HOME » NEWS » Entertainment » TEMPLE DEDICATED TO SONU SOOD BY TELANGANA VILLAGERS FOR HIS NOBLE DEEDS AMID PANDEMIC HG

ಕಷ್ಟಕಾಲದಲ್ಲಿ ಸಹಾಯ ಮಾಡಿದ ನಟನಿಗೆ ದೇವಸ್ಥಾನ ಕಟ್ಟಿಸಿದ ಜನರು!

ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ದುಬ್ಬ ತಂಡ ಗ್ರಾಮದ ಜನರು ನಟ ಸೋನು ಸೂದ್​ ಮಾಡಿರುವ ಸಹಾಯವನ್ನು ನೆನೆದು ದೇವಸ್ಥಾನ ಕಟ್ಟಿಸಿದ್ದಾರೆ.

news18-kannada
Updated:December 21, 2020, 2:26 PM IST
ಕಷ್ಟಕಾಲದಲ್ಲಿ ಸಹಾಯ ಮಾಡಿದ ನಟನಿಗೆ ದೇವಸ್ಥಾನ ಕಟ್ಟಿಸಿದ ಜನರು!
ಸೋನು ಸೂದ್​​ ಪ್ರತಿಮೆ
  • Share this:
ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ದುಬ್ಬ ತಂಡ ಗ್ರಾಮದ ಜನರು ನಟ ಸೋನು ಸೂದ್​ ಮಾಡಿರುವ ಸಹಾಯವನ್ನು ನೆನೆದು ದೇವಸ್ಥಾನ ಕಟ್ಟಿಸಿದ್ದಾರೆ. ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಅನೇಕರು ಸಂಕಷ್ಟ ಎದುರಿಸಿದ್ದರು. ಆಹಾರ, ನೀರು, ವಸತಿಯಿಲ್ಲದೆ ಪರದಾಡಿದ್ದರು. ಈ ಸಮಯಲ್ಲಿ ಬಾಲಿವುಡ್​​ ಖ್ಯಾತ ನಟ ಸೋನು ಸೂದ್​ ಸಂಕಷ್ಟದಲ್ಲಿದ್ದವರ ಸಹಾಯಕ್ಕೆ ಬೆನ್ನೆಲುಬಾಗಿ ನಿಂತಿರು. ಅವರಿಗೆ ನೀರು, ಆಹಾರ ಒದಗಿಸುವ ಮಾತ್ರವಲ್ಲದೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದರು. ಇವರ ಸಹಾಯವನ್ನು ಅನೇಕರು ಸ್ಮರಿಸಿದ್ದಾರೆ. ಇದೀಗ ತೆಲಂಗಾಣದ ಜನರು ಸೋನು ಸೂದ್​ ಮಾಡಿರುವ ಸಹಾಯಕ್ಕೆ ದೇವಸ್ಥಾನವನ್ನು ಕಟ್ಟಿಸಿ ಧನ್ಯವಾದ ತಿಳಿಸಿದ್ದಾರೆ.

ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ದುಬ್ಬ ತಂಡ ಗ್ರಾಮದ ಜನರು ನಟ ಸೋನು ಸೂದ್​ ಮಾಡಿರುವ ಸಹಾಯವನ್ನು ನೆನೆದು ದೇವಸ್ಥಾನ ಕಟ್ಟಿಸಿದ್ದಾರೆ. ಮಾತ್ರವಲ್ಲದೆ ಅವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದ್ದಾರೆ.

ಜಿಲ್ಲಾ ಪರಿಷತ್​ ಸದಸ್ಯರಾಗಿರುವ ಗಿರಿ ಕೊಂಡಲ್​ ರೆಡ್ಡಿ ಈ ಬಗ್ಗೆ ಮಾತನಾಡಿ, ‘ಕೊರೋನಾ ಲಾಕ್​ಡೌನ್​ ಸಮಯದಲ್ಲಿ ನಟ ಸೋನು ಸೂದ್​​ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅನೇಕರನ್ನು ಮರಳಿ ತವರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಸಂಕಷ್ಟಕ್ಕೆ ನೆರವಾಗಿದ್ದಾರೆ. ಹಾಗಾಗಿ ಸೋನು ಮಾಡಿರುವ ಸಹಾಯವನ್ನು ನೆನೆದು ದೇವಸ್ಥಾನ ಕಟ್ಟಲಾಗಿದೆ’ ಎಂದು ಹೇಳಿದರು.

ಇನ್ನು ದೇವಸ್ಥಾನ ಕಟ್ಟುವ ಗುಂಪಿನಲ್ಲಿದ್ದ ರಮೇಶ್​​ ಕುಮಾರ್​ ಈ ಬಗ್ಗೆ ಮಾತನಾಡಿ, ಸೋನು ಸೂದ್​ ಸುಮಾರು 28 ರಾಜ್ಯದ ಜನರಿಗೆ ಸಹಾಯ ಮಾಡಿದ್ದಾರೆ. ಮಾನವೀಯ ಕಾರ್ಯ ಮೆರೆದ ಅವರಿಗೆ ಕೆಲವು ಪ್ರಶಸ್ತಿಗಳು ಸಿಕ್ಕಿವೆ ಎಂದಿ ಹೇಳಿದರು.

ನಂತರ ಮಾತು ಮುಂದುವರಿಸಿದ ಅವರು, ಲಾಕ್​ಡೌನ್​ ಸಮಯದಲ್ಲಿ ಅನೇಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸೋನು ಸೂದ್​ ಸಹಾಯಕ್ಕೆ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ವಿಶ್ವಸಂಸ್ಥೆ ಸೋನು ಸೂದ್​ ಅವರಿಗೆ ವಿಶೇಷ ಮಾನವೀಯ  ಕ್ರಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಷ್ಟೆಲ್ಲ ಸಹಾಯ ಮಾಡಿದ ಸೋನು ಅವರಿಗೆ ನಾವು ದೇವಸ್ಥಾನ ನಿರ್ಮಿಸಲು ನಿರ್ಧರಿಸಿದೆವು ಎಂದು ಹೇಳಿದರು.

ಲಾಕ್​ಡೌನ್​ ಸಮಯದಲ್ಲಿ ಸೋನು ಸೂದ್​ ವಿಮಾನ, ಬಸ್ಸಿನ ಮೂಲಕ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಇವರ ಸಹಾಯವನ್ನು ನೆನೆದು ಅನೇಕರು ಸೋನು ಸೂದ್​ ಹೆಸರಿನಲ್ಲಿ ಅಂಗಡಿಗಳಿಗೆ ಹೆಸರಿಟ್ಟಿದ್ದಾರೆ. ಕೆಲವರು ಪೂಜೆ ಸಲ್ಲಿಸಿದ್ದಾರೆ. ಅದರಂತೆ ತೆಲಂಗಾಣದ ದುಬ್ಬು ತಂಡ ಗ್ರಾಮದ ಜನರು ದೇವಸ್ಥಾನ ನಿರ್ಮಿಸಿ ಅವರ ಸಹಾಯವನ್ನು ನೆನೆದಿದ್ದಾರೆ.
Published by: Harshith AS
First published: December 21, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories