚಾರವೇ ಆಗಿದೆ, ಗೊತ್ತಿರದ ವಿಚಾರವೊಂದು ನಾವು ಹೇಳುತ್ತೇವೆ ಕೇಳಿ. ಈ ಚಿತ್ರದ ಸಹ-ಬರಹಗಾರರಾದ ರಜತ್ ಅರೋರಾ (Writer Rajat Arora) ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆಯ ಎರಡನೇ ಭಾಗವನ್ನು (Thalaivii 2 ) ಸಹ ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ಬಿಡುಗಡೆಯಾದಂತಹ ‘ತಲೈವಿ’ ಚಿತ್ರದಲ್ಲಿ ಜಯಲಲಿತಾ ಬಾಲ್ಯದ ಜೀವನ, ಅವರ ಚಿತ್ರರಂಗದ ಪಯಣ ಹಾಗೂ ರಾಜಕೀಯ ಜೀವನವನ್ನು ತೋರಿಸಿದ್ದರೂ ಅದೇಕೋ ಪರಿಪೂರ್ಣವಾಗಿಲ್ಲ ಎನ್ನುವುದು ತುಂಬಾ ಜನರ ಅನಿಸಿಕೆಯಾಗಿದೆ. ಹಾಗೆ ಅನ್ನಿಸಿದವರಲ್ಲಿ ಚಿತ್ರದ ಸಹ ಬರಹಗಾರರಾದ ರಜತ್ ಅರೋರಾ ಸಹ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಅದಕ್ಕಾಗಿಯೇ ಇದೀಗ, 'ತಲೈವಿ' ಚಿತ್ರತಂಡ ಚಿತ್ರದ ಸೀಕ್ವೆಲ್ ಮಾಡಲು ಮನಸ್ಸು ಮಾಡುತ್ತದೆಯೇ ಎಂಬುದು ಇನ್ನೂ ಕಾದು ನೋಡಬೇಕಿದೆ.

defamation case against Javed Akhtar, Bollywood, Controversy, defamation case, javed akhtar, Kangana Ranaut, Kangana Ranaut, Defamation Case, Javed Akhtar, Bollywood, Controversy, ಕಂಗನಾ ರಣಾವತ್​, ಜಾವೇದ್​ ಅಖ್ತರ್​, ಮಾನಹಾನಿ ಪ್ರಕರಣ, ನ್ಯಾಯಾಲಯ, ಬಾಲಿವುಡ್​, Kangana Ranaut filed defamation case, Kangana Ranaut entering politics, Thalaivii, Thalaivii movie, Kangana Ranaut, Thalaivii release date, ಕಂಗನಾ ರಾಜಕೀಯ ಪ್ರವೇಶ, ತಲೈವಿ ಸಿನಿಮಾ, ಜಯಲಲಿತಾ ಪಾತ್ರದಲ್ಲಿ ನಟಿಸಿದ ನಂತರ ರಾಜಕೀಯ ಪ್ರವೇಶದ ಬಗ್ಗೆ ಬಾಯ್ಬಿಟ್ಟ ಕಂಗನಾ ರನೋತ್​, ಅರವಿಂದ್ ಸ್ವಾಮಿ, ತಲೈವಿ ಸಿನಿಮಾ ರಿಲೀಸ್​, Thalaivii songs, Thalaivii trailer, Thalaivii teaser, Thalaivii MGR, Thalaivii Arvind Swamy, Thalaivi, Javed Akhtar case Kangana Ranaut says Lone warrior facing hyenas that too in style
ನಟಿ ಕಂಗನಾ ರನೌತ್


ರಜತ್ ಅರೋರಾ ಇತ್ತೀಚೆಗೆ ‘ಬಾಲಿವುಡ್ ಲೈಫ್’ನೊಂದಿಗೆ ಮಾತನಾಡುತ್ತಾ 'ತಲೈವಿ' ಚಿತ್ರದ ಎರಡನೆಯ ಭಾಗದ ನಿರ್ಮಾಣದ ಸಾಧ್ಯತೆಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. “ನಟಿ ಕಂಗನಾ ರನೌತ್ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾವು ಈ ಸಿನಿಮಾ ಮಾಡಬೇಕಾದರೆ ಒಬ್ಬ ಸಾಮಾನ್ಯ ಹುಡುಗಿಯು ಹೇಗೆ ಮುಖ್ಯಮಂತ್ರಿಯ ಕುರ್ಚಿಯನ್ನು ತಲುಪಿದರು ಎಂಬ ಕಥೆ ಹೇಳಲು ಬಯಸಿದ್ದೆವು. ಅವರ ಈ ಪ್ರಯಾಣವನ್ನು ಈ ಚಿತ್ರದಲ್ಲಿ ಚಿತ್ರೀಕರಿಸುವುದು ನಮ್ಮ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ನೀವು ಈ ಸಿನಿಮಾದ ಪೋಸ್ಟರ್ ನೋಡಿದರೆ, ಅಲ್ಲಿ 'ಸಿನಿಮಾ ದಿಂದ ಸಿಎಂವರೆಗೆ’ ಎಂದು ಇರುವುದನ್ನು ನೋಡಬಹುದು ಎಂದು ರಜತ್ ಹೇಳಿದ್ದಾರೆ.

ಇದನ್ನೂ ಓದಿ: Thalaivi: ವೈರಲ್​ ಆಗುತ್ತಿವೆ ತಲೈವಿ ಸೆಟ್​ನಲ್ಲಿ ತೆಗೆದ ಕಂಗನಾರ ಲೆಟೆಸ್ಟ್​ ಫೋಟೋಗಳು..!

ಜಯಲಲಿತಾ 20ರಿಂದ 30 ವರ್ಷಗಳ ರಾಜಕೀಯ ಪಯಣವನ್ನು ಕೇವಲ 15 ನಿಮಿಷಗಳಲ್ಲಿ ತೋರಿಸುವುದು ಜೀವನಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ನಾವು ಜಯಲಲಿತಾ ಅವರ ರಾಜಕೀಯ ಪಯಣದ ಅನೇಕ ಅಂಶಗಳನ್ನು ಇನ್ನೂ ತೋರಿಸಬೇಕಾಗಿದ್ದು, ಅದನ್ನು ಎರಡನೆಯ ಭಾಗದಲ್ಲಿ ತೋರಿಸಬೇಕು ಎಂಬ ಉದ್ದೇಶ ಯಾವಾಗಲೂ ಇತ್ತು” ಎಂದು ರಜತ್ ತಿಳಿಸಿದ್ದಾರೆ.

“ಅವರು ಮುಖ್ಯಮಂತ್ರಿ ಆದ ನಂತರದ ಪಯಣವನ್ನು ತೋರಿಸಿಲ್ಲ ಎಂದು ತುಂಬಾ ಜನರು ಕೇಳುತ್ತಿದ್ದಾರೆ. ಆದ್ದರಿಂದ ತೋರಿಸಲು ಇನ್ನೂ ಹೆಚ್ಚಿನ ಕಥೆ ಉಳಿದಿದ್ದು, ಖಂಡಿತವಾಗಿಯೂ ಅದನ್ನು ತೋರಿಸಬಹುದು. ಆದರೂ, ನಾವು ಇಡೀ ಚಿತ್ರ ತಂಡ ಒಮ್ಮೆ ಭೇಟಿಯಾಗಿ ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ. ಇದರ ಬಗ್ಗೆ ನಟಿ ಕಂಗನಾರೊಂದಿಗೆ ಮಾತುಕತೆ ನಡೆದಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಲೇಸ್ ಬ್ರಾಲೆಟ್​ ಡ್ರೆಸ್​ನಲ್ಲಿ ಕಂಗನಾ: ಧಾಕಡ್​ ಸಿನಿಮಾದ ಪಾರ್ಟಿ ಫೋಟೋಗಳು ವೈರಲ್​

ವಿಜಯ್ ನಿರ್ದೇಶನದ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್. ಸಿಂಗ್ ನಿರ್ಮಿಸಿದ್ದು, ಚಿತ್ರವು ಸೆಪ್ಟೆಂಬರ್ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕಂಗನಾ ಅವರ ಅಭಿನಯದ ಬಗ್ಗೆ ವಿಮರ್ಶಕರು ಹಾಗೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ ನಂತರ ಕಂಗನಾ ರನೌತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿದ್ದರು. ಜನರು ಬೆಂಬಲ ಕೊಟ್ಟು ರಾಜಕೀಯಕ್ಕೆ ಬರುವಂತೆ ಮಾಡಿದರೆ, ತಾನು ಬರಲು ಸಿದ್ಧ, ಆದರೆ ಈಗಲ್ಲ ಎಂದು ಕಂಗನಾ ಹೇಳಿಕೊಂಡಿದ್ದರು.
Published by:Anitha E
First published: