Chandan Kumar: ತೆಲುಗಿನಲ್ಲಿ ಬ್ಯಾನ್​ ಆಗಿದ್ದಾರಾ ಚಂದನ್​? ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಕೊಟ್ಟ ಲೆಟರ್​!

Serial Actor Chandan Kumar: ತೆಲುಗು ಸೀರಿಯಲ್ ಒಂದರ ಚಿತ್ರೀಕರಣ ನಡೆಯುತ್ತಿತ್ತು. ಆಗ ಸಹಾಯಕ‌ ನಿರ್ದೇಶಕ 3 ರಿಂದ 4 ಬಾರಿ ಶಾಟ್‌ಗೆ ಬರುವಂತೆ ಚಂದನ್‌ಗೆ ತಿಳಿಸಿದ್ದಾರೆ. ಆಗ ಚಂದನ್, ಹೇಳಿದ್ದನ್ನೇ ಎಷ್ಟು ಬಾರಿ ಹೇಳ್ತೀಯಾ ಅಂತ ಜಗಳ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕಿರುತೆರೆ ನಟ ಚಂದನ್ ಕುಮಾರ್

ಕಿರುತೆರೆ ನಟ ಚಂದನ್ ಕುಮಾರ್

  • Share this:
ತೆಲುಗಿನ ಸೀರಿಯಲ್ ಸೆಟ್‌ನಲ್ಲಿ ಕನ್ನಡ ನಟ ಚಂದನ್‌ ಮೇಲೆ ಹಲ್ಲೆ ವಿಚಾರವಾಗಿ ಈಗಾಗಲೇ ಹಲವಾರು ಸುದ್ದಿಗಳು ಹರಿದಾಡಿದೆ. ಚಂದನ್ ಸಹ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಡದ ತಪ್ಪಿಗೆ ತನ್ನ ಮೇಲೆ ತೆಲುಗು ಸೀರಿಯಲ್ ಸೆಟ್‌ನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ಈ ಕಾರಣದಿಂದ ನಾನು ಮತ್ತೆಂದೂ ತೆಲುಗಿನ ಸಿರೀಯಲ್‌ಗೆ ಹೋಗಲ್ಲ ಎಂದು ಚಂದನ್ ಹೇಳಿದ್ದರು. ಆದರೆ ಇದೀಗ ತೆಲುಗಿನ ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ಬರೆದಿರುವ ಪತ್ರವೊಂದು ವೈರಲ್​ ಆಗಿದ್ದು, ಈ ಕಥೆಗೆ ಬೇರೆ ಟ್ವಿಸ್ಟ್​ ಸಿಕ್ಕಿದೆ.

ಪ್ರಕರಣಕ್ಕೆ ಹೊಸ ತಿರುವು

ಹೌದು, ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್​ ತೆಲುಗು‌ ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ ಮನವಿ ಪತ್ರ ಬರೆದಿದೆ. ಆ ಪತ್ರದಲ್ಲಿ ನಟ ಚಂದನ್‌ ಅವರನ್ನು ತೆಲುಗು ಸೀರಿಯಲ್ ಮತ್ತು ಒಟಿಟಿಗಳಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಇನ್ನು ಅವರ ಪತ್ರದಲ್ಲಿ ಈ ಘಟನೆಯನ್ನು ವಿವರಿಸಿದ್ದು, ಬೇರೆಯದೇ ಸ್ಟೋರಿ ಹೊರ ಬಂದಿದೆ.ತೆಲುಗು ಸೀರಿಯಲ್ ಒಂದರ ಚಿತ್ರೀಕರಣ ನಡೆಯುತ್ತಿತ್ತು. ಆಗ ಸಹಾಯಕ‌ ನಿರ್ದೇಶಕ 3 ರಿಂದ 4 ಬಾರಿ ಶಾಟ್‌ಗೆ ಬರುವಂತೆ ಚಂದನ್‌ಗೆ ತಿಳಿಸಿದ್ದಾರೆ. ಆಗ ಚಂದನ್, ಹೇಳಿದ್ದನ್ನೇ ಎಷ್ಟು ಬಾರಿ ಹೇಳ್ತೀಯಾ ಅಂತ ಜಗಳ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಹಾಯಕ ನಿರ್ದೇಶಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪತ್ರದ ವಿಚಾರ ಹೊರ ಬಂದ ಬೆನ್ನಲ್ಲೆ ಚಂದನ್ ಪ್ರೆಸ್ ಮೀಟ್ ಮಾಡೋದಕ್ಕೆ ಮೊದಲೇ ಬ್ಯಾನ್ ಆಗಿದ್ರಾ ಎಂಬ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಬ್ಲಾಕ್​ ಡ್ರೆಸ್​ನಲ್ಲಿ ಮಿರಿ ಮಿರಿ ಮಿಂಚಿದ ಊರ್ವಶಿ, ನಟಿ ನೋಡಿ ಕ್ಲೀನ್ ಬೋಲ್ಡ್ ಆದ ಫ್ಯಾನ್ಸ್

ಚಂದನ್​ ಹೇಳಿದ್ದೇನು?

ಇನ್ನು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಚಂದನ್ ಹೇಳಿದ್ದೇ ಬೇರೆ.  ಶೂಟಿಂಗ್​ ವೇಳೆ ಲಂಚ್ ಬ್ರೇಕ್ ನಲ್ಲಿ ನಿದ್ದೆ ಮಾಡೋಕೆ ಹೋದೆ. ಆದ್ರೆ ನಂಗೆ ಅಸಿಸ್ಟೆಂಟ್ ಡೈರೆಕ್ಟರ್ ತುಂಬಾ ಕಿರಿಕಿರಿ ಮಾಡ್ತಾ ಇದ್ರು. ನನ್ನನ್ನು ರೆಸ್ಟ್ ಮಾಡೋಕೆ ಬಿಟ್ಟಿಲ್ಲ. 5 ನಿಮಿಷ ಅಂತ ಹೇಳಿ 30ನಿಮಿಷ ಮಲ್ಕೊಂಡ ಅಂತ ಜೋರಾಗಿ ಕೂಗಿದ. ಬಳಿಕ ನಾನೇ ಅವನನ್ನು ಪಕ್ಕಕ್ಕೆ ಕರೆದು ಏನು ಎಂದು ಕೇಳಿದೆ. ಈ ವೇಳೆ ತಮಾಷೆಗೆ ಆತನನ್ನು ತಳ್ಳಿದ್ದೀನಿ. ನಾನು ಅವನ ಜೊತೆ ತುಂಬಾ ಕ್ಯಾಶುಯಲ್ ಆಗಿ ಇದ್ದೆ, ಪಾರ್ಟಿ ಮಾಡಿದ್ವಿ ಆದ್ರೆ ಆತ ಅಲ್ಲಿ ಹೋಗಿ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾನೆ ಎಂದಿದ್ದಾರೆ.

serial actor chandan kumar attack issue one note is circulating in WhatsApp by someone

ನಿಮ್ಮ ಅಮ್ಮನಿಗೆ ನನ್ನ ಅಮ್ಮನ ಪರಿಸ್ಥಿತಿ ಬಂದ್ರೆ ಏನ್ ಮಾಡ್ತಾ ಇದ್ದೆ ಅಂತ ಕೇಳ್ದೆ ಅಷ್ಟೇ, ಅದನ್ನ ಈ ರೀತಿ ದೊಡ್ಡದು ಮಾಡಿದ್ದಾರೆ ನಮ್ಮ ಡೈರೆಕ್ಟರ್ ತುಂಬಾ ಕ್ಲೋಸ್ ಆಗಿದ್ದಾರೆ. ಈಗಲೂ ಸಂಪರ್ಕದಲ್ಲಿ ಇದ್ದಾರೆ. ಒಬ್ಬ ಹೇಳ್ತಾನೆ ರಾಡ್ ತಗೊಂಡ್ ಹೊಡಿತ್ತೀನಿ ಅಂತ. ಯಾರು ವಿಡಿಯೋ ವೈರಲ್ ಮಾಡಿದ್ರು ಗೊತ್ತಿಲ್ಲ ನಾನು ಸೀರಿಯಲ್ ಕಂಟಿನ್ಯೂ ಮಾಡೋದಿಲ್ಲ ಎಂದು ಚಂದನ್​ ಹೇಳಿದ್ದಾರೆ.

ಇದನ್ನೂ ಓದಿ: ನಟ ಚಂದನ್ ಕುಮಾರ್​ ಹೇಳ್ತಿರೋದೆಲ್ಲಾ ಸುಳ್ಳಾ? ವಾಟ್ಸಪ್​ನಲ್ಲಿ ಹರಿದಾಡ್ತಿದೆ ಒಂದಿಷ್ಟು ಪ್ರಶ್ನೆಗಳು!

ನೆಕ್ಸ್ಟ್ ಲೆವೆಲ್​ಗೆ ನಾನು ಗೆದ್ದು ತೋರಿಸ್ತೀನಿ. ಅವರ ತರ ನಾನು ಏನು ಮಾಡಲ್ಲ. ಕನ್ನಡ ನಟನಿಗೆ ಅವಮಾನ ಮಾಡಿದ್ದಕ್ಕೆ sorry ಕೇಳಲಿ, ನನ್ನನ್ನು ತುಂಬಾ ಹೊತ್ತು ಕಾಯಿಸಿದ್ದಾರೆ. ಆ ಮೇಲೆ ಎಲ್ಲಾ ಒಟ್ಟಿಗೆ ಬಂದು ತುಂಬಾ ರೂಡ್ ಆಗಿ ಮಾತಾಡಿದ್ರು. ಯಾರು ಕೂಡ ನನ್ನ ಬೆಂಬಲಕ್ಕೆ ನಿಂತಿಲ್ಲ. ಒಬ್ಬ ಮನುಷ್ಯನನ್ನು ಹೀಗೆ ಅವಮಾನ ಮಾಡಿದ್ದು ಸರಿ ಇಲ್ಲ. ನಾನು ಹಿಡಿದು ತಳ್ಳಿದ್ದು ಅಷ್ಟೇ. ಅದನ್ನೇ ದೊಡ್ಡ ಮಟ್ಟದಲ್ಲಿ ಕ್ರಿಯೇಟ್ ಮಾಡಿದ್ರು ಎಂದು ಚಂದನ್​ ಹೇಳಿದ್ದಾರೆ.
Published by:Sandhya M
First published: