ಬಹಳ ಸಮಯದ ನಂತರ ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ನಂತರ ಸಿನಿಮಾಗಾಗಿ ಪವರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. 2018ರಲ್ಲಿ ತೆರೆಕಂಡಿದ್ದ 'ಅಜ್ಞಾವಾಸಿ ಪವನ್ ಅಭಿನಯದ ಕೊನೆಯ ಚಿತ್ರ.
ಆ ಸಿನಿಮಾದ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗಿ ಹೋಗಿದ್ದರು. ಬಾಕ್ಸಾಫಿಸ್ನಲ್ಲಿ 'ಅಜ್ಞಾತವಾಸಿ' ಸಿನಿಮಾ ಮುಗ್ಗರಿಸಿದ ನಂತರ ಪವನ್ ಮತ್ತೆ ಯಾವಾಗ ಬಣ್ಣ ಹಚ್ಚಲಿದ್ದಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈಗ ಪವನ್ ಫ್ಯಾನ್ಸ್ಗೆ ಸಿಹಿ ಸುದ್ದಿ ಸಿಕ್ಕಿದೆ.
![elugu Remake of Pink with Pawan Kalyan Starts Rolling]()
ಚಿತ್ರೀಕರಣದ ಸೆಟ್ನಲ್ಲಿ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಅಭಿನಯದ ಈ ಹೊಸ ಸಿನಿಮಾ ಹಿಂದಿಯಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ 'ಪಿಂಕ್' ರಿಮೇಕ್. 'ಪಿಂಕ್'ನಲ್ಲಿ ಅಮಿತಾಭ್ ಅಭಿನಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ನಿರ್ವಹಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕಳೆದ ಸೋಮವಾರದಿಂದ ಆರಂಭವಾಗಿದೆ.
![elugu Remake of Pink with Pawan Kalyan Starts Rolling]()
ಚಿತ್ರೀಕರಣದ ಸೆಟ್ನಲ್ಲಿ ಪವನ್ ಕಲ್ಯಾಣ್
![elugu Remake of Pink with Pawan Kalyan Starts Rolling]()
ಚಿತ್ರೀಕರಣದ ಸೆಟ್ನಲ್ಲಿ ಪವನ್ ಕಲ್ಯಾಣ್
ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ಸೆಟ್ನಿಂದ ಪವನ್ ಅವರ ಚಿತ್ರಗಳು ಲೀಕ್ ಆಗಿದ್ದು, ಸೋಮವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಸಿಸುತ್ತಿದ್ದಾರೆ. ಇದರಲ್ಲಿ ಅಂಜಲಿ ಹಾಗೂ ನಿವೇತಾ ಥಾಮಸ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಸಂಭಾಷಣೆ ಬರೆಯಲಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಉಳಿದ ತಾರಾಗಣದ ಪ್ರಕಟಣೆ ಆಗಬೇಕಿದೆ.
Manvita: ಏನಾಯ್ತು ಕೆಂಡ ಸಂಪಿಗೆಯ ಮಾನ್ವಿತಾಗೆ...!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ