Mahesh Babu Audi Car: ಮಹೇಶ್ ಬಾಬು ಕೊಂಡ 1.19 ಕೋಟಿಯ ಹೊಸ ಕಾರಲ್ಲಿ ನೀವೂ ಒಮ್ಮೆ ಸವಾರಿ ಮಾಡಿ!

ಈ ಕಾರು ಎರಡು ದೊಡ್ಡ ಎಂಎಂಐ ಟಚ್ ಸ್ಕ್ರೀನ್ ಗಳು ಮತ್ತು ಆಡಿ ವರ್ಚುವಲ್ ಕಾಕ್ಪಿಟ್ ನೊಂದಿಗೆ ಸ್ವೀಪಿಂಗ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಸ್ಪರ್ಶ ಪರದೆಗಳು ಹ್ಯಾಪ್ಟಿಕ್ ಮತ್ತು ಆಡಿಯೊ ಪ್ರತಿಕ್ರಿಯೆಯನ್ನು ಒಳಗೊಂಡಿದೆ.

ಹೊಸ ಕಾರಿನ ಎದುರು ಮಹೇಶ್ ಬಾಬು

ಹೊಸ ಕಾರಿನ ಎದುರು ಮಹೇಶ್ ಬಾಬು

  • Share this:
ತೆಲುಗು ಚಿತ್ರೋದ್ಯಮದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಏನೇ ಮಾಡಿದರೂ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಮತ್ತು ಸ್ಟೈಲ್ ಇರುತ್ತದೆ ಎಂದು ಅವರ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಕರೆದು ಹೇಳಬೇಕಿಲ್ಲ. ಈಗಾಗಲೇ ನಟ ಮಹೇಶ್ ಅವರು ತಮ್ಮ ಮುಂದಿನ ಚಿತ್ರವಾದ ‘ಸರ್ಕಾರು ವಾರಿ ಪಾಟಾ’ (Sarkaru Vaari Paata) ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಖ್ಯಾತ ನಟ ಈಗ ಸುದ್ದಿಯಲ್ಲಿರುವುದು ಅವರ ಹೊಸ ಆಡಿ ಇ-ಟ್ರಾನ್ (E-tron) ಖರೀದಿಸಿರುವುದರಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ಒಂದು ಎಲೆಕ್ಟ್ರಿಕ್ ಕಾರಾಗಿದ್ದು (Electric Car) ಇದರ ಬೆಲೆ ಭಾರತದಲ್ಲಿ 1.01 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗಿ 1.19 ಕೋಟಿ ರೂಪಾಯಿಗಳವರೆಗೆ ಇದೆ.

ಆಡಿ ಇ-ಟ್ರಾನ್ ನ ಅಧಿಕೃತ ವೆಬ್‌ಸೈಟ್, ಈ ಕಾರನ್ನು "484 ಕಿಲೋಮೀಟರ್ ವ್ಯಾಪ್ತಿಯೊಂದಿಗೆ, ನಮ್ಮ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿಯು ನಿಮ್ಮ ಸ್ಪೋರ್ಟಿ ಮತ್ತು ಸುರಕ್ಷಿತ ಸಂಗಾತಿಯಾಗಿದ್ದು, ಇದು ಹೊಸ ಯುಗದಲ್ಲಿ ದೈನಂದಿನ ಚಾಲನೆಗೆ ಸೂಕ್ತವಾಗಿದೆ" ಎಂದು ವ್ಯಾಖ್ಯಾನಿಸಿದೆ.

ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯ!
ಟಾಲಿವುಡ್ ನಟ ತನ್ನ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಸಿಹಿ ಸುದ್ದಿಯನ್ನು ಫೋಟೋದೊಂದಿಗೆ ಹಂಚಿ ಕೊಂಡಿದ್ದಾರೆ, ಕಾರಿನ ಪಕ್ಕದಲ್ಲಿ ಮಹೇಶ್ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ನಟ ಸಾಸಿವೆ ಹಳದಿ ಪೂರ್ಣ ತೋಳಿನ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿಕೊಂಡು ತಮ್ಮ ಹೊಸ ಕಾರಿನ ಮೇಲೆ ಕೈಯಿಟ್ಟು ಸಿಂಪಲ್ ಆಗಿ ಪೋಸ್ ನೀಡಿರುವುದನ್ನು ನಾವು ನೋಡಬಹುದು. ಮಹೇಶ್ ಬಾಬು ಈ ಫೋಟೋಗೆ "ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ಮನೆಗೆ ತರುವುದು. ಆಡಿ ಚಾಲನೆ ಅನುಭವಕ್ಕಾಗಿ ತುಂಬಾನೇ ಉತ್ಸುಕನಾಗಿದ್ದೇನೆ" ಎಂದು ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಮಹೇಶ್ ಬಾಬು ಅವರ ಹೊಸ ಕಾರಿನ ವಿಶೇಷತೆಗಳು
ವರದಿಗಳ ಪ್ರಕಾರ ಮಹೇಶ್ ಬಾಬು ಒಡೆತನದ ಆಡಿ ಇ-ಟ್ರಾನ್ ಪ್ಲಾಟಿನಂ ಗ್ರೇ ಫಿನಿಶ್ ನೊಂದಿಗೆ ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದೆ. 20-ಇಂಚಿನ ಗ್ರ್ಯಾಫೈಟ್ ಗ್ರೇ ಡೈಮಂಡ್-ಕಟ್ ಚಕ್ರಗಳಲ್ಲಿ ಚಲಿಸುತ್ತದೆ. ಎಲೆಕ್ಟ್ರಿಕ್ ವಾಹನದ ಹಿಂಭಾಗದಲ್ಲಿ ಎಲ್ಇಡಿ ಸ್ಟ್ರಿಪ್ ಗಳಿವೆ. ಇದು ವಾಹನಕ್ಕೆ ತುಂಬಾನೇ ಮೆರಗನ್ನು ನೀಡುತ್ತದೆ.

ಆಡಿ ಇ-ಟ್ರಾನ್ ನ ಆಯಾಮಗಳು
ಆಡಿ ಇ-ಟ್ರಾನ್ 5,014 ಮಿಲಿ ಮೀಟರ್ ಉದ್ದ, 1,686 ಮಿಲಿ ಮೀಟರ್ ಎತ್ತರ ಮತ್ತು 1,976 ಮಿಲಿ ಮೀಟರ್ ಅಗಲವನ್ನು ಹೊಂದಿದೆ. ಆಡಿ ಇ-ಟ್ರಾನ್ ನ ಮೂಲ ಪ್ರಭೇದವು 660 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದನ್ನು 1,725 ಲೀಟರ್ ಗಳವರೆಗೆ ವಿಸ್ತರಿಸಬಹುದು ಮತ್ತು ಹಿಂಭಾಗವನ್ನು ಮಡಚಬಹುದು. ಟಾಪ್ ರೂಪಾಂತರವು 615 ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ, ಇದನ್ನು ಹಿಂಭಾಗದ ಸೀಟುಗಳನ್ನು ಮಡಚಿದ ನಂತರ 1,665 ಲೀಟರ್ ಗಳಿಗೆ ವಿಸ್ತರಿಸಬಹುದು.

ಆಡಿ ಇ-ಟ್ರಾನ್ ವಿವರಗಳು
ಈ ಕಾರು ಎರಡು ದೊಡ್ಡ ಎಂಎಂಐ ಟಚ್ ಸ್ಕ್ರೀನ್ ಗಳು ಮತ್ತು ಆಡಿ ವರ್ಚುವಲ್ ಕಾಕ್ಪಿಟ್ ನೊಂದಿಗೆ ಸ್ವೀಪಿಂಗ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಸ್ಪರ್ಶ ಪರದೆಗಳು ಹ್ಯಾಪ್ಟಿಕ್ ಮತ್ತು ಆಡಿಯೊ ಪ್ರತಿಕ್ರಿಯೆಯನ್ನು ಒಳಗೊಂಡಿದೆ.

ಇದನ್ನೂ ಓದಿ: Ranbir-Alia Net Worth: ರಣಬೀರ್ ಕಪೂರ್-ಆಲಿಯಾ ಭಟ್ ನಿವ್ವಳ ಆಸ್ತಿ ಕಂಡು ಬೆಕ್ಕಸ ಬೆರಗಾಗಿ!

ಸ್ವಚ್ಛ ಮತ್ತು ಸುವ್ಯವಸ್ಥಿತ ಒಳಾಂಗಣ ವಾತಾವರಣವನ್ನು ಸೃಷ್ಟಿಸುತ್ತವೆ. ಇ-ಟ್ರಾನ್ ಗ್ರಾಹಕರ ಪ್ರಯೋಜನಗಳಲ್ಲಿ 8 ವರ್ಷಗಳು ಅಥವಾ 1,60,000 ಕಿಲೋ ಮೀಟರ್ ಬ್ಯಾಟರಿ ವ್ಯಾರಂಟಿ, 5 ವರ್ಷಗಳ ರಸ್ತೆಬದಿಯ ನೆರವು ಮತ್ತು 2 ಕಾಂಪ್ಲಿಮೆಂಟರಿ ಚಾರ್ಜರ್ ಗಳು ಸೇರಿವೆ.

ಇನ್ನೂ ಇದೆಲ್ಲಾ ಇದೆ!
3ಡಿ ಸರೌಂಡ್ ಸೌಂಡ್, ಆಂಬಿಯೆಂಟ್ ಲೈಟಿಂಗ್, ನಾಲ್ಕು ವಲಯ ಹವಾಮಾನ ನಿಯಂತ್ರಣ, 360 ಡಿಗ್ರಿ ಕ್ಯಾಮೆರಾ, ವಿಹಂಗಮ ಗಾಜಿನ ಸನ್​ರೂಫ್ ಮತ್ತು ಆಡಿ ಕನೆಕ್ಟ್ ಅಪ್ಲಿಕೇಶನ್ ಜೊತೆಗೆ ಎಂಟು ಏರ್ಬ್ಯಾಗ್ ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ 16-ಸ್ಪೀಕರ್ ಒಲುಫ್ಸೆನ್ ಆಡಿಯೊ ಸಿಸ್ಟಂ ಅನ್ನು ಸಹ ಇದು ಹೊಂದಿದೆc

ಇದನ್ನೂ ಓದಿ: Loan Alert: 10 ಲಕ್ಷ ಸಾಲ ನೀಡುವ ಯೋಜನೆ ಬಂದ್; ಬದಲಿ ಯೋಜನೆ ಇಲ್ಲಿದೆ!

ಈ ಕಾರು 71 ಕಿಲೋವ್ಯಾಟ್ ಬ್ಯಾಟರಿಯಿಂದ ಚಾಲಿತವಾಗಿದ್ದು, 308 ಎಚ್ ಪಿ ಮತ್ತು 540 ಎನ್ ಎಂ ಟಾರ್ಕ್ ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 6.8 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು. ಆಡಿ ಇ-ಟ್ರಾನ್ 190 ಕಿಲೋ ಮೀಟರ್ ವೇಗವನ್ನು ನೀಡುತ್ತದೆ. ಬಾಲಿವುಡ್ ನಟ ರಿತೇಶ್ ದೇಶ್‌ಮುಖ್, ನಟಿ ಪೂಜಾ ಬಾತ್ರಾ ಮತ್ತು ಉದ್ಯಮಿ ಮುಕೇಶ್ ಅಂಬಾನಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವ ಇತರ ಕೆಲವು ಸೆಲೆಬ್ರಿಟಿಗಳಾಗಿದ್ದಾರೆ.
Published by:guruganesh bhat
First published: