25 ವರ್ಷದ ಬಳಿಕ ಬಾಲಿವುಡ್​ಗೆ ವಿಕ್ಟರಿ ವೆಂಕಟೇಶ್​: ಸಲ್ಮಾನ್​ ಖಾನ್​ ಜೊತೆ ಹೊಸ ಸಿನಿಮಾ ಅನೌನ್ಸ್​!

ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಈಗ ಹಿಂದಿ(Hindi) ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಅದೂ ಅಲ್ಲಿನ ಸೂಪರ್ ಸ್ಟಾರ್ ಸಲ್ಮಾನ್ ಖಾನ್(Salman Khan) ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ವಿಕ್ಟರಿ ಫ್ಯಾನ್ಸ್​ ಸಖತ್​​  ಥ್ರಿಲ್(Thrill)​ ಆಗಿದ್ದಾರೆ.

ಸಲ್ಮಾನ್​ ಖಾನ್​, ವಿಕ್ಟರಿ ವೆಂಕಟೇಶ್​

ಸಲ್ಮಾನ್​ ಖಾನ್​, ವಿಕ್ಟರಿ ವೆಂಕಟೇಶ್​

  • Share this:
ವಿಕ್ಟರಿ ವೆಂಕಟೇಶ್(Victory Venkatesh)​​ ಈ ಹೆಸರು ಕೇಳಿದರೆ ಸಿನಿರಸಿಕರು ಹೇಳೋದು ಒಂದೇ ಮಾತು. ಅದು ಫ್ಯಾಮಿಲಿ(Family) ಪೂರ್ತಿ ಕೂತು ನೋಡುವ ನಟ ಅಂದರೆ ಅದು ವಿಕ್ಟರಿ ವೆಂಕಟೇಶ್​ ಅವರ ಚಿತ್ರಗಳು ಅಂತ. ಟಾಲಿವುಡ್(Tollywood)​ನಲ್ಲಿ ವೆಂಕಟೇಶ್​ ಸೂಪರ್​ ಸ್ಟಾರ್(Super Star)​. ದಕ್ಷಿಣ ಭಾರತದ ನಟರು ಬಾಲಿವುಡ್‌ನಲ್ಲಿ ನಟಿಸುವುದು ಅಪರೂಪ. ಅದರಲ್ಲಿಯೂ ಸ್ಟಾರ್ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಬಹಳ ವಿರಳ. ಮಾಡಿದರೂ ಕೇವಲ ಒಂದೆರಡು ನಿಮಿಷದ ಅತಿಥಿ ಪಾತ್ರವಷ್ಟೆ. ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಲ್ಲ. ಆದರೆ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಈಗ ಹಿಂದಿ(Hindi) ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಅದೂ ಅಲ್ಲಿನ ಸೂಪರ್ ಸ್ಟಾರ್ ಸಲ್ಮಾನ್ ಖಾನ್(Salman Khan) ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ವಿಕ್ಟರಿ ಫ್ಯಾನ್ಸ್​ ಸಖತ್​​  ಥ್ರಿಲ್(Thrill)​ ಆಗಿದ್ದಾರೆ. ಈ ಹಿಂದಯೇ ವಿಕ್ಟರಿ ವೆಂಕಟೇಶ್​ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 25 ವರ್ಷದ ಬಳಿಕ ಈಗ ಪ್ರಧಾನ ನಟರಾಗಿ ಬಾಲಿವುಡ್​ಗೆ ಕಮ್​ಬ್ಯಾಕ್(Comebcak)​ ಮಾಡುತ್ತಿದ್ದಾರೆ. ಅದೂ ಸಲ್ಲು ಭಾಯ್​ ಜೊತೆ, ಹೀಗಾಗಿ ಅವರ ಅಭಿಮಾನಗಳಲ್ಲಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಅಂತ ಕುತೂಹಲ ಹೆಚ್ಚಾಗಿದೆ. 

ಸಲ್ಲು - ವೆಂಕಟೇಶ್​ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ

ಸಲ್ಮಾನ್‌ರ ಹೊಸ ಸಿನಿಮಾವು ಮುಂಬೈ-ಹೈದರಾಬಾದ್‌ ಪ್ರದೇಶಗಳ ಇಬ್ಬರು ನಾಯಕರ ಸುತ್ತ ನಡೆಯುವ ಕತೆಯಾಗಿದ್ದು, ಹಾಗಾಗಿಯೇ ವೆಂಕಟೇಶ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ಎದುರಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ವೆಂಕಟೇಶ್‌ಗೆ ನಾಯಕಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ವೆಂಕಟೇಶ್‌ಗೆ ನಾಯಕಿ ಯಾರಾಗಲಿದ್ದಾರೆ ಎಂಬುದಿನ್ನೂ ಖಾತ್ರಿಯಾಗಿಲ್ಲ. ಆದರೆ, ಪೂಜಾ ಹೆಗ್ಡೆ ಸಲ್ಮಾನ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಲಕ್​ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ಮತ್ತೊಂದು ಹೊಸ ದಾಖಲೆ ಬರೆದ `ಅಖಂಡ’: ಬಾಲಯ್ಯನ ಫ್ಯಾನ್ಸ್​ ಫುಲ್​ ದಿಲ್​ಖುಷ್​!

ಟೈಗರ್​ 3 ಶೂಟಿಂಗ್​ ಮುಗಿಸಿರೋ ಸಲ್ಮಾನ್​ ಖಾನ್​ 

ಸಲ್ಮಾನ್ ಖಾನ್ ಇದೀಗಷ್ಟೆ 'ಟೈಗರ್ 3' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಹೊಸ ಸಿನಿಮಾಕ್ಕೆ ತಯಾರಾಗಿದ್ದಾರೆ. ಈ ಸಿನಿಮಾವನ್ನು ಸಲ್ಮಾನ್ ಖಾನ್‌ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲಾ ನಿರ್ಮಾಣ ಮಾಡಲಿದ್ದು, ಸಿನಿಮಾ ಆಕ್ಷನ್ ಕಾಮಿಡಿ ಸಿನಿಮಾ ಆಗಿರಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ವೆಂಕಟೇಶ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ವೆಂಕಟೇಶ್ ಹಳೆಯ ಸ್ನೇಹಿತರು. ಇಬ್ಬರೂ ಒಟ್ಟಿಗೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಸಿಎಲ್ ನಡೆದಾಗಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಇವರ ಕಾಂಬಿನೇಷನ್​ ಬಿಗ್​ ಸ್ಕ್ರೀನ್​ನಲ್ಲಿ ಕಮಾಲ್​ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ನೋಡಿ : ಒಂದು ಸೆಲ್ಫಿಗಾಗಿ ರಾಧಿಕಾರನ್ನೇ ಸತಾಯಿಸಿದ ರಾಕಿಂಗ್​ ಸ್ಟಾರ್​​ ಯಶ್​: ಫೋಟೋಗಳು ವೈರಲ್​!

ಗಾಡ್​ಫಾದರ್​ ಚಿತ್ರದಲ್ಲಿ ಸಲ್ಲು ಗೆಸ್ಟ್​!

ಇದರ ಮಧ್ಯೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ 'ಗಾಡ್ ಫಾದರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ನಟಿಸುವುದು ಖಾತ್ರಿಯಾಗಿದೆ. ಇದರ ಜೊತೆಗೆ 'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಸಲ್ಮಾನ್ ಖಾನ್ ಅವರೇ ಪ್ರಧಾನ ಅತಿಥಿ ಸಹ ಅಂತೆ. ಒಟ್ಟಾರೆ ಸಲ್ಮಾನ್ ಖಾನ್ ಇತ್ತೀಚೆಗೆ ತೆಲುಗು ಚಿತ್ರರಂಗದೊಟ್ಟಿಗೆ ಸಂಬಂಧ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಸಲ್ಮಾನ್​ ಖಾನ್​​ಗೆ ಕೇವಲ ಬಾಲಿವುಡ್​ನಲ್ಲಷ್ಟೇ ಅಲ್ಲದೆ ಎಲ್ಲ ಭಾಷೆಯ ಅಭಿಮಾನಿಗಳಿದ್ದಾರೆ. ಭಜರಂಗಿ ಭಾಯ್​ಜಾನ್​ ಬಳಿಕ ಗೆಲುವು ನೋಡಲು ಸಲ್ಮಾನ್​ ಖಾನ್​ ಕಾಯುತ್ತಿದ್ದಾರೆ.
Published by:Vasudeva M
First published: