• Home
  • »
  • News
  • »
  • entertainment
  • »
  • Kantara Song Controversy: ತೈಕ್ಕುಡಂ ಬ್ರಿಡ್ಜ್ ಕೇಸ್, ಕಾಂತಾರ ಸಾಂಗ್ ಡಿಲೀಟ್!

Kantara Song Controversy: ತೈಕ್ಕುಡಂ ಬ್ರಿಡ್ಜ್ ಕೇಸ್, ಕಾಂತಾರ ಸಾಂಗ್ ಡಿಲೀಟ್!

ಕಾಂತಾರ-ತೈಕ್ಕುಡಂ ಬ್ರಿಡ್ಜ್

ಕಾಂತಾರ-ತೈಕ್ಕುಡಂ ಬ್ರಿಡ್ಜ್

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ವಿರುದ್ಧ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕೇಸ್ ಸುದ್ದಿಯಾಗುತ್ತಲೇ ಇದೆ. ಇದೀಗ ಹಲವು ಫ್ಲಾಟ್​​ಫಾರ್ಮ್​ಗಳಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾದಲ್ಲಿ ಸಿನಿಮಾದಷ್ಟೇ (Kantara) ಹಾಡುಗಳೂ ಕೂಡಾ ಎಫೆಕ್ಟಿವ್ ಆಗಿವೆ. ವರಾಹ ರೂಪಂ (Varaha Roopam) ಹಾಗೂ ಸಿಂಗಾರ ಸಿರಿಯೇ (Singara Siriye), ಕರ್ಮದ ಕಲ್ಲು ಈ ಹಾಡುಗಳು ಸಖತ್ ಹಿಟ್ ಆಗಿವೆ. ಆದರೆ ವರಾಹ ರೂಪಂ ಹಾಡಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇತ್ತು. ಸಿನಿಮಾ ಹಿಟ್ ಆದಾಗ ವರಾಹ ರೂಪಂ ಹಾಡು ಎಲ್ಲರು ಗುನುಗುತ್ತಿದ್ದರು. ಡಿಫರೆಂಟ್ ಟ್ಯೂನ್ (Tune) ಹಾಗೂ ಲಿರಿಕ್ಸ್ ಇದ್ದ ಹಾಡು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಆದರೆ ಆ ನಂತರದಲ್ಲಿ ಹಾಡಿಗೆ ಕಾನೂನು ತೊಡಕುಗಳು ಶುರುವಾದವು. ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ (Thaikkudam Bridge) ತಮ್ಮ ಹಾಡಿನ ಟ್ಯೂನ್ ಕಾಪಿ ಮಾಡಿ ವರಾಹ ರೂಪಂನಲ್ಲಿ ಬಳಸಲಾಗಿದೆ ಎಂದು ಆರೋಪಿಸಿತು. ಹಾಗೆ ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಮುಂದಾಯಿತು. ಇದೀಗ ಪ್ರಕರಣ ಕೋರ್ಟ್ (Court) ಮೆಟ್ಟಿಲೇರಿದೆ.


ಸಿಕ್ಕಾಪಟ್ಟೆ ವೈರಲ್ ಆಗಿದ್ದ ಸಾಂಗ್ ಈಗ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್​​ಫಾರ್ಮ್​ಗಳಿಂದ ಡಿಲೀಟ್ ಆಗಿದೆ. ನವೆಂಬರ್ 11ರಿಂದ ಹಲವಾರು ಸೋಷಿಯಲ್ ಮೀಡಿಯಾದ ಅಕೌಂಟ್​​ಗಳಿಂದ ಈ ಹಾಡು ಡಿಲೀಸ್ ಆಗಿದ್ದು ಕೋರ್ಟ್ ಆದೇಶಕ್ಕೆ ಕಾಂತಾರ ತಂಡ ಈ ಕ್ರಮ ಕೈಗೊಂಡಿದೆಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.


ಮ್ಯೂಸಿಕ್ ಆ್ಯಪ್​​ಗಳಲ್ಲಿಲ್ಲ ಹಾಡು


ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್​​ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಈಗ ಹಾಡನ್ನು ಎಲ್ಲೆಡೆ ಡಿಲೀಟ್ ಮಾಡಲಾಗುತ್ತಿದೆ.


ಇದನ್ನೂ ಓದಿ: Kantara: ಕಾಂತಾರಕ್ಕೆ ತಪ್ಪದ ಕಂಟಕ! ಸಿನಿಮಾ ಪ್ರದರ್ಶಿಸದಂತೆ ದಲಿತ ಸಂಘಟನೆಗಳ ಆಗ್ರಹ


ಕೇರಳದ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಹಾಡನ್ನು ಬಳಸದಂತೆ ಕಾಂತಾರ ತಂಡಕ್ಕೆ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದ್ದು ಯೂಟ್ಯೂಬ್, ಮ್ಯೂಸಿಕ್ ಆ್ಯಪ್​ಗಳಾದ ಸಾವನ್, ಗಾನ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿದೆ.


ಸಾಂಗ್ ಕಾಪಿ ಮಾಡಿಲ್ಲ ಎನ್ನುವುದೇ ವಾದ


ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ಗಳಲ್ಲಿ ವರಾಹ ರೂಪಂ ಸಾಂಗ್ ಅಪ್​ಲೋಡ್ ಮಾಡಲಾಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್​ ಜಿಯೊ ಸಾವನ್​​ನಲ್ಲಿ ಈ ಹಾಡು ಕೇಳಲು ಲಭ್ಯವಿಲ್ಲ.
ಟ್ಯೂನ್ ಕದ್ದಿಲ್ಲ ಎಂದಿದ್ದ ಅಜನೀಶ್


ಅಜನೀಶ್ ಅವರು ಹಾಡಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಈ ಹಾಡನ್ನು ಕಾಪಿ ಮಾಡಿಲ್ಲ ಎಂದು ಹೇಳಿದ್ದರು. ರಾಗಗಳ ಭಿನ್ನವಾಗಿ ಎಂದು ಹೇಳಿದ್ದರು.


ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್


ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಯುವಕರ ತಂಡವಾಗಿದ್ದು ಇದಕ್ಕೆ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿವೆ. ಇದರಲ್ಲಿ ಬಹಳಷ್ಟು ಮ್ಯೂಸಿಕ್ ಸಾಂಗ್​​ಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಕೂಡಾ ಇದ್ದಾರೆ.


ಇದೇ ತಂಡ ನವರಸಂ ಎನ್ನುವ ಹಾಡನ್ನು ತಯಾರಿಸಿತ್ತು. ಈ ಹಾಡು ವರಾಹ ರೂಪಂ ಸಾಂಗ್​​ನ ಅದೇ ಟ್ಯೂನ್ ಹೋಲುತ್ತಿದ್ದು ಈ ಕಾರಣದಿಂದಲೇ ವಿವಾದ ಶುರುವಾಗಿದೆ. ನವರಸಂ ಹಾಡು ಸ್ವಲ್ಪ ನಿಧಾನವಾಗಿದ್ದರೆ ವರಾಹ ರೂಪಂ ಹಾಡು ಕೊಂಚ ವೇಗವಾಗಿ ಹೆಚ್ಚಿನ ಮ್ಯೂಸಿಕ್ ಬಳಸಿ ಮಾಡಿರುವಂತೆ ಕೇಳಿ ಬರುತ್ತದೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.

Published by:Divya D
First published: