News18 India World Cup 2019

ನಟ ರಣಬೀರ್​ ಕಪೂರ್​ ವಿರುದ್ಧ ದಾಖಲಾಯಿತು 50 ಲಕ್ಷದ ಪ್ರಕರಣ!

news18
Updated:July 22, 2018, 1:03 PM IST
ನಟ ರಣಬೀರ್​ ಕಪೂರ್​ ವಿರುದ್ಧ ದಾಖಲಾಯಿತು 50 ಲಕ್ಷದ ಪ್ರಕರಣ!
news18
Updated: July 22, 2018, 1:03 PM IST
ನ್ಯೂಸ್​ 18 ಕನ್ನಡ 

ಇಲ್ಲಿಯವರೆಗೆ ನಟ-ನಟಿಯರು ಬಾಡಿಗೆ ನೀಡದೆ ಸುದ್ದಿಯಾಗಿದ್ದು ಕೇಳಿದ್ದೀರಿ. ಆದರೆ ಈಗ ನಟ ರಣಬೀರ್​ ಕಪೂರ್​ ಅವರ ವಿರುದ್ಧ ಅವರ ಬಾಡಿಗೆದಾರರೊಬ್ಬರು 50 ಲಕ್ಷ ನಷ್ಟ ಅನುಭವಿರುವುದಾಗಿ ಮೊಕದ್ದಮೆ ದಾಖಲಿಸಿದ್ದಾರೆ.

ಪುಣೆಯ ಕಲ್ಯಾಣಿ ನಗರದಲ್ಲಿರುವ ಟ್ರಂಪ್​ ಟವರ್​ನಲ್ಲಿ 6094 ಚದರಡಿ ಇರುವ ಅಪಾರ್ಟ್​ಮೆಂಟ್​ ಇದ್ದು, ಅದರಲ್ಲಿ ಶೀತಲ್​ ಸೂರ್ಯವಂಶಿ ಬಾಡಿಗೆಗೆ ಇದ್ದರು. ರಣಬೀರ್​ ಕಪೂರ್​ ಮಾಲೀಕತ್ವದ ಈ ಅಪಾರ್ಟ್​ಮೆಂಟ್​ನಲ್ಲಿ ಶೀತಲ್​ 2016ರಿಂದ ಬಾಡಿಗೆಗೆ ಇದ್ದರು.

ಶೀತಲ್​ ಅವರನ್ನು ರಣಬೀರ್​ ಅವಧಿಗೂ ಮುನ್ನವೇ ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದಾಗಿ ಶೀತಲ್​ ಹಾಗೂ ಅವರ ಕುಟುಂಬದವರಿಗೆ ಸಾಕಷ್ಟು ತೊಂದರೆಯಾಗಿದ್ದು, ಇದರಿಂದ 50 ಲಕ್ಷ 40 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಪುಣೆಯ ಸಿವಿಲ್​ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಈ ಅಪಾರ್ಟ್​ಮೆಂಟ್​ನಲ್ಲಿ ಬಾಡಿಗೆಗೆ ಇರಲು 24 ತಿಂಗಳಿಗೆ ಕರಾರು ಮಾಡಿಸಲಾಗಿದ್ದು, ಈ ಅವಧಿ ಮುಗಿಯುವ ಮುನ್ನವೇ ಈಗ ಮನೆ ಖಾಲಿ ಮಾಡಿಸಲಾಗಿದೆ ಎಂದು ಶೀತಲ್​ ಆರೋಪಿಸಿದ್ದಾರೆ.

ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ರಣಬೀರ್​, 'ಶೀತಲ್​ ತಮ್ಮ ಇಚ್ಛೆಯಿಂದ ಮನೆ ಖಾಲಿ ಮಾಡಿದ್ದಾರೆ. ಅಲ್ಲದೆ ಮೂರು ತಿಂಗಳ ಬಾಡಿಗೆ ಕೊಡುವುದರಲ್ಲೂ ಸಮಸ್ಯೆ ಮಾಡಿದ್ದಾರೆ. ಈ ಹಣವನ್ನು ಅವರು ನೀಡಿರುವ ಮುಂಗಡ ಠೇವಣಿಯಲ್ಲಿ ಕಡಿತಗೊಳಿಸಿಲಾಗಿದೆ. ಇನ್ನೇನು ಈ ಪ್ರಕರಣದ ವಿಚಾರಣೆ ಆಗಸ್ಟ್​ 28ಕ್ಕೆ ಬರಲಿದೆ' ಎಂದಿದ್ದಾರೆ.  ​
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...