• Home
  • »
  • News
  • »
  • entertainment
  • »
  • Kantara Movie: ಕಾಂತಾರಗೆ ಕಂಟಕ! ವರಾಹರೂಪಂ ಟ್ಯೂನ್ ಕಾಪಿ, ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್​​ನಿಂದ ಕಾನೂನು ಹೋರಾಟ

Kantara Movie: ಕಾಂತಾರಗೆ ಕಂಟಕ! ವರಾಹರೂಪಂ ಟ್ಯೂನ್ ಕಾಪಿ, ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್​​ನಿಂದ ಕಾನೂನು ಹೋರಾಟ

ನವರಸಂ-ವರಾಹ ರೂಪಂ

ನವರಸಂ-ವರಾಹ ರೂಪಂ

ಕಾಂತಾರ ಸಿನಿಮಾ ಎದುರಿಸಿದ್ದ ಟ್ಯೂನ್ ಕಾಪಿ ವಿಚಾರ ಈಗ ಮತ್ತೆ ಸದ್ದು ಮಾಡಿದ್ದು ಈ ಬಾರಿ ಸಾಂಗ್​ನ ಒರಿಜಿನಲ್ ಟ್ಯೂನ್ ಮಾಡಿರುವ ತೈಕ್ಕುಡಂ ಬ್ರಿಡ್ಜ್ ಕಾಂತಾರ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ (Cinema) ಸೂಪರ್ ಹಿಟ್ ಆಗಿದೆ. ದೇಶಾದ್ಯಂತ ಸಿನಿಮಾ ಭಾರೀ ಹವಾ ಸೃಷ್ಟಿಸಿದ್ದು ಇದು ಹೊಂಬಾಳೆ (Hombale Films) ನಿರ್ಮಾಣದ ಕರ್ನಾಟಕದಲ್ಲಿ (Karnataka) ಅತ್ಯಧಿಕ ವೀಕ್ಷಿಸಲ್ಪಟ್ಟ ಸಿನಿಮಾ ಎನ್ನುವ ಹಿರಿಮೆಗೂ ಪಾತ್ರವಾಗಿದೆ. ಈ ಹಿಂದೆ ಸಿನಿಮಾ ಎದುರಿಸಿದ್ದ ಟ್ಯೂನ್ ಕಾಪಿ  (Tune Copy) ವಿಚಾರ ಈಗ ಮತ್ತೆ ಸದ್ದು ಮಾಡಿದ್ದು ಈ ಬಾರಿ ಸಾಂಗ್​ನ ಒರಿಜಿನಲ್ ಟ್ಯೂನ್ ಮಾಡಿರುವ ತೈಕ್ಕುಡಂ ಬ್ರಿಡ್ಜ್ (Thaikkudam Bridge) ಕಾಂತಾರ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ತಮ್ಮ ಟ್ಯೂನ್ ಕದ್ದಿರುವ ವಿಚಾರವಾಗಿ ಹಾಗೂ ಅದನ್ನು ಎಲ್ಲಿಯೂ ಮೆನ್ಶನ್ ಮಾಡದೆ ಇರುವ ಹಿನ್ನೆಲೆಯಲ್ಲಿ ತೈಕ್ಕುಡಂ ಬ್ರಿಡ್ಜ್ ಕಾನೂನಾತ್ಮಕವಾಗಿ (Legal action) ಈ ವಿಚಾರವನ್ನು ಎದುರಿಸಲು ಸಿದ್ಧತೆ ನಡೆಸಿದೆ. ಇದೀಗ ಈ ಬಗ್ಗೆ ತನ್ನ ಅಧಿಕೃತ ಫೇಸ್​ಬುಕ್ (Facebook) ಪೇಜ್​ನಲ್ಲಿ ತೈಕ್ಕುಡಂ ಬಿಡ್ಜ್ ಅಪ್ಡೇಟ್ ಕೂಡಾ ಕೊಟ್ಟಿದೆ.


ತೈಕ್ಕುಡಂ ಬ್ರಿಡ್ಜ್ ಪೋಸ್ಟ್ ಏನಿದೆ?


ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರ ತಂಡದೊಂದಿಗೆ ಪಾಲುದಾರಿಕೆ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ನಾವು ತಿಳಿಸುತ್ತಿದ್ದೇವೆ. ಆಡಿಯೋ ವಿಷಯದಲ್ಲಿ ನಮ್ಮ ಹಾಡು "ನವರಸಂ" ಮತ್ತು "ವರಾಹ ರೂಪಂ" ನಡುವಿನ  ಹೋಲಿಕೆಗಳು ಕಂಡುಬಂದಿದ್ದು ಇಲ್ಲಿ ಕಾಪಿ ರೈಟ್ ಕಾನೂನುಗಳು  ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.




ನಮ್ಮ ಪ್ರಕಾರ "ಪ್ರೇರಿತ" ಮತ್ತು "ಚೌಕಟ್ಟಿನ" ನಡುವಿನ ವ್ಯತ್ಯಾಸವು ವಿಭಿನ್ನವಾಗಿದೆ. ಇದು ನಿರ್ವಿವಾದವಾದ ವಿಚಾರ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಬಯಸುತ್ತೇವೆ. ಸಿನಿಮಾ ತಂಡವು ಹಾಡನ್ನು ಅವರ ಮೂಲ ಕೃತಿಯಾಗಿ ಪ್ರಚಾರ ಮಾಡಿದ್ದಾರೆ.




ನಮ್ಮ ಕೇಳುಗರ ಬೆಂಬಲವನ್ನು ನಾವು ಕೇಳುತ್ತಿದ್ದೇವೆ. ಅದರ ಬಗ್ಗೆ ಪ್ರಚಾರ ಮಾಡಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಮ್ಯೂಸಿಕ್ ಕಾಪಿ ಮಾಡುವ ಕಾಪಿ ರೈಟ್ಸ್ ರಕ್ಷಿಸುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ ಎಂದು ಪೋಸ್ಟ್ ಮಾಡಲಾಗಿದ್ದು ಇದರಲ್ಲಿ ಹೊಂಬಾಳೆ ಫಿಲ್ಮ್ಸ್, ಅಜನೀಶ್ ಲೋಕನಾಥ್, ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಲಾಗಿದೆ.


ಟ್ಯೂನ್ ಕಾಪಿ ಚರ್ಚೆ-5 ವರ್ಷ ಹಳೆಯ ಮಲಯಾಳಂ ಟ್ಯೂನ್ ಕದ್ದರಾ?


ರಿಷಬ್ ಶೆಟ್ಟಿಯ ಕಾಂತಾರಾ ಸಿನಿಮಾ ಫೇಮಸ್​ ಟ್ಯೂನ್​ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಬಹಳಷ್ಟು ಜನರು ಈ ಹಾಡಿನ ಟ್ಯೂನ್ ಹೋಲುವ ಮಲಯಾಳಂ ಹಾಗೂ ಮರಾಠಿ ಹಾಡುಗಳ ಒರಿಜಿನಲ್ ಕ್ಲಿಪ್​ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಈಗ ಸಿನಿಮಾದ ಸಾಂಗ್ ಕಾಪಿ ಗದ್ದಲ ಶುರುವಾಗಿತ್ತು.


ಇದನ್ನೂ ಓದಿ: Kantara: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್




ಹೊಂಬಾಳೆ ಈ ಹಾಡು ರಿಲೀಸ್ ಮಾಡಿಲ್ಲ


ಸಖತ್ ಹಿಟ್ ಆದ ಈ ಹಾಡನ್ನು ಹೊಂಬಾಳೆ ಯುಟ್ಯೂಬ್​ ಚಾನೆಲ್​ನಲ್ಲಿ ರಿಲೀಸ್​ ಮಾಡಿಲ್ಲ. ಅಜನೀಶ್​ ಲೋಕನಾಥ್​ ತಮ್ಮ ವೈಯಕ್ತಿಕ ಚಾನೆಲ್​ನಲ್ಲಿ ಈ ಸಾಂಗ್​ ರಿಲೀಸ್ ಮಾಡಿದ್ದಾರೆ. ಹೀಗಾಗಿ ಈ ಹಾಡಿನ ಮೇಲೆ ಸಾಕಷ್ಟು ಅನುಮಾನ ಮೂಡಿಸಿದೆ.




ಇದನ್ನೂ ಓದಿ: Nayantara: ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ ನಯನತಾರಾ


ವಿವಾದ ನಡುವಲ್ಲಿ ಸಾಂಗ್


ಅಜನೀಶ್ ಅವರು ಈ ಹಿಂದೆ ಸ್ಪಷ್ಟನೆ ಕೊಟ್ಟು ಇದು ಕಾಪಿ ಅಲ್ಲ ಎಂದಿದ್ದರು. ಹಾಗೆಯೇ ಮ್ಯೂಸಿಕ್ ಮಾಡಿದವರೇ ಸುಮ್ಮನಿದ್ದಾರೆ ಎಂದಿದ್ದರು. ಈಗ ಮ್ಯೂಸಿಕ್ ಮಾಡಿದವರೇ ಪ್ರಶ್ನೆ ಮಾಡಿದ್ದು ಈ ವಿಚಾರ ಇನ್ನಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ.

Published by:Divya D
First published: