RRR ಚಿತ್ರದಲ್ಲಿ ರಾಮ್​ಚರಣ್​- ಜೂ NTR ‘ಗೇ‘ನಾ? ಇದೇನ್ ಗುರು ಹಿಂಗಾ ಹೇಳೋದು?

RRR ಚಿತ್ರವನ್ನು ಓಟಿಟಿ ಅಲ್ಲಿ ನೋಡಿದ ವಿದೇಶಿಗರು ಈ ಚಿತ್ರವನ್ನು 'ಗೇ‘ ಚಿತ್ರವೆಂದು ಹೇಳುತ್ತಿದ್ದು, ಈ ವಿಚಾರವು ಸಖತ್ ವೈರಲ್ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಸಿನಿಮಾ (RRR Cinema) ರಿಲೀಸ್ (Release) ಆಗಿ ಪ್ರಪಂಚದಾದ್ಯಂತ ಧೂಳಿಬ್ಬಿಸಿದ್ದು ಎಲ್ಲರಿಗೂ ಗೊತ್ತಿದೆ. ರಾಜಮೌಳಿ (Rajamouli), ಜ್ಯೂ. ಎನ್‌ಟಿಆರ್ (Jr. NTR) ಹಾಗೂ ರಾಮ್‌ಚರಣ್ (Ramcharan) ಕಾಂಭಿನೇಷನ್ ತೆರೆ ಮೇಲೆ ಕಮಾಲ್ ಮಾಡಿದ್ದು ಇದೀಗ ಹಳೆಯ ಸುದ್ದಿ. ಅಲ್ಲದೇ ಬರೀ ಆಂಧ್ರ (Andhra), ತೆಲಂಗಾಣವಷ್ಟೇ (Telangana) ಅಲ್ಲದೇ ಭಾರತದೆಲ್ಲೆಡೆ ಸಿನಿಮಾ ರಿಲೀಸ್ ಆಗಿ ದಾಖಲೆಗಳನ್ನು ಮಾಡಿದೆ. ಇದರ ನಡುವೆ ಇದೀಗ ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ವಿಚಾರಕ್ಕೆ ಹೆಚ್ಚಾಗಿ ವಿದೇಶಿಗರು ಪ್ರತಿಕ್ರಿಯಿಸುತ್ತಿದ್ದು, ಅದರಲ್ಲಿಯೂ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ಸಹ ಟ್ವೀಟ್ ಮಾಡಿದ್ದು ಮತ್ತಷ್ಟು ಹೆಚ್ಚು ವೈರಲ್ ಆಗುತ್ತಿದೆ.

RRR ಒಂದು ‘ಗೇ‘ ಚಿತ್ರವೆಂದು ವಿದೇಶಿಗರು:

ಹೌದು, ಚಿತ್ರವು ಈಗಾಗಲೇ ಜೀ5 ಮತ್ತು ನೆಟ್​ಫ್ಲಿಕ್ಸ್ ಗಳಲ್ಲಿ ಬಿಡುಗಡೆಯಾಗಿದೆ. ಓಟಿಟಿ ಅಲ್ಲಿ ನೋಡಿದ ವಿದೇಶಿಗರು ಈ ಚಿತ್ರವನ್ನು ಗೇ ಚಿತ್ರವೆಂದು ಹೇಳುತ್ತಿದ್ದು, ಈ ವಿಚಾರವು ಸಖತ್ ವೈರಲ್ ಆಗುತ್ತಿದೆ. ಇದೊಂದು ಗೇ ಕಥೆಯುಳ್ಳ ಚಿತ್ರವಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಜ್ಯೂ NTR ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿದೇಶಿಗರು ಬರೆದುಕೊಂಡಿದ್ದಾರೆ. ಈ ಮೂಲಕ ಭಾರತದ ಬಿಗ್ ಹಿಟ್​ ಚಿತ್ರದ ಕುರಿತು ವಿದೇಶಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದೊಂದು ಸಲಿಂಗ ಪ್ರೇಮ ಎಂದ RGV:

ಕೇವಲ ವಿದೇಶಿಗರು ಮಾತ್ರವಲ್ಲದೇ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರೂ ಸಹ ಈ ಕುರಿತು ಟ್ವೀಟ್ ಮಾಡಿದ್ದು, ‘ಇದೊಂದು ಸಲಿಂಗ ಪ್ರೇಮ ಎನ್ನುವಂತಹ ಕಥೆಯನ್ನು ಈ ಸಿನಿಮಾ ಹೊಂದಿದೆ‘ ಎಂಬ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಈ ವಿಚಾರಕ್ಕೆ ಮತ್ತಷ್ಟು ಬೂಸ್ಟ್ ನೀಡುವ ಮೂಲಕ ಎಲ್ಲಡೆ ವೈರಲಾ ಆಗುವಂತೆ ಮಾಡಿದ್ದಾರೆ.

ಇಬ್ಬರೂ ಒಟ್ಟೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ:

ಆರ್​ಆರ್​ಆರ್​ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಮತ್ತು ರಾಮ್ ಚರಣ್ ತೇಜ್ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಹೆಚ್ಚಾಗಿ ಒಬ್ಬರಿಗಾಗಿ ಒಬ್ಬರು ಫೈಟ್ ಮಾಡುತ್ತಾರೆ. ಜೊತೆಯಾಗಿ ನೃತ್ಯ ಮಾಡುತ್ತಾರೆ. ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳುತ್ತಾರೆ. ಹೀಗಾಗಿ ಇದೊಂದು ಸಲಿಂಗ ಪ್ರೇಮಕಥೆ ಎಂದು ಅನೇಕ ವಿದೇಶಿಗರು ಟ್ವೀಟ್ ಮಾಡಿದ್ದಾರೆ.

 1 ನಿಮಿಷಕ್ಕೆ 1000 ಮಿಲಿಯನ್ಸ್ ವೀಕ್ಷಣೆ 

ಆರ್ ಆರ್ ಆರ್ ಸಿನಿಮಾ ಭಾರತಿಯ ಚಿತ್ರರಂಗದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿಕ್ಕ ಸಿಕ್ಕ ರೆಕಾರ್ಟ್​ಗಳನ್ನು ಧೂಳಿಪಟ ಮಾಡಿದೆ. ಈಗ ಝಿ 5ನಲ್ಲಿ ಸಹ ಜನರಿಗೆ ಮೋಡಿ ಮಾಡುತ್ತಿದ್ದು, 1 ನಿಮಿಷಕ್ಕೆ ಬರೋಬ್ಬರಿ 1000 ಮಿಲಿಯನ್ಸ್ ವೀಕ್ಷಣೆ ಪಡೆದ ಹೊಸ ದಾಖಲೆ ಮಾಡಿದೆ.   ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ನಾಲ್ಕು ಭಾಷೆಯಲ್ಲಿ ಸಹ ಮೋಡಿ ಮಾಡಿದ್ದು, ಹೆಚ್ಚಿನ ಜನರು ಈಗಲೂ ಇದನ್ನು ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: RRR Record: ಒಟಿಟಿಯಲ್ಲಿ ಆರ್​ಆರ್​ಆರ್​ ಕಮಾಲ್​, 1 ನಿಮಿಷದಲ್ಲಿ 1000 ಮಿಲಿಯನ್ಸ್ ವೀವ್ಸ್​

1000 ಕೋಟಿ ಕ್ಲಬ್ ಸೇರಿದ ಚಿತ್ರ:

ನಿರ್ದೇಶಕ ಎಸ್‌ಎಸ್ ರಾಜಮೌಳಿ ಕೈ ಯಲ್ಲಿ ಮೂಡಿಬಂದ 'RRR' ಅದ್ಭುತ ಸಿನಿಮಾವು ವಿಶ್ವಾದ್ಯಂತ ಬಿಡುಗಡೆಯಾದ ಕೇವಲ 16 ದಿನಗಳಲ್ಲಿ 1000 ಕೋಟಿ ಕ್ಲಬ್‌ ಸೇರಿದ್ದು ಇತಿಹಾಸ ಎಂದು ಹೇಳಬಹುದಾಗಿದೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ 'RRR' ಚಿತ್ರ 20 ನೇ ಶತಮಾನದ ಆರಂಭದ ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸುತ್ತ ಸುತ್ತುವ ಕಾಲ್ಪನಿಕ ಕಾಲದ ಸಿನಿಮಾ ಇದಾಗಿದೆ.
Published by:shrikrishna bhat
First published: