'ಗೀತ ಗೋವಿಂದಂ' ಸಿನಿಮಾ ಕಪ್ಪುಬಿಳುಪಿನ ಟೀಸರ್​ಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ​!

news18
Updated:July 23, 2018, 3:53 PM IST
'ಗೀತ ಗೋವಿಂದಂ' ಸಿನಿಮಾ ಕಪ್ಪುಬಿಳುಪಿನ ಟೀಸರ್​ಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ​!
news18
Updated: July 23, 2018, 3:53 PM IST
ನ್ಯೂಸ್​ 18 ಕನ್ನಡ 

ಹಾಡು ಹಾಗೂ ಪೋಸ್ಟರ್​ನಿಂದಲೇ ಟಾಲಿವುಡ್​ನಲ್ಲಿ ಸದ್ದು ಮಾಡುತ್ತಿರುವ ತೆಲುಗಿನ 'ಗೀತ ಗೋವಿಂದಂ' ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್​ಗೆ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ.

'ಅರ್ಜುನ್​ ರೆಡ್ಡಿ' ಖ್ಯಾತಿಯ ವಿಜಯ್​ ದೇವರಕೊಂಡ ಹಾಗೂ ಕನ್ನಡದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನಿಮಾದ ಟೀಸರ್​ನ ಬಹುಪಾಲನ್ನು ಹಳೇ ಸಿನಿಮಾದಂತೆ ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಪರಶುರಾಮ್​ ನಿರ್ದೇಶನದ ಈ ಸಿನಿಮಾವನ್ನು ಬನ್ನಿ ವಾಸ್​ ಅವರು ನಿರ್ಮಿಸುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿತ್ತು. ಈ ಹಾಡೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡಿತ್ತು. 
Loading...

 
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ