ತಮಿಳಿನ (Tamil) ಖ್ಯಾತ ನಟ ಥಲಾ ಅಜಿತ್ (Thala Ajith) ನಟನೆಯ ವಲಿಮೈ (Valimai) ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಸಹ ಪಾತ್ರವಾಗಿದೆ. ಅಜಿತ್ ಸಿನೆಮಾ ಎಂದರೆ ಅಭಿಮಾನಿಗಳಿಗೆ ಅದೇನೋ ಕಾತುರ, ಹಾಗೆಯೆ ವಿಭಿನ್ನವಾಗಿರುತ್ತದೆ ಕೂಡ. ಅದಕ್ಕೆ ತಕ್ಕಂತೆ ವಲಿಮೈ ಚಿತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೀಗ ಅಜಿತ್ ಈ ಚಿತ್ರ ದಾಖಲೆಯನ್ನು ಮಾಡಿದೆ. ಅದೇನು ಅಂತೀರಾ? ಈ ಸ್ಟೋರಿ ಓದಿ.
ಥಿಯೇಟರ್ ಬಿಡುಗಡೆಯಾಗಿ ಕೆಲವೇ ದಿನಗಳ ನಂತರ ಒಟಿಟಿ ಪ್ಲಾಟ್ಫಾರ್ಮ್ ಜೀ5ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಒಂದೇ ನಿಮಿಷದಲ್ಲಿ ಬರೋಬ್ಬರಿ 100 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡಿದ್ದು, ನಾಲ್ಕು ಭಾಷೆಯಲ್ಲಿ ಜೀ 5ನಲ್ಲಿ ರಿಲೀಸ್ ಆಗಿರುವ ವಲಿಮೈ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.
ಸಿನೆಮಾದಲ್ಲಿ ಡಿಲೀಟ್ ಆದ ದೃಶ್ಯಗಳು ಓಟಿಟಿಯಲ್ಲಿ ವಲಿಮೈ ಚಿತ್ರದ ಕೆಲ ಸೀನ್ಗಳನ್ನು ಓಟಿಟಿ ಜೀ5 ನಲ್ಲಿ ಬಿಡುಗಡೆ ಮಾಡಲಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಡಿಲೀಟ್ ಆದ ಸೀನ್ಸ್ ಗಳು ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕ ಎನ್ನಬಹುದು.
ಜೀ5ನಲ್ಲಿ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗಿರುವ ವಲಿಮೈ ಪ್ರಮೋಷನ್ ಗೆ ಚಿತ್ರತಂಡ ಭರ್ಜರಿ ಪ್ಲ್ಯಾನ್ ಮಾಡಿತ್ತು. ಬರೋಬ್ಬರಿ ಹತ್ತು ಸಾವಿರ ಚದರ ಅಡಿಯಲ್ಲಿ ವಲಿಮೈ ಸಿನಿಮಾದ ಪೋಸ್ಟರ್ ವೊಂದನ್ನು ಜೀ 5ಬಿಡುಗಡೆ ಮಾಡಿ ಚಿತ್ರರಸಿರನ್ನು ಸೆಳೆದಿತ್ತು. ಅಲ್ಲದೇ, ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಇದುವರೆಗೂ ಇಷ್ಟು ದೊಡ್ಡ ಮಟ್ಟದ ಪೋಸ್ಟರ್ ಅನ್ನು ಯಾರು ಬಿಡುಗಡೆ ಮಾಡಿಲ್ಲ ಎನ್ನುವುದು ಈ ಚಿತ್ರದ ವಿಶೇಷ ಎನ್ನಬಹುದು.
ಇದನ್ನೂ ಓದಿ: ಥಿಯೇಟರ್ನಲ್ಲೂ-ಒಟಿಟಿಯಲ್ಲೂ ಸ್ಟಾರ್ಗಳ ಸಿನಿಮಾ ರಿಲೀಸ್! ಈ ವಾರ ಸಿನಿರಸಿಕರಿಗೆ ರಸದೌತಣ
ವಲಿಮೈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ.. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ಫೆಬ್ರವರಿ 25ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಅಜಿತ್ ಜೊತೆಗೆ ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ನೇರ್ಕೊಂಡ ಪಾರ್ವೈ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಎಚ್. ವಿನೋದ್ ಅವರೇ ‘ವಲಿಮೈ’ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ.
ಇನ್ನು ಬಿಡುಗಡೆಯ ನಂತರ ಈ ದಾಖಲೆಯಾದರೆ ವಲಿಮೈ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಮಾಡಿತ್ತು. ಹೌದು, ಪ್ರೀ-ರಿಲೀಸ್ ವ್ಯವಹಾರದಲ್ಲಿ 300 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಸುದ್ದಿಯಾಗಿದೆ. 150 ಕೋಟಿ ಬಜೆಟ್ನಲ್ಲಿ ರೆಡಿಯಾದ ವಲಿಮೈ ಚಿತ್ರವು ರಿಲೀಸ್ಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡಿತ್ತು.
ಬಿಡುಗಡೆಗೂ ಮುನ್ನವೇ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಈ ವಲಿಮೈ ಚಿತ್ರದ ಥಿಯೇಟ್ರಿಕಲ್ ರೈಟ್ಸ್ ತಮಿಳುನಾಡಿನಾದ್ಯಂತ ದಾಖಲೆಯ ಬೆಲೆಯನ್ನು ಪಡೆದುಕೊಂಡು ಸುದ್ದಿಯಾಗಿತ್ತು. ಈ ಹಿಂದೆ ವಿಶ್ವಾಸಂ ಸೂಪರ್ಸ್ಟಾರ್ಗೆ ಅತ್ಯಧಿಕ ಬೆಲೆಯ ದಾಖಲೆಯನ್ನು ಪಡೆದಿತ್ತು. ತಮಿಳುನಾಡು ಥಿಯೇಟರ್ನಲ್ಲಿ 64 ಕೋಟಿ ರೂ.ಗಳಿಗೆ ಚಿತ್ರದ ಹಕ್ಕು ಮಾರಾಟವಾಗಿದೆ.
ಇದನ್ನೂ ಓದಿ: Darling Krishna ಹತ್ರ ಇರೋ ಕಾರಿನ ಬೆಲೆ ಕೇಳಿ ಶಾಕ್ ಆಗ್ಬೇಡಿ, ನೀವೂ ಆ ಕಾರ್ ತಗೊಬೇಕು ಅಂದ್ರೆ ಡೀಟೆಲ್ಸ್ ತಿಳ್ಕೊಳಿ
ಅಜಿತ್ ಕುಮಾರ್ ಅವರ
ಈ ಚಿತ್ರ ಸದ್ಯ ಸುದ್ದಿ ಮಾಡುತ್ತಿದ್ದು, ಮುಂದಿನ ಚಿತ್ರ ಸಹ ಇದೇ ಪ್ರೊಡಕ್ಷನ್ ಹೌಸ್ ಜೊತೆ ಎನ್ನಲಾಗುತ್ತಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ