Casting Couch: ಕನ್ನಡದ ನಟಿಯರು ಅವಕಾಶಕ್ಕಾಗಿ ಹೀಗೆಲ್ಲ ಮಾಡ್ತಾರಂತೆ! ಚಂದನವನದ ಬಗ್ಗೆ ತೆಲುಗು ನಿರ್ದೇಶಕನಿಂದ ಕೊಳಕು ಹೇಳಿಕೆ

"ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಅಂತ ತೆಲುಗು ಸಂದರ್ಶನವೊಂದರಲ್ಲಿ ಈ ನಿರ್ದೇಶಕ ಹೇಳಿದ್ದಾರೆ.

ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ

ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ

  • Share this:
ತೆಲುಗು ಸಿನಿಮಾ ನಿರ್ದೇಶಕರೊಬ್ಬರು (Telugu Cinema Director) ಕನ್ನಡ ಚಿತ್ರರಂಗ (Kannada Film Industry), ಚಂದನವನದ ನಟ (Hero), ನಟಿಯರ (Heroin) ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದಾರೆ.  ಕೆಲವು ಸಿನಿಮಾ ಮಾಡಿರುವ ತೆಲುಗು ನಿರ್ದೇಶಕ ಗೀತಕೃಷ್ಣ (Geeth Krishna) ಎಂಬುವರು ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಕಾಮೆಂಟ್ (Comment) ಮಾಡಿದ್ದಾರೆ. "ಕಾಸ್ಟಿಂಗ್ ಕೌಚ್ (casting couch) ವಿಚಾರದಲ್ಲಿ ತಮಿಳು ಚಿತ್ರರಂಗದವರು (Tamil Film Industry) ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ” ಅಂತ ಗೀತಕೃಷ್ಣ ಆರೋಪಿಸಿದ್ದಾರೆ. ಇತ್ತೀಚಿಗೆ ತೆಲುಗು ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, “ಕನ್ನಡ ಸಿನಿಮಾ ರಂಗದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಅವಕಾಶ ಬೇಕು ಅಂತ ಮಂಚ ಏರುವುದು ಅಲ್ಲಿ ಕಾಮನ್ ಆಗಿದೆ” ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಅವರ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕಾಮನ್

ಚಂದನವನದ ಬಗ್ಗೆ ಟಾಲಿವುಡ್ ನಿರ್ದೇಶಕ ಗೀತಕೃಷ್ಣ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಕಾಮನ್ ಅಂತ ಹೇಳಿದ್ದಾರೆ. ಅವಕಾಶ ಬೇಕು ಅಂತ ಮಂಚ ಏರುವುದು ಕನ್ನಡದಲ್ಲಿ ಕಾಮನ್ ಆಗಿಬಿಟ್ಟಿದೆ. ಹೀಗಾಗಿ ನಾನು 20 ವರ್ಷಗಳ ಹಿಂದೆ ಕನ್ನಡದ ಸಹವಾಸ ಬಿಟ್ಟೆ. ಸಿನಿಮಾ ಆಫರ್‌ಗಳಿಗೋಸ್ಕರ ನಟಿಯರು ಮಂಚ ಏರುತ್ತಾರೆ, ಸಂಗೀತ ನಿರ್ದೇಶಕರು ಕೂಡ ಗಾಯಕಿಯರ ಜೊತೆ ಮಲಗುತ್ತಾರೆ. ಸಾಫ್ಟ್‌ವೇರ್ ಲೋಕದಲ್ಲಿಯೂ ಹೀಗೆ ನಡೆಯುತ್ತದೆ" ಅಂತ ಲಘು ಹೇಳಿಕೆ ನೀಡಿದ್ದಾರೆ.



“ನನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ”

"ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಅಂತ ತೆಲುಗು ಸಂದರ್ಶನವೊಂದರಲ್ಲಿ ಗೀತಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: Rocking Star Yash ಮುಂದಿನ ಸಿನಿಮಾ ಯಾವುದು? 'ಕೆಜಿಎಫ್‌ 2' 50ನೇ ದಿನದ ಬಳಿಕ ಸಿಗುತ್ತಾ ಉತ್ತರ?

“ಆಗಿನ ಹಾಗೂ ಈಗಿನ ಕಾಲದ ನಟಿಯರ ನಡುವಿನ ವ್ಯತ್ಯಾಸ”

ಇನ್ನು ಸಂದರ್ಶನದಲ್ಲಿ ಮುಂದುವರಿದು ಮಾತನಾಡಿದ ಗೀತಕೃಷ್ಣ, ಆಗಿನ ಚಿತ್ರರಂಗಕ್ಕೂ ಮತ್ತು ಈಗೀನ ಕಾಲದ ಚಿತ್ರರಂಗಕ್ಕೂ ಇರುವ ವ್ಯತ್ಯಾಸವೇನು ಎಂದು ಕೇಳಿದ ಪ್ರಶ್ನೆಗೆ, ಆಗಿನ ನಟಿಯರು ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುತ್ತಿದ್ದರು. ಈಗಿನ ಅವಕಾಶಕ್ಕಾಗಿ ಮಂಚ ಏರುತ್ತಾರೆ. ಬಹುತೇಕ ನಟಿಯರು ಲೈಂಗಿಕ ಸೇವೆ ಒದಿಸಿಯೇ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ.

“ಸಿನಿಮಾ ಕಂಟೆಂಟ್ ಚೆನ್ನಾಗಿದ್ದರೆ ಓಡುತ್ತದೆ”

ಇನ್ನು "RRR, KGF 2 ಸಿನಿಮಾ ತಲುಪಿದ ರೀತಿ ನಮ್ಮ ಸಿನಿಮಾ ತಲುಪಬೇಕು ಎಂದರೆ ಸಿನಿಮಾ ಕಂಟೆಂಟ್ ಚೆನ್ನಾಗಿಬೇಕು. 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬಾಬು ಹ್ಯಾಂಡ್‌ಸಮ್ ಆಗಿದ್ದರೂ ಕೂಡ ಕಂಟೆಂಟ್ ಚೆನ್ನಾಗಿಲ್ಲ. ಆಚಾರ್ಯ ಸಿನಿಮಾದಲ್ಲಿಯೂ ಕಂಟೆಂಟ್ ಚೆನ್ನಾಗಿಲ್ಲ. ವಯಸ್ಸಿಗೆ ತಕ್ಕಂತೆ ಪಾತ್ರ ಆಯ್ಕೆ ಮಾಡಿಕೊಳ್ಳಬೇಕು ಆದರೆ 'ಮೆಗಾಸ್ಟಾರ್' ಚಿರಂಜೀವಿ ಅವರು ವಯಸ್ಸಿಗೆ ತಕ್ಕಂತಹ ಪಾತ್ರ ಆಯ್ಕೆ ಮಾಡಿಕೊಳ್ಳುವುದಿಲ್ಲ. ನಟ ವೆಂಕಟೇಶ್ ಅವರು ಸೂಕ್ತವಾದ ಪಾತ್ರ ಆಯ್ಕೆ ಮಾಡಿಕೊಂಡು, ಪ್ರೇಕ್ಷಕರನ್ನು ನಗಿಸುತ್ತಾರೆ " ಅಂತ ಗೀತಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: Hombale Films: ಕೆಜಿಎಫ್ ಗೆದ್ದಾಯ್ತು, ಈಗ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ರೆಡಿಯಾದ ಹೊಂಬಾಳೆ ಫಿಲಂಸ್, ಶೀಘ್ರದಲ್ಲೇ ಘೋಷಣೆ!

ಯಾರು ಈ ಗೀತಕೃಷ್ಣ?

ಗೀತ ಕೃಷ್ಣ ತೆಲುಗಿನ ಸಿನಿಮಾ ನಿರ್ದೇಶಕ. 'ಸಂಕೀರ್ತನ', 'ಕೋಕಿಲ', 'ಟೈಮ್', 'ಕಾಫಿ ಬಾರ್' ಮುಂತಾದ ಕೆಲ ಸಿನಿಮಾ ಸೇರಿದಂತೆ 8 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಾಗಾರ್ಜುನ, ರಮ್ಯಾಕೃಷ್ಣ ಅಭಿನಯಿಸಿದ್ದ ಸಂಕೀರ್ತನ ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಇದಕ್ಕೆ  ನಿರ್ದೇಶಕರ ಅತ್ಯುತ್ತಮ ಮೊದಲ ಚಲನಚಿತ್ರಕ್ಕಾಗಿ ಕೊಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದರು.
Published by:Annappa Achari
First published: