• Home
  • »
  • News
  • »
  • entertainment
  • »
  • Kantara Movie Varaha Roopam Song: ವರಾಹ ರೂಪಂ ಹಾಡು ಬಳಸಬಹುದು, ಆದರೆ..! ತೈಕ್ಕುಡಂ ಬ್ರಿಡ್ಜ್​ ತಂಡ ಹೇಳಿದ್ದೇನು?

Kantara Movie Varaha Roopam Song: ವರಾಹ ರೂಪಂ ಹಾಡು ಬಳಸಬಹುದು, ಆದರೆ..! ತೈಕ್ಕುಡಂ ಬ್ರಿಡ್ಜ್​ ತಂಡ ಹೇಳಿದ್ದೇನು?

'ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ

'ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ವಿವಾದದ ಕುರಿತಂತೆ 'ತೈಕ್ಕುಡಂ ಬ್ರಿಡ್ಜ್​’ ತಂಡದ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹೆಜ್ಜೆ ಹಿಂದಕ್ಕೆ ಇಡುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.

  • Share this:

ಎಲ್ಲೆಡೆ ಕಾಂತಾರ (Kantara) ಸಿನಿಮಾದ ಅಬ್ಬರ ಮುಂದುವರೆದಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ (Box Office) ಕಾಂತಾರ ಸದ್ದು ಮುಂದುವರೆದಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡಿಗೆ (Varaha roopam) ವಿವಾದ ಸುತ್ತಿಕೊಂಡಿತ್ತು. ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh Loknath) ಅವರು ಮಲಯಾಳಂ ಭಾಷೆಯ (Malayalam) ‘ನವರಸಂ..’ ಹಾಡಿನಿಂದ (Navarasam Somb) ಕಾಪಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಲಯಾಳಂನ  ‘ತೈಕ್ಕುಡಂ ಬ್ರಿಡ್ಜ್​’ (Thaikkudam Bridge) ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ (Kozhikode court in Kerala), ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಇದೀಗ ವರಾಹ ರೂಪಂ ಹಾಡಿನ ವಿವಾದದ ಕುರಿತಂತೆ ಖುದ್ದು ಮಲಯಾಳಂನ  ‘ತೈಕ್ಕುಡಂ ಬ್ರಿಡ್ಜ್​’ ತಂಡ ಪ್ರತಿಕ್ರಿಯೆ ನೀಡಿದೆ.


ಮ್ಯೂಸಿಕ್‌ನ ಕ್ರೆಡಿಟ್ ಕೊಡುವಂತೆ ಬೇಡಿಕೆ


ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ವಿವಾದದ ಕುರಿತಂತೆ ತೈಕ್ಕುಡಂ ಬ್ರಿಡ್ಜ್​’ ತಂಡದ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನಮ್ಮ ಹಾಡಿಗೆ ಕ್ರೆಡಿಟ್ ಕೊಟ್ಟರೆ, ಈ ಹಾಡು ಬಳಸಲು ತೊಂದರೆಯಿಲ್ಲ ಎಂದಿದ್ದಾರೆ.


“ಕಾಂತಾರ ತಂಡದ ನಿರ್ಧಾರ ತುಂಬಾನೇ ಮುಖ್ಯ”


‘ಕೇರಳದ ಕೋಝಿಕೋಡ್‌ ಸೆಷನ್ಸ್‌ ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಯಾನ್ ಫರ್ನಾಂಡಿಸ್ ಹೇಳಿದ್ದಾರೆ.


ಇದನ್ನೂ ಓದಿ: Kantara Movie Varaha Roopam Song: ಕಾಂತಾರಕ್ಕೆ ಶಾಕ್ ಕೊಟ್ಟ ಕೇರಳ ಕೋರ್ಟ್, ವರಾಹ ರೂಪಂ ಹಾಡು ಬಳಸದಂತೆ ಸೂಚನೆ!


ವಿಯಾನ್ ಫನಾಂಡಿಸ್ ಆರೋಪ


ಸಿನಿಮಾಗಳಲ್ಲಿ ಕೆಲವು ಹಾಡುಗಳ ಮಧ್ಯೆ ಹೋಲಿಕೆ ಇರುತ್ತದೆ. ಅದು ಸಾಮಾನ್ಯ. ಹೀಗಾಗಿ, ಆರಂಭದಲ್ಲಿ ಈ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಕಾಮೆಂಟ್​ಗಳು, ಮೆಸೇಜ್​ಗಳು, ದೂರವಾಣಿ ಕರೆಗಳು ನಮಗೆ ಬರುತ್ತಲೇ ಇದ್ದೆವು. ಬಳಿಕ ಪರಿಶೀಲನೆ ಮಾಡಿದಾಗ ಅದು ನಿಜವಾಗಿತ್ತು. ಹೀಗಾಗಿ ಕಾಂತಾರ ಸಿನಿಮಾದ ಮೇಲೆ ಕೇಸ್ ಹಾಕಿದೆವು. ಯೂಟ್ಯೂಬ್ ಚಾನೆಲ್​​ನಲ್ಲಿ ‘ವರಾಹ ರೂಪಂ..’ ಹಾಡಿಗೆ ಬಂದ ಅನೇಕ ಕಾಮೆಂಟ್​ಗಳನ್ನು ಡಿಲೀಟ್ ಮಾಡಲಾಗಿದೆ ಅಂತಲೂ ವಿಯಾನ್ ಆರೋಪಿಸಿದ್ದಾರೆ.


“ಹಾಡಿನಲ್ಲಿ ನಮ್ಮ ಬ್ಯಾಂಡ್‌ ಉಲ್ಲೇಖಿಸಬೇಕಿತ್ತು”


ಇನ್ನು ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್​ನ ಸ್ಥಾಪಕರಲ್ಲೊಬ್ಬರಾದ ಗೋವಿಂದ್ ವಸಂತ್ ಅವರನ್ನು ಸಂಪರ್ಕಿಸಿದ್ದರು. ನಮ್ಮ ಮ್ಯಾನೇಜ್​ಮೆಂಟ್ ನವರು ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದೆ. ಈ ಚಿತ್ರ ರಿಲೀಸ್​ಗೂ ಮೊದಲು ಅವರು ನಮ್ಮ ಜತೆ ಮಾತನಾಡಿ, ಹಾಡಿನಲ್ಲಿ ನಮ್ಮ ಬ್ಯಾಂಡ್​ನ ಉಲ್ಲೇಖ ಮಾಡಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ. ಅಲ್ಲದೇ ನಾವು ಕೋರ್ಟ್‌ ಕೇಸ್ ಸಹ ಹಾಕುತ್ತಿರಲಿಲ್ಲ ಎಂದಿದ್ದಾರೆ.


ಇದನ್ನೂ ಓದಿ: Kantara New Record: ಕನ್ನಡದ ಹಿಟ್ ಚಿತ್ರಗಳ ರೆಕಾರ್ಡ್ ಮುರಿದ ಕಾಂತಾರ


“ಹೆಜ್ಜೆ ಹಿಂದಕ್ಕೆ ಇಡುವ ಪ್ರಶ್ನೆಯೇ ಇಲ್ಲ”


“ಸ್ವತಂತ್ರ ಬ್ಯಾಂಡ್ ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಅಧಿಕಾರ ಮತ್ತು ಹಣದಿಂದ ಅವರು ಅದರಿಂದ ಪಾರಾಗಬಹುದು ಎಂದು ಅವರು ಭಾವಿಸುತ್ತಾರೆ. ನಮಗೆ, ಇದು ಇಡೀ ಇಂಡೀ ಸಂಗೀತದ ದೃಶ್ಯಕ್ಕೆ ಒಂದು ಉದಾಹರಣೆಯಾಗಿದೆ. ಯಾವುದೇ ನಿರ್ಧಾರವಾಗಲಿ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹೆಜ್ಜೆ ಹಿಂದಕ್ಕೆ ಇಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ಮುಂದೆ ಹೆಜ್ಜೆ ಹಾಕಿದ್ದೇವೆ ಎಂಬ ತೃಪ್ತಿ ನಮಗಿರುತ್ತದೆ ಅಂತ ವಿಯಾನ್ ಫರ್ನಾಂಡಿಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Published by:Annappa Achari
First published: