Thalaivi Trailer: ಸಿನಿಪ್ರಿಯರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಕಂಗನಾ ಅಭಿನಯದ ತಲೈವಿ ಚಿತ್ರದ ಟ್ರೇಲರ್​..!

ಟ್ರೇಲರ್​ ನೋಡಿದ ಮೇಲಂತೂ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿಗಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ. ಸಿನಿಪ್ರಿಯರಲ್ಲಿದ್ದ ನಿರೀಕ್ಷೆ ಈಗ ದುಪ್ಪಟ್ಟಾಗಿದೆ.

ತಲೈವಿ ಸಿನಿಮಾದಲ್ಲಿ ಕಂಗನಾ

ತಲೈವಿ ಸಿನಿಮಾದಲ್ಲಿ ಕಂಗನಾ

  • Share this:
ಕಂಗನಾ ರನೋತ್ (Kangana Ranaut) ಅಭಿನಯದ ಬಹು ನಿರೀಕ್ಷಿತ ಸಿನಿಮಾ ತಲೈವಿಯ ಟ್ರೇಲರ್​ (Thalaivi Trailer Release)  ರಿಲೀಸ್ ಆಗಿದೆ.  ನಟಿ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾನೇ ಈ ತಲೈವಿ (Thalaivi ).  ಈ ಸಿನಿಮಾದ ಟ್ರೇಲರ್​ ಕಂಗನಾ ರನೋತ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿದೆ. ​ನಟಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಚೆನ್ನೈ ಹಾಗೂ ಮುಂಬೈನಲ್ಲಿ ಈ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಕಂಗನಾ, ನಿರ್ದೇಶಕ ವಿಜಯ್​ ಹಾಗೂ ನಿರ್ಮಾಪಕ ಸಹ ಹಾಜರಿದ್ದರು. ಟ್ರೇಲರ್​ ರಿಲೀಸ್ ಆಗುತ್ತಿದ್ದಂತೆಯೇ ಎಲ್ಲೆಡೆ ಸದ್ದು ಮಾಡುತ್ತಿದ್ದಾಳೆ ತಲೈವಿ. ಕಂಗನಾ ಅವರ ಅಭಿನಯಕ್ಕೆ ಸಾಕಷಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು ಕಂಗನಾ ಅವರ 34ನೇ ವರ್ಷದ ಹುಟ್ಟುಹಬ್ಬ. ಬರ್ತ್​ ಡೇ ಗಿಫ್ಟ್​ ಆಗಿ ತಲೈವಿ ಚಿತ್ರತಂಡ ಭರ್ಜರಿ ಟ್ರೇಲರ್​ ರಿಲೀಸ್​ ಮಾಡಿದೆ. 

ಟ್ರೇಲರ್​ನಲ್ಲಿ ಜಯಲಲಿತಾ ಅವರ ಸಿನಿ ಜೀವನ, ರಾಜಕೀಯದ ಪ್ರವೇಶ ಹಾಗೂ ಎಂಜಿಆರ್​ ಅವರ ಜತೆಗಿನ ಒಡನಾಟದ ಬಗ್ಗೆ ಒಂದು ಕಿರುನೋಟ ನೀಡಿದ್ದಾರೆ. ಇನ್ನು ಜಯಲಲಿತಾ ಪಾತ್ರದಲ್ಲಿ ಕಂಗನಾ ಅಭಿನಯ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು.ಭಾನುವಾರವೇ ನಟಿ ಕಂಗನಾ ಸಿನಿಮಾದ ಟ್ರೇಲರ್​ ರಿಲೀಸ್​ ಕುರಿತಾಗಿ ಪ್ರಕಟಿಸಿದ್ದರು. ಜೊತೆಗೆ ಸಿನಿಮಾದ ಮೋಷನ್​ ಪೋಸ್ಟರ್​ ಸಹ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಕಂಗನಾ ಅವರ ಖಡಕ್​ ಧ್ವನಿಯನ್ನು ಪರಿಚಯಿಸಲಾಗಿತ್ತು.


ತಮ್ಮ ಸ್ವಾಭಿಮಾನಕ್ಕಾಗಿ ನಡೆದ ಯುದ್ಧದಲ್ಲಿ ಜಯಲಲಿತಾ ಹೇಗೆ ಹೋರಾಡುತ್ತಾರೆ. ಅದಕ್ಕಾಗಿ ಅವರು ಎದುರಿಸಿದ ಸವಾಲುಗಳು ಹಾಗೂ ಅವಮಾನಗಳನ್ನು ಅನುಭವಿಸುತ್ತಾರೆ ಎಂದು ಬಹಳ ಸೂಕ್ಷ್ಮವಾಗಿ ಚಿತ್ರೀಕರಿಸಲಾಗಿದೆ.


ಟ್ರೇಲರ್​ ನೋಡಿದ ಮೇಲಂತೂ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿಗಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ. ಸಿನಿಪ್ರಿಯರಲ್ಲಿದ್ದ ನಿರೀಕ್ಷೆ ಈಗ ದುಪ್ಪಟ್ಟಾಗಿದೆ.


ಎಂಜಿಆರ್ ಪಾತ್ರದಲ್ಲಿ ಕಾಲಿವುಡ್​ನ ಖ್ಯತ ನಟ ಅರವಿಂದ್​ ಸ್ವಾಮಿ ನಟಿಸಿದ್ದಾರೆ. ಅವರ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆಯೇ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಂಗನಾ ಹಾಗೂ ಅರವಿಂದ್​ ಸ್ವಾಮಿ ಅವರ ಜೋಡಿ ತಲೈವಿ ಸಿನಿಮಾದ ಮೂಲಕ ಮೋಡಿ ಮಾಡಲಿರುವುದಂತೂ ಖಂಡಿತ.

ಈ ಹಿಂದೆ ತಲೈವಿ ಸಿನಿಮಾದ ಚಿತ್ರೀಕರಣ ಆರಂಭವಾದಾಗ ನಿರ್ದೇಶಕರ ಜೊತೆ ಕಂಗನಾ ಚರ್ಚಿಸುತ್ತಿದ್ದ ಫೋಟೋಗಳನ್ನು ಟೀಮ್​ ಕಂಗನಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಕಾಸ್ಯ್ಟೂಮ್​ನಿಂದ ಹಿಡಿದು ಹೇರ್​ ಸ್ಟೈಲ್​ ಎಲ್ಲ ನೋಡಿದರೆ ಥೇಟ್ ಜಯಲಲಿತಾರಂತೆಯೇ ಕಾಣುತ್ತಿದ್ದ ಕಂಗನಾ ಅವರ ಫೋಟೋಗಳು ಆಗ ವೈರಲ್​ ಆಗಿದ್ದವು. ಇನ್ನು ಈ ಸಿನಿಮಾಗಾಗಿ ಕಂಗನಾ ಭರತನಾಟ್ಯವನ್ನು ಕಲಿತಿದ್ದಾರೆ.
Published by:Anitha E
First published: