Pawan Kalyan: ಕುಕ್ಕೆ ಸುಬ್ರಮಣ್ಯಕ್ಕೆ ಪವನ್​ ಕಲ್ಯಾಣ್​ ಭೇಟಿ​​.. ಯಾವ ದೋಷಕ್ಕೆ ಪೂಜೆ ಮಾಡಿಸಿದ್ರು ನೀವೇ ನೋಡಿ

ಪವನ್​ ಕಲ್ಯಾಣ್​ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಕ್ಕೆ ಸುಬ್ರಮಣ್ಯನಿಗೆ ವಿಶೇಷ ಪೂಜೆ  ಸಲ್ಲಿಸಿದ್ದಾರೆ.

ಕುಕ್ಕೆಯಲ್ಲಿ ಪವನ್​ ಕಲ್ಯಾಣ್​

ಕುಕ್ಕೆಯಲ್ಲಿ ಪವನ್​ ಕಲ್ಯಾಣ್​

  • Share this:
ಪವನ್​ ಕಲ್ಯಾಣ್(Pawan Kalyan)​ ತೆಲುಗು ಚಿತ್ರರಂಗದ ಸೂಪರ್​ ಸ್ಟಾರ್(Super Star)​.. ಅವರ ಹೆಸರೇ ಅಭಿಮಾನಿಗಳಿಗೆ ಏನೋ ಉತ್ಸಾಹ. ಹೌದು, ಪವರ್​ ಸ್ಟಾರ್​(Power Star) ಪವನ್ ಕಲ್ಯಾಣ್​ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ಪ್ರತಿ ಸಿನಿಮಾ ಬಿಡುಗಡೆಯಾದಗ ಹಬ್ಬದಂತೆ ಸೆಲೆಬ್ರೆಟ್​ ಮಾಡುತ್ತಾರೆ. ಪವರ್​ ಸ್ಟಾರ್​ ಸ್ಟೈಲ್(Style)​, ಮ್ಯಾನರಿಸಂಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಇತ್ತೀಚೆಗೆ ಅವರ ಭೀಮ್ಲಾ ನಾಯಕ್(Bhimla Nayak)​ ಸಿನಿಮಾ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಸಿನಿಮಾ ಈಗ ಒಟಿಟಿ(Ott)ಯಲ್ಲೂ ಪ್ರಸಾರಕಂಡು ಮೆಚ್ಚುಗೆ ಪಡೆದುಕೊಂಡಿದೆ. ಈಗ ಪವನ್​ ಕಲ್ಯಾಣ್​ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಕ್ಕೆ ಸುಬ್ರಮಣ್ಯನಿಗೆ ವಿಶೇಷ ಪೂಜೆ  ಸಲ್ಲಿಸಿದ್ದಾರೆ.

ಪವನ್​ ಕಲ್ಯಾಣ್​ಗೆ ಸನ್ಮಾನಿಸಿದ ಆಡಳಿತ ಮಂಡಳಿ!

ಕುಕ್ಕೆ ಸುಬ್ರಮಣ್ಯ ಆಡಳಿತ ಮಂಡಳಿಯಿಂದ ಪವನ್​ ಕಲ್ಯಾಣ್​ಗೆ ವಿಶೇಷ ಸನ್ಮಾನ ಮಾಡಲಾಗಿದೆ. ಇದೇ ವೇಳೆ ಪವನ್​ ಕಲ್ಯಾಣ್​​ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ‘ಭೀಮ್ಲಾ ನಾಯಕ್​’ ಸಿನಿಮಾದಲ್ಲಿ ಪವನ್​ ಕಲ್ಯಾಣ್​ಗೆ ಜತೆಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದರು. ರಾಣಾ (Rana) ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಆಶ್ಲೇಷ ಬಲಿ ಪೂಜೆ ಮಾಡಿಸಿದ ಪವನ್​ ಕಲ್ಯಾಣ್​!

ತೆಲುಗು ನಟ, ರಾಜಕಾರಣಿ ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ, ಕ್ಷೇತ್ರಲ್ಲಿ ಆಶ್ಲೇಷ ಬಲಿ ಪೂಜೆ, ಆದಿ ಸುಬ್ರಹ್ಮಣ್ಯದ ಹುತ್ತಕ್ಕೆ ವಸ್ತ್ರ ಸಮರ್ಪಿಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯಿಂದ ನಟ ಪವನ್ ಕಲ್ಯಾಣ್ ಅವರನ್ನು ಸನ್ಮಾನಿಸಲಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ‌ಅವರು  ಸನ್ಮಾನಿಸಿದರು. ಪ್ರತೀ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯವನ್ನು ಅನುಸರಿಸರಿಸುವಂತೆ ಆಗಬೇಕು. ಇದರಿಂದ ಪರಿಸರ ಸ್ವಚ್ಛತಾ ಜಾಗೃತಿ ಸಾಧ್ಯ ಎಂದು ಅವರು ಹೇಳಿದರು.


ಇದನ್ನೂ ಓದಿ: ಆಸ್ಕರ್​ ಗೆಲ್ಲೋದ್​ ಬೇಡ.. ನಾಮಿನೆಟ್​ ಆದ್ರೆ ಸಾಕು.. ಇಷ್ಟೆಲ್ಲಾ ಸಿಗುತ್ತೆ! ಯಪ್ಪಾ, ಇದೆಲ್ಲಾ ಕೊಡ್ತಾರಾ ಗುರೂ

ಒಟಿಟಿಯಲ್ಲೂ ಭೀಮ್ಲಾ ನಾಯಕ್​ ಸದ್ದು!

ಟಾಲಿವುಡ್‌ನ (Tollywood) ಬಹು ನಿರೀಕ್ಷಿತ ಸಿನಿಮಾ (Cinema), ತೆಲುಗಿನ (Telugu) ಪವರ್ ಸ್ಟಾರ್ (Power Star) ಎಂದೇ ಖ್ಯಾತಿಯಾದ ಪವನ್ ಕಲ್ಯಾಣ್ (Pawan Kalyan) ಅವರು ನಟಿಸಿರುವ 'ಭೀಮ್ಲಾ ನಾಯಕ್' (Bheemla Nayak) ಚಿತ್ರವು ಫೆಬ್ರವರಿ 25 ರಂದು ರಿಲೀಸ್ ಆಗಿತ್ತು. ಮಾರ್ಚ್​ 24ರಿಂದ ಈ ಸಿನಿಮಾ ಡಿಸ್ನಿ ಹಾಟ್​ ಸ್ಟಾರ್​ ನಲ್ಲಿ ಲಭ್ಯವಿದೆ. ಕೇವಲ 30 ದಿನಗಳ ಅಂತರದಲ್ಲಿ ಪವನ್​ ಕಲ್ಯಾಣ್​ ಸಿನಿಮಾ ಒಟಿಟಿಗೆ ಬಂದಿದೆ.

ಇದನ್ನೂ ಓದಿ: ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

ಭೀಮ್ಲಾ ನಾಯಕ್ ಚಿತ್ರವು ಒಟ್ಟಿನಲ್ಲಿ ನಟ ಪವನ ಕಲ್ಯಾಣ್ ಎಷ್ಟು ದೊಡ್ಡ ನಟ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅವರ ಟ್ರೇಡ್ ಮಾರ್ಕ್ ಚೇಷ್ಟೆಗಳು ಈ ಚಿತ್ರದಲ್ಲಿ ನೀವು ನೋಡಬಹುದು ಮತ್ತು ಅವರ ಸರಳ ನೃತ್ಯ ಹೆಜ್ಜೆಗಳು ಅಭಿಮಾನಿಗಳ ಮನಸೆಳೆಯುವಂತೆ ಇವೆ.

ಸರ್ಪ ಸಂಸ್ಜಾರ, ಆಶ್ಲೇಷ ಬಲಿಗೆ ಕುಕ್ಕೆ ಸುಬ್ರಮಣ್ಯ ಫೇಮಸ್​!

ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸೇವೆಗಳು. ಸರ್ಪ ಹತ್ಯೆ, ನಾಗದೋಷ ಪರಿಹಾರಕ್ಕಾಗಿ ಈ ಸೇವೆಗಳನ್ನು ಜನರು ಸಲ್ಲಿಸುತ್ತಾರೆ. ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳೂ ಸಮರ್ಪಣೆಯಾಗುತ್ತವೆ. ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ.
Published by:Vasudeva M
First published: