HOME » NEWS » Entertainment » THALAIVI FAME ACTRESS KANGANA IS IN NEWS BECAUSE OF HER NEW COSTLY HAND BAG AE

ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!

Kangana: ಈ ಹಿಂದೆ ನಟಿ ಕರೀನಾ ಅವರ ಕಾಸ್ಲಿ ಬ್ಯಾಗ್​, ಪ್ರಿಯಾಂಕಾ ಚೋಪ್ರಾರ ದುಬಾರಿಯ ಬೆಲೆ ಸ್ಯಾಂಡಲ್​ ಬಗ್ಗೆ ಬರೆದಿದ್ದೆವು. ಅಷ್ಟೇ ಏಕೆ ಕಂಗನಾ ಅವರ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆ ಬಗ್ಗೆಯೂ ಸುದ್ದಿಯಾಗಿತ್ತು. ಈಗ ಕಂಗನಾ ಮತ್ತೆ ಇಂತಹದ್ದೇ ಒಂದು ವಿಷಯದಿಂದ ಸದ್ದು ಮಾಡುತ್ತಿದ್ದಾರೆ.

Anitha E | news18-kannada
Updated:December 2, 2019, 12:00 PM IST
ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!
ಕಂಗನಾ
  • Share this:
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ್ರೆ ತಮ್ಮ ಸ್ಟೇಟಸ್​ಗೆ ಅನುಸಾರವಾಗಿ ಹಾಗೂ ಸ್ಟ್ಯಾಂಡರ್ಡ್​ಗೆ ತಕ್ಕಂತೆ ಐಶಾರಾಮಿ ಕಾರ್, ಡ್ರೆಸ್, ಶೂ, ವಾಚ್​ಗಳನ್ನು ಬಳಸುತ್ತಾರೆ. ಅದಕ್ಕಾಗಿ ಸಿನಿ ತಾರೆಯರು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬಗ್ಗೆ ಆಗಾಗ ಓದಿತ್ತಿರುತ್ತೇವೆ.

ಈ ಹಿಂದೆ ನಟಿ ಕರೀನಾ ಅವರ ಕಾಸ್ಲಿ ಬ್ಯಾಗ್​, ಪ್ರಿಯಾಂಕಾ ಚೋಪ್ರಾರ ದುಬಾರಿಯ ಬೆಲೆ ಸ್ಯಾಂಡಲ್​ ಬಗ್ಗೆ ಬರೆದಿದ್ದೆವು. ಅಷ್ಟೇ ಏಕೆ ಕಂಗನಾ ಅವರ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆ ಬಗ್ಗೆಯೂ ಸುದ್ದಿಯಾಗಿತ್ತು. ಈಗ ಕಂಗನಾ ಮತ್ತೆ ಇಂತಹದ್ದೇ ಒಂದು ವಿಷಯದಿಂದ ಸದ್ದು ಮಾಡುತ್ತಿದ್ದಾರೆ.

bollywood queen kangana ranaut wears a rs 600 saree pics posted in twitter by her sister
ಸೀರೆಯಲ್ಲಿ ಮಿಂಚಿದ ಬಾಲಿವುಡ್​ ಕ್ವೀನ್​ ಕಂಗನಾ


ಬಾಲಿವುಡ್ ನಟಿ ಕಂಗನಾ ರಣಾವತ್ ಈಗಲೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹ್ಯಾಂಡ್​ ಬ್ಯಾಗ್​ನಿಂದಾಗಿ ಸುದ್ದಿಯಲ್ಲಿದ್ದಾರೆ. ಅವರು ಬಳಸುವ ಹ್ಯಾಂಡ್​ ಬ್ಯಾಗ್​​ ಬರೋಬ್ಬರಿ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುತ್ತದೆಯಂತೆ.

Thalaivi Fame actress Kangana is in news because of her new costly hand bag
ಕಂಗನಾ


ಇತ್ತೀಚೆಗಷ್ಟೆ ಮುಂಬೈ ವಿಮಾನ ನಿಲ್ದಾಣದಲ್ಲಿ ಹರ್ಮೀಸ್ ಬ್ಲ್ಯಾಕ್ ಬೇಬಿ ಬರ್ಕಿನ್​ನೊಂದಿಗೆ ಕಾಣಿಸಿಕೊಂಡಿದ್ದರು ಕಂಗನಾ. ಈ ಬ್ಯಾಗ್ ಡಿಸೈನ್​ಗೆ ಅಸಲಿ ಚಿನ್ನ ಬಳಸಿರೋದೇ ಇದರ ಮೌಲ್ಯ 16 ಲಕ್ಷವಿರಲು ಕಾರಣ ಎನ್ನಲಾಗಿದೆ.

Thalaivi Fame actress Kangana is in news because of her new costly hand bag
ಕಂಗನಾ
ಅಂದಹಾಗೆ ಕಂಗನಾ ಅವರಿಗೆ ಶಾಪಿಂಗ್ ಅಂದರೆ ತುಂಬಾ ಇಷ್ಟವಂತೆ. ಹೀಗಾಗಿಯೇ ವರ್ಷಕ್ಕೆ ಎರಡು ಬಾರಿಯಾದರೂ ಕೇವಲ ಶಾಪಿಂಗ್ ಮಾಡಲೆಂದೇ ವಿದೇಶಗಳಿಗೆ ಹಾರುತ್ತಾರಂತೆ ಕಂಗನಾ. ಹೀಗೆ ವಿದೇಶಕ್ಕೆ ಹಾರಿದಾಗ ಇಂತಹ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿ ನೋಡುಗರ ಕಣ್ಣು ಕುಕ್ಕುವಂತೆ ಮಾಡುತ್ತಾರೆ.

Lakshmi Rai: ಬಿಕಿನಿ ತೊಟ್ಟು ಬೀಚ್​ನಲ್ಲಿ ಸ್ನೇಹಿತೆಯರ ಜತೆ ಎಂಜಾಯ್​ ಮಾಡುತ್ತಿರುವ ಕನ್ನಡದ ನಟಿ..!


 
First published: December 2, 2019, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories